Advertisement

Category: ಪ್ರವಾಸ

ಬರಿ ಬಿಯರಿನ ಕತೆಯಲ್ಲ ಇದು…

ಬಹಳಷ್ಟು ಪಬ್‌ಗಳು ಹತ್ತು, ಹನ್ನೆರಡನೇ ಶತಮಾನದಲ್ಲಿ ಡಬ್ಲಿನ್ ಬೀದಿಗಳಲ್ಲಿ ತಲೆದೋರಿದವು. ಮುಂದೆ ಇವು ಸಮಾನ ಆಸಕ್ತರ ಕೇಂದ್ರಗಳಾಗಿ ಸಾಮಾಜಿಕ ಹರಟೆಕಟ್ಟೆಗಳಾಗಿ ಬೆಳೆದವು. ಕೆಲವು ಪಬ್‌ಗಳಲ್ಲಿ ಬರೀ ವ್ಯಾಪಾರಸ್ಥರು ಸೇರಿಕೊಂಡರೆ, ಮತ್ತೆ ಹಲವು ಸಂಗೀತಗಾರರ ಕೇಂದ್ರಗಳಾದವು. ಮತ್ತೆ ಹಲವು ಸಾಹಿತಿಗಳೂ ಕವಿಗಳೂ ಸೇರುವ ಸ್ಥಳಗಳಾದವು. ಮತ್ತೆ ಕೆಲವು ರಾಜಕೀಯದವರು, ಗಣ್ಯರು, ಶ್ರೀಮಂತರು ಸೇರುವ ಜಾಗಗಳು… ಹೀಗೆ ಅಂದಿನಿಂದ ಇಂದಿನವರೆಗೂ ಕಾರ್ಯನಿರತವಾಗಿರುವ ಹಲವು ಬಗೆಯ ಪಬ್‌ಗಳು ಡಬ್ಲಿನ್‌ನಲ್ಲಿ ಕಾಣಸಿಗುತ್ತವೆ. ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿ ಹೆಗಡೆ ಐರಿಷ್ ಪಬ್‌ಗಳ ಇತಿಹಾಸದ ಕುರಿತು ಬರೆದಿದ್ದಾರೆ

Read More

ಮನದೊಳಗೆ ಅಚ್ಚಾಗಿದೆ ಸ್ಲೊವೇನಿಯಾ ಫೋಟೊಫ್ರೇಮ್

ಜಸ್ನಾ ಸರೋವರದ ಪ್ರವಾಸಿಗರಿಗೆ ಒಂದು ಅನಿರೀಕ್ಷಿತ ಉಡುಗೊರೆ ಕಾದಿರುತ್ತದೆ. ಅದು ಇಲ್ಲಿನ ಪ್ರಮುಖ ಆಕರ್ಷಣೆ – ಫೋಟೋ ಫ್ರೇಮ್! ಇಲ್ಲಿ ಬರುವ ಪ್ರವಾಸಿಗಳಿಗೆ ಫೋಟೊಗೋಸ್ಕರವಾಗಿ ಮರದಲ್ಲಿ ಮಾಡಿದ ಒಂದು ಸುಂದರವಾದ ಫೋಟೋ ಫ್ರೇಮ್ ಇದೆ. ಅದರ ಕೊನೆಯಲ್ಲಿ ಸ್ಲೋವೇನಿಯಾದ ಅಜ್ಜ ಪ್ರತಿಯೊಬ್ಬರ ಜೊತೆಗೂ ನೆನಪಾಗಿ ಅವರವರ ಮನೆಗಳಿಗೆ ತೆರಳುತ್ತಾನೆ. ನಾವೆಲ್ಲರೂ ಕೂತು ತೆಗೆಸಿಕೊಂಡಿರುವ ಫೋಟೋ ನೋಡಿದರೆ ನಿಮಗೊಂದು ಕ್ಷಣಕ್ಕೆ ಅಚ್ಚರಿಯಾಗುವುದು ಖಚಿತ. ಆ ಅಜ್ಜ ನಮ್ಮಲ್ಲಿಯ ಯಾರೋ ಒಬ್ಬರು ಎಂಬಂತೆ ಕಾಣುವಷ್ಟು ಚೆನ್ನಾಗಿ ಮೂಡಿ ಬಂದಿರುವ ಕೆತ್ತನೆಯ ಕಲಾವಿದನಿಗೆ ಹಾಗೂ ಈ ಕಲ್ಪನೆಯನ್ನು ಸಾಕಾರಗೊಳಿಸಿದ ಇಲ್ಲಿಯ ಪ್ರವಾಸೋದ್ಯಮ ಇಲಾಖೆಗೆ ನನ್ನ ಧನ್ಯವಾದಗಳು.

Read More

ದಿವಾನಿಯಾದ ಮಸ್ತಾನಿಯ ಕತೆ

ಹೌದಲ್ಲ. ಇವಳು ಎಲ್ಲಿಂದ ಬಂದಳು ಎಲ್ಲಿಗೆ ಹೋದಳು? ಸಂಜಯ್ ಲೀಲಾ ಬನ್ಸಾಲಿಯ ವೈಭವಪರದೆಯಲ್ಲಿ ದೀಪಿಕಾಳ ಮೂಲಕ ಅನಾವರಣಗೊಂಡವಳು.. ಕೊಟ್ಟಿಗೆಯಂತಾಗಿದ್ದ ಮನದ ನಡುವಿನಲ್ಲಿ ನೊರೆ ಹಾಲ್ಗರೆದುಕೊಟ್ಟ, ಬಾಜಿರಾಯನ ‘ಮಸ್ತಾನಿ’ಯನ್ನು ಹುಡುಕಿ ನಾನು ಹೊರಟೆ. ಹಾಡುತ್ತಿದ್ದೆ ನಾನೂ “ಕಹತೆ ಹೆ ಯೇ ದಿವಾನಿ ಮಸ್ತಾನೀ ಹೋಗಯೀ…” ಅವಳು ಇರಲೇ ಇಲ್ಲ, ಅವಳು ಮುಸ್ಲಿಂ ಆಗಿರಲಿಲ್ಲ, ಅವಳು ಬಾಜಿರಾಯನಿಗಿಂತ ಮೊದಲೇ ಸತ್ತಳು, ಆತ್ಮಹತ್ಯೆ ಮಾಡಿಕೊಂಡಳು ವಗೈರೆ ವಗೈರೆ ಎಂದು ಮಾಧ್ಯಮಗಳು ಟಿಆರ್‌ಪಿ ಸಂಕಷ್ಟದಲ್ಲಿ ಹೊರಳಿ ಧುಮ್ಮಿಕ್ಕುತ್ತಿರುವಾಗ ನಾನು ಹಾಡುತ್ತಿದ್ದೆ “ಜ಼್ಅಖಮ್ ಐಸ ತೂನೇ ಲಗಾಯಾ… ಮರ್ಹಮ್ ಐಸ ತೂನೇ ಲಗಾಯಾ… ಮೇ ದಿವಾನಿ ಹೋಗಯೀ… ಹಾಂ ದಿವಾನೀ ಹೋಗಯೀ” ಅಂಜಲಿ ರಾಮಣ್ಣ ಬರೆಯುವ `ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಹೊಸ ಬರಹ

Read More

ಉತ್ಸಾಹ ಚಿಲುಮೆಯ ತೋಳಿಗೆ ಬಳ್ಳಿಯಾಗಿದ್ದ ನಾನು!

ಧರ್ಮಶಾಲಾದಿಂದ 112 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಆಕರ್ಷಿಸುತ್ತದೆ ಖಜ್ಜಿಯಾರ್ ಗಿರಿಧಾಮ. ದೌಲಾದರ ಪರ್ವತಶ್ರೇಣಿಯ ನಡುವೆ 12ನೆಯ ಶತಮಾನದಲ್ಲಿ ಚಂಬಾ ರಾಜಮನೆತನದವರು ಕಟ್ಟಿಸಿರುವ, ಸಂಪೂರ್ಣ ಮರದಿಂದ ಮಾಡಿರುವ ಅರಮನೆ. ಅದರ ಬಾಗಿಲುವಾಡಗಳಿಗೆ ಕಟ್ಟಿಕೊಂಡಿರುವ ಚಿನ್ನದ ತಗಡು, ಅರಮನೆಯ ಒಳಗೇ ಇರುವ ಖಾಜ್ಜಿ ನಾಗಮಂದಿರ. ಶಿವ ಮತ್ತು ಹಿಡಿಂಬೆಯ ಮೂರ್ತಿಗಳೂ ಇರುವುದು ಇಲ್ಲಿನ ಆಕರ್ಷಣೆ. ನವರಾತ್ರಿಯಲ್ಲಿ ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ. ಬಾಕಿಯಂತೆ ದೈವಭಕ್ತ ಪ್ರವಾಸಿಗರು ತಾವೇ ಕುಂಕುಮವಿಟ್ಟು ಪೂಜೆ ಮಾಡಿ ಬರಬಹುದು.
ʻಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಮರಳಲ್ಲ ಇದು ಹಸಿರು ಹರಳು

ದೂರದಲ್ಲಿ ಏರುತ್ತಿದ್ದ ಕೆಂಪು ಧೂಳಿನ ಮೋಡದಿಂದ ಎದ್ದುಬಂದ ಜೀಪಿನಿಂದ ಹೊರಗಿಣುಕಿತ್ತೊಂದು ಹೊಂಗೂದಲಿನ ತೇರು. ಅಹ ದೇವತೆಯಂತೆ ಅವತರಿಸಿದ್ದಳು ಹದಿನಾರರ ಹುಡುಗಿ ಮಕಾಮಾಯಿ.   ನಮ್ಮ ಕತೆ ಕೇಳಿ, ನನ್ನ ಹಿಂದೆ ನಿಧಾನ ಬನ್ನಿ ಎನ್ನುತ್ತಾ ತಾನು ಮಾತ್ರ ಭರೆಂದು ಹಾರುತ್ತ, ಅಲ್ಲಲ್ಲಿ ಜೀಪು ನಿಲ್ಲಿಸಿಕೊಂಡು ನಮಗಾಗಿ ಕಾಯುತ್ತ, ಒಂದು ಸಮುದ್ರ ತೀರದ ಕಲ್ಲು ಹಾದಿಯ ಗುಡಿಸಿಲಿನಂತ ಜಾಗಕ್ಕೆ ಕರೆದೊಯ್ದಳು. ಅದು “ಪಾಪಕೋಲೇ” ಹಸಿರು ಮರಳ ದಂಡೆಯ ಹಾದಿಯ ಶುರುವಾತು. ಜಗದ ಜಗಲಿಯಲಿ ನಿಂತು ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿ ಹೆಗಡೆ ಹವಾಯಿ ದ್ವೀಪದ ಕುರಿತು ಬರೆದಿದ್ದಾರೆ .

Read More

ಜನಮತ

ಗೌರಿ ಗಣೇಶ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

https://t.co/4ePjrluaDt
ಮೊಗ‍ಳ್ಳಿ ಗಣೇಶ್‌ ಆತ್ಮಕತೆ `ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ೪೦ನೇ ಕಂತು
https://t.co/whJosi6617
“ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ
https://t.co/wWpeNSXUrN
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿ ಹೆಗಡೆ ಐರಿಷ್ ಪಬ್‌ಗಳ ಇತಿಹಾಸದ ಕುರಿತು ಬರೆದಿದ್ದಾರೆ

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಾನಿನ್ನು ಹೋಗಿಬರಲೇ.. ‌

ಸುಚಿತಾ ದಿಙ್ಮೂಢಳಾದಳು. ತನಗೆ ಹೀಗೆ ವರ್ತಿಸುವುದು ಸಾಧ್ಯವಿತ್ತೇ? ತನ್ನೊಳಗೆ ಹೊತ್ತಿ ಉರಿದ ವಿಷಯವನ್ನು ತನ್ನ ಮಗಳು ನಿರಾಕರಿಸುತ್ತಿರುವುದು ತಮಗೆ ಸಹಿಸುವುದು ಸಾಧ್ಯವಿತ್ತೇ? ಅದರ ಬಗೆಗೆ ಇಷ್ಟೊಂದು ನಿರ್ವಿಕಾರವಾಗಿರುವದು...

Read More

ಬರಹ ಭಂಡಾರ