Advertisement

Category: ದಿನದ ಪುಸ್ತಕ

‘ಬೇಕಿತ್ತು ನಿಮ್ಮದೊಂದೆರೆಡು ಕವಿತೆಗಳು ಸಾಲವಾಗಿ…ʼ

ಮೂಲ ಲೇಖಕರ ಒಪ್ಪಿಗೆಯಿರಲಿ, ಅವರ ಗಮನಕ್ಕೂ ತಾರದೇ ನೇರವಾಗಿ ಕವಿತೆಯ ಸಾಲುಗಳನ್ನು ನಕಲು ಮಾಡಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ತಾವೇ ರಚಿಸಿದ್ದೆಂದು ಪ್ರಚಾರ ಪಡೆಯುವ ಕಪಟ ಸಾಹಿತಿಗಳನ್ನು ಕೆಣಕಿದ್ದಾರೆ. ‘ಇರಬೇಕು, ಇದ್ದೇ ಇರುತ್ತಾರೆ, ಒಬ್ಬಿಬ್ಬರಲ್ಲ ಒಂದಷ್ಟು ಜನ, ಇರುವಿಕೆಯ ಅರಿವನ್ನಷ್ಟೇ ಉಳಿಸಿ, ಎಲ್ಲರೊಳಗೂ ಸಾಲವಾಗಿಯೇ ಉಳಿಯುವವರು..’ ಎಂದೆನ್ನುತ್ತಾ ಪ್ರತಿಯೊಂದರಲ್ಲೂ ಮೂಗು ತೋರಿಸುವವರ ಸಂಖ್ಯೆ ಈಗ ಅಧಿಕ. ಅದರ ಬಗ್ಗೆ ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತನ್ನದೂ ಒಂದು ಅಭಿಪ್ರಾಯವಿರಲಿ ಎನ್ನುವವರೇ ಹೆಚ್ಚಾಗಿದ್ದಾರೆ.
ಸೌಜನ್ಯ ದತ್ತರಾಜ ಕವನ ಸಂಕಲನ “ಭಾವನೌಕೆಯನೇರಿ” ಕುರಿತು ಪ ನಾ ಹಳ್ಳಿ ಹರೀಶ್ ಕುಮಾರ್ ಬರಹ

Read More

ಬದುಕಿನ ಪಾಠ ಕಲಿಸುವ ಜೋತಯ್ಯನ ಕತೆ…

ಇಲ್ಲಿರುವ ಕಥೆಗಳ ಕಥಾವಸ್ತು ಬಹುತೇಕ ಮನುಷ್ಯರ ಕಷ್ಟ ಸುಖ ನೋವು ನಲಿವಿನದೇ ಆಗಿದ್ದರೂ, ಕಥೆಗಳ ಮೂಲಕ ಹೊರಬರುವ ವ್ಯಾಕುಲತೆ ಸ್ಪಂದನೆ ಲೇಖಕರಿಗೆ ಇರುವ ಬದುಕಿನ ಅನುಭವಗಳಿಂದಲೇ ಮೂಡಿರಬಹುದು, ಹಾಗಾಗಿ ಅವುಗಳು ಗಟ್ಟಿ ಕಥೆಗಳಾಗಿ ರೂಪುಗೊಂಡಿವೆ. ಇನ್ನು ನಿರೂಪಣೆಗೆ ಬಂದರೆ ಬಹುಶಃ ಮಾಸ್ತಿಯವರಂತೆ ಲೇಖಕಿಯು ಕವಯಿತ್ರಿಯೂ ಆಗಿರುವುದರಿಂದ ಇರಬೇಕು ಕಥೆಗಳನ್ನು ನಿರೂಪಿಸುವುದಕ್ಕೆ ಬಳಸುವ ಉಪಮೆಗಳು ಸಂದರ್ಭೋಚಿತವಾಗಿದ್ದು ಇವುಗಳಿಂದ ಹೊರಹೊಮ್ಮುವ ಭಾವನೆಗಳು ನೇರವಾಗಿ ಓದುಗರನ್ನು ತಟ್ಟುತ್ತವೆ.
ತೇಜಸ್ವಿನಿ ಹೆಗಡೆ ಕಥಾ ಸಂಕಲನ “ಜೋತಯ್ಯನ ಬಿದಿರು ಬುಟ್ಟಿ”ಯ ಕುರಿತು ಸಿಂಧು ಜಗನ್ನಾಥ್‌ ಬರಹ

Read More

ಹೂ ಅರಳುವ ಸಮಯ…

ʻನಿಮ್ಮ ಕಾವ್ಯದಲ್ಲಿ ನೀವು ಬರೆಯಲೇಬೇಕೆಂಬ ಮಾತುಗಳು ಇರುವಂತೆಯೇ ನೀವು ಬರೆದೂ ಬರೆದೂ ಜಾಳಾಗಬಹುದಾದ ಕೆಲವು ಸಂವೇದನೆಗಳು ಸಹ ಜಾಗ ಪಡೆದಿವೆ. ಇದು ಪ್ರತಿ ಕವಿಗೂ ಇರುವ ತೊಡಕು. ನೀವು ಬರೆಯಲಾರಂಭಿಸಿದ ತಕ್ಷಣ ನಿಮಗೆ ಒಂದು ಶೈಲಿಯು ಸಿದ್ಧಿಸುತ್ತದೆ. ಅದನ್ನು ಬಳಕೆ ಮಾಡುತ್ತಾ ಹೋದಂತೆ ಅದರ ಸಾರ ಕಡಿಮೆಯಾದಂತೆ ಅನ್ನಿಸುತ್ತದೆ. ಪ್ರಾಯಶಃ ನೀವು ಆವಾಹಿಸಿಕೊಳ್ಳುವ ಪ್ರೀತಿಯ ವ್ಯಾಮೋಹ ಅನೇಕ ಕವಿತೆಗಳಲ್ಲಿ ಪುನಾರಾವರ್ತನೆ ಆಗುವ ಅಪಾಯದಲ್ಲಿವೆ. ಒಂದು ವಿಷಯವನ್ನು ವೃತ್ತಾಕಾರವಾಗಿ ನಿಧನಿಧಾನವಾಗಿ ಪ್ರವೇಶಿಸಿ ಅದರ ಗಾಢತೆಯನ್ನು ಅರಿಯುವುದು ಒಂದು ತಂತ್ರʼ.
ಚೈತ್ರ ಶಿವಯೋಗಿಮಠ ಕವನ ಸಂಕಲನ “ಪೆಟ್ರಿಕೋರ್‌”ಗೆ ತಾರಿಣಿ ಶುಭದಾಯಿನಿ ಬರೆದ ಮಾತುಗಳು

Read More

ಸೂಕ್ಷ್ಮ ಅಂಶಗಳ ನೇಯ್ಗೆಯಲ್ಲಿ ಸಂಕೀರ್ಣ ಭಾವಬಿಂಬ

ಸಮಾಜ ʻಕುರೂಪಿʼ ಗುರುತಿಸಿದ,  ಹೆಣ್ಣೊಬ್ಬಳ ಮಾನಸಿಕ ತುಮುಲದ ಕಥೆಯೇ ‘ಅವಿವಾಹಿತೆ’. ಬಹಿರಂಗದ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವೆಂಬ ಭಾವನೆ ಪ್ರತಿಯೊಬ್ಬರಲ್ಲಿ ತುಂಬಿರುತ್ತದೆ. ಆದರೆ ಅಂತರಂಗದ ನಿಷ್ಕಲ್ಮಷ ಹಾಗೂ ನಿರ್ಮಲವಾದ ಭಾವನೆ ಪರಿಗಣನೆಗೆ ಬಾರದ ಸಮಾಜದಲ್ಲಿ ನಿರುಪಮಾಳ ಭವಿಷ್ಯದ ಕನಸು ನುಚ್ಚು ನೂರಾಗುವ ಚಿತ್ರಣವನ್ನು ವ್ಯಾಸರಾಯ ಬಲ್ಲಾಳರು ಸಮರ್ಪಕವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ‘ವಿವಾಹ’ವೆಂಬುದು ತುಂಬಾ ಅಗತ್ಯವೆಂಬ ಚೌಕಟ್ಟು ನಿರ್ಮಾಣವಾಗಿ ಹೋಗಿದೆ. ಬದ್ದ ಕಲ್ಪನೆಗಳ ನೆಲೆಯಲ್ಲಿ ನಿರುಪಮಾ ತನ್ನ ಆಸಕ್ತಿ ಮತ್ತು ಆಶಯಗಳತ್ತ ಗಮನ ಹರಿಸುತ್ತಾಳೆ. ನಿರುಪಮಗೆ ಸಮಾಜದ ಈ ಕ್ರೌರ್ಯ ವ್ಯವಸ್ಥೆಯನ್ನು ಎದುರಿಸಲಾಗುವುದಿಲ್ಲ.  ವ್ಯಾಸರಾಯ ಬಲ್ಲಾಳರ ʻಅವಿವಾಹಿತೆʼ ಕತೆಯ ಕುರಿತು ರಾಜಶೇಖರ ಜಮದಂಡಿ ಅವರು ಬರೆದ ವಿಮರ್ಶೆ ಇಲ್ಲಿದೆ. 

Read More

ಪಾಗಾರದಲ್ಲೊಂದು ಸೃಜನಾತ್ಮಕ ಕಲಾಕೃತಿ

ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ. ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ.
ಮಿತ್ರಾ ವೆಂಕಟ್ರಾಜ ಅವರ ʻಪಾಚಿಗಟ್ಟಿದ ಪಾಗಾರʼ ಕಾದಂಬರಿಯ ಕುರಿತು, ಲೇಖಕಿ ಕೆ.ಆರ್.ಉಮಾದೇವಿ ಉರಾಳ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ