Advertisement

Category: ದಿನದ ಪುಸ್ತಕ

‘ಅಮ್ಮನ ಕೋಣೆಗೆ ಏಸಿ’ ಕೃತಿಗೆ ಅರವಿಂದ ಚೊಕ್ಕಾಡಿ ಬರೆದ ಮುನ್ನುಡಿ

“ಲೇಖಕ ವೈಯಕ್ತಿಕವಾಗಿ ಏನೇ ಆಗಿದ್ದರೂ ಸಾಮಾಜಿಕವಾಗಿ ಆತನಿಗಿರುವ; ಸಮಾಜ ಸ್ವೀಕರಿಸುವ ಆತನ ‘ಸ್ಥಿತಿ’ಯು ಆತನ ಕೃತಿಯನ್ನು ಸಮಾಜವು ಬರಮಾಡಿಕೊಳ್ಳುವುದರಲ್ಲಿ ನಿರ್ಧಾರಕ ಅಂಶವಾಗಿರುತ್ತದೆ ಎಂಬ ನೆಲೆಯಲ್ಲಿ ಈ ಕೃತಿಯ ಇನ್ನೊಂದು ಮಗ್ಗುಲನ್ನು ನಾನು ಕಾಣಿಸಬೇಕಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಕುಕ್ಕಿಲ ಅವರು ತಾನು ಮುಸ್ಲಿಂ ಅಲ್ಲ; ಜಾತ್ಯತೀತ ಎಂದು ಘೋಷಿಸಿಕೊಂಡವರಲ್ಲ.”
ಏ.ಕೆ. ಕುಕ್ಕಿಲ ಬರೆದ ‘ಅಮ್ಮನ ಕೋಣೆಗೆ ಏಸಿ’ ಕಥಾ ಸಂಕಲನದ ಕುರಿತು ಅರವಿಂದ ಚೊಕ್ಕಾಡಿ ಬರೆದ ಮುನ್ನುಡಿ

Read More

ರಮೇಶ ಅರೋಲಿ ಪುಸ್ತಕಕ್ಕೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ

“ಈ ಎಲ್ಲ ಯುವಕವಿಗಳು ಬಂಡಾಯದ ಕುದಿಯನ್ನು ಆರಗೊಡದೆ ಕಲಾತ್ಮಕ ತೋಡುಗಾಲುವೆಗಳನ್ನು ನಿರ್ಮಿಸಿಕೊಂಡವರು ಎಂದೆ, ಹೌದು. ಅದರಲ್ಲಿ ಒಬ್ಬೊಬ್ಬರದೂ ಒಂದೊಂದು ಬಗೆ. ಹಾಗಾಗಿಯೇ ಕನ್ನಡಕ್ಕಿದು ಕೇಡುಗಾಲವಲ್ಲ, ಊರ್ಜಿತಕಾಲ. ನಾನಿಲ್ಲಿ ಅರೋಲಿಯವರು ಕಟ್ಟಿಕೊಂಡಿರುವ ಮಾರ್ಗದ ಬಗ್ಗೆ ಹೇಳುವೆ. ಅದು ದೇಸೀ ಪರದೇಸೀಗಳ ಕಸಿ ಮಾಡಿಕೊಂಡ ಮಾರ್ಗ.”
ರಮೇಶ ಅರೋಲಿ ಬರೆದ ‘ಬಿಡು ಸಾಕು ಈ ಕೇಡುಗಾಲಕ್ಕಿಷ್ಟುʼ ಕವನ ಸಂಕಲನಕ್ಕೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ

Read More

ಡಾ. ಪುರುಷೋತ್ತಮ ಬಿಳಿಮಲೆಯವರ ಪುಸ್ತಕಕ್ಕೆ ಪ್ರೊ.ಅಶೋಕ ಶೆಟ್ಟರ್ ಬರೆದ ಮುನ್ನುಡಿ

“ಬ್ರಿಟೀಷರ ಭೂಕಂದಾಯವನ್ನು ವಿರೋಧಿಸಿ ನಡೆದ ಹೋರಾಟಗಳು ಅಸಂಖ್ಯ. ದಕ್ಷಿಣ ಕನ್ನಡ ಮತ್ತು ಕೊಡಗು ಪ್ರದೇಶಗಳಲ್ಲಿ ಬ್ರಿಟೀಷರು ಭೂಸ್ವಾಮ್ಯ ಮತ್ತು ಭೂಕಂದಾಯಕ್ಕೆ ಸಂಬಂಧಿಸಿ ಜಾರಿಗೆ ತಂದ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸಿದ ಹೋರಾಟದ ಕತೆ ಮೈನವಿರೇಳಿಸುವಂತಹುದು. ರೈತರ ಕೆಚ್ಚು, ವಿಶ್ವಾಸ, ಹೇಗಾದರೂ ಮಾಡಿ ಬ್ರಿಟೀಷರ ಕಂದಾಯ ಹೊರೆಯಿಂದ ಮುಕ್ತವಾಗಬೇಕು ಎಂಬ ಅವರ ಪ್ರಯತ್ನವನ್ನು ಸಾರುವ  ಘಟನೆಯ  ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಡಾ. ಪುರುಷೋತ್ತಮ ಬಿಳಿಮಲೆ ಮಾಡಿದ್ದಾರೆ. ” 
‘ಅಮರ ಸುಳ್ಯದ ರೈತ ಹೋರಾಟ’  ಪುಸ್ತಕಕ್ಕೆ ಪ್ರೊ.ಅಶೋಕ ಶೆಟ್ಟರ್ ಬರೆದ ಮುನ್ನುಡಿ ಇಲ್ಲಿದೆ.

Read More

ಸಿದ್ರಾಮ್ ಪಾಟೀಲ ಕಥಾ ಸಂಕಲನದ ಕುರಿತು ಪ್ರಿಯಾ ಭಟ್‌ ಬರೆದ ಬರಹ

“ಕಥೆಗಳಲ್ಲಿ ಭಾಷೆಯದೇ ಒಂದು ತೂಕ. ಉತ್ತರ ಕರ್ನಾಟಕ ದ ಬದುಕಿನ ಸೊಗಡು ಭಾಷೆಯನ್ನು ಸಶಕ್ತವಾಗಿ ಬಳಸುವುದರೊಂದಿಗೆ ಪ್ರಾದೇಶಿಕತೆಯನ್ನು ತುಂಬಿಕೊಟ್ಟಿದ್ದಾರೆ ಲೇಖಕರು. ಸಣ್ಣಕತೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಬಳಸಿಕೊಂಡೂ ಓದುಗರ ಕತೆಯ ಕುತೂಹಲಕ್ಕೆ ಓದಿಸಿಕೊಳ್ಳುವಿಕೆಗೆ ತೊಡಕಾಗದಂತೆ ಬರೆಯುವುದು ಕೂಡ ಲೇಖಕರ ಪ್ರತಿಭೆ. ಮಿಸೆಸ್ ಕೆಂಪೆ ಮತ್ತು ಅಶೋಕ, ಇಂಜೆಕ್ಷನ್ ಮೊದಲಾದ ಕಥೆಗಳಲ್ಲಿ ಭಾಷೆಯೆ ಮನುಷ್ಯ ಭಾವಗಳ ಹೃದ್ಯವಾಗಿಸಿವೆ.”
ಸಿದ್ರಾಮ್‌ ಪಾಟೀಲ ಬರೆದ ‘ಜಂಗಮಕ್ಕಳಿವಿಲ್ಲʼ ಹೊಸ ಕಥಾ ಸಂಕಲನದ ಕುರಿತು ಪ್ರಿಯಾ ಭಟ್‌ ಕಲ್ಲಬ್ಬೆ ಬರೆದ ಲೇಖನ

Read More

ಇದ್ದಲ್ಲೇ ಅದೃಶ್ಯವಾದವರು ಉಳಿಸಿ ಹೋಗುವ ಬೇನೆ

“ಇನ್ನು ನಿಮ್ಮನ್ನ ಓದಿಸೋಕಾಗಲ್ಲ. ಈ ವರ್ಷದಿಂದ ನೀವು ಶಾಲೆಗೆ ಹೋಗೋದು ಬೇಡ. ಪಕ್ಕದೂರಿನ ಒಂದು ಮನೆಯಲ್ಲಿ ಕೆಲಸಕ್ಕೆ ಜನ ಹುಡುಕುತ್ತಿದ್ದರು. ನಾಳೆಯಿಂದ ನೀವಿಬ್ಬರೂ ಬರುತ್ತೀರಿ ಅಂತ ಆ ಮನೆಯ ಮಾಲಿಕರಿಗೆ ಹೇಳಿ ಬಂದಿದ್ದೇನೆ” ಎಂದು ಒಂದು ದಿನ ತಾಯಿ ಹೇಳಿದಾಗ ಡೆಸರೆ ಆ ಸುದ್ದಿಯನ್ನು ತಣ್ಣಗೆ ಸ್ವೀಕರಿಸುತ್ತಾಳೆ. ಆದರೆ ಸ್ಟೆಲ್ಲಾಳಿಗೆ ಮಾತ್ರ..ʼ

Read More

ಜನಮತ

ನಾನು ಈ ಪಂಥೀಯ!

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

4 hours ago
ರಟ್ಟೀಹಳ್ಳಿ ರಾಘವಾಂಕುರ ಬರೆದ ಕೆಲವು ಬಿಡಿ ದ್ವಿಪದಿಗಳು

https://t.co/sTDacMRf9a
4 hours ago
ವೈ.ಎಸ್. ಹರಗಿ ಕಾದಂಬರಿಗೆ ಡಾ.ಸುರೇಶ ನಾಗಲಮಡಿಕೆ ಬರೆದ ಮುನ್ನುಡಿ

https://t.co/C7FjSJx6ty
4 hours ago
ಹಿಂಸೆಯ ಹಲವು ರೂಪಗಳ ಶೋಧ: ‘ಬಹುವಚನ ಭಾರತʼ

https://t.co/x2xsJQnEgB

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವೈ.ಎಸ್. ಹರಗಿ ಕಾದಂಬರಿಗೆ ಡಾ.ಸುರೇಶ ನಾಗಲಮಡಿಕೆ ಬರೆದ ಮುನ್ನುಡಿ

"ಕಾದಂಬರಿಯ ಬಹುಮುಖ್ಯ ಗುರಿಯಿರುವುದು ದೇವದಾಸಿ ಪದ್ಧತಿಯ ಅನಿಷ್ಟವನ್ನು ಚರ್ಚೆಯ ಮುನ್ನೆಲೆಗೆ ತರುವುದು. ಕೆಳಜಾತಿಗಳ ದೇವಳ ಪ್ರವೇಶ ಹಾಗೂ ಕೆರೆ ನೀರ ಬಳಕೆಯಂತಹ ಮೂಲಭೂತ ಹಕ್ಕುಗಳ ವಿಷಯವನ್ನು ಪ್ರಸ್ತಾಪಿಸುವುದು....

Read More