Advertisement

Category: ಪ್ರವಾಸ

ಗಿರಿಜಾ ರೈಕ್ವ ಬರೆಯುವ ಹೊಸ ಅಂಕಣ ‘ದೇವಸನ್ನಿಧಿ’

ತಿರಿಗಾಡಿದಷ್ಟೂ ಕಾಣುವ ಇಂತಹ ದೇಶಗಳ ಹಂಗಿಲ್ಲದ ನಂಬಿಕೆಗಳ ಪ್ರಪಂಚ ನನಗೊಂದು ಸೋಜಿಗ ಮತ್ತು ಭರವಸೆಯ ಸ್ಪರ್ಶಮಣಿಯಂತೆ ತೋರುತ್ತದೆ. ಕೆಲವು ವರ್ಷಗಳ ಹಿಂದೆ ಬಾಲ್ಟಿಕ್‌ ದೇಶಗಳಲ್ಲಿ ಅಲೆಯುತ್ತಿದ್ದೆ. ಆಗ ಹೋಗಿ ನೋಡಿದ್ದು ಲಿಥುಯೇನಿಯಾದಲ್ಲಿರುವ ‘ಹಿಲ್‌ ಆಫ್‌ ಕ್ರಾಸ್‌ʼ ಅನ್ನುವ ಗುಡ್ಡ. ಲಿಥೂಯೇನಿಯಾ ಬಾಲ್ಟಿಕ್‌ ಸಾಗರದ ನಡುವಿನ ಒಂದು ದೇಶ. ೧೪ ನೇ ಶತಮಾನದಿಂದ ಸೋವಿಯತ್‌ ರಷ್ಯಾದ ಆಳ್ವಿಕೆಯಲ್ಲಿದ್ದು ೧೯೯೧ ರಲ್ಲಿ ಸ್ವತಂತ್ರವಾದ ದೇಶ.
ಗಿರಿಜಾ ರೈಕ್ವ ಬರೆಯುವ ದೇಗುಲಗಳ ಕುರಿತ ಹೊಸ ಪ್ರವಾಸ ಅಂಕಣ “ದೇವಸನ್ನಿಧಿ” ಇಂದಿನಿಂದ

Read More

ದೀಪಧಾರಿಣಿಯ ಬೆಳಕಿನಲ್ಲಿ ಹೊಳೆದ ಮಿಂಚು

ಹೀಗೆಲ್ಲಾ ಓದುತ್ತಾ, ಫೋಟೊ ತೆಗೆಯುತ್ತಾ ಮುಂದೆ ಹೋಗುತ್ತಿದ್ದೆ. ಅಲ್ಲೇ ಅಲ್ಲೇ ಇನ್ನೊಂದು ಫಲಕ. ಅದರಲ್ಲಿ ಸಣ್ಣಸಣ್ಣ ಅಕ್ಷರಗಳು. ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದವರಿಗೆಲ್ಲಾ ತಿಳಿದೇ ಇರುತ್ತದೆ ರೋಗಿಯ ಹಾಸಿಗೆಯ ಪಕ್ಕದಲ್ಲಿ ಒಂದು ಕರೆಗಂಟೆಯ ಸ್ವಿಚ್ ಇರುತ್ತದೆ ಎನ್ನುವುದು. ಆಮ್ಲಜನಕದ ಸಿಲಿಂಡರ್ ಒಂದೊಮ್ಮೆ ಖಾಲಿಯಾಗಿದ್ದರೂ ಆತಂಕಗೊಳ್ಳದ ವ್ಯಕ್ತಿ ಈ ಕರೆಗಂಟೆ ಕೆಲಸ ಮಾಡದಿದ್ದರೆ ಮಾತ್ರ ಸಾವಿನಷ್ಟೇ ಭಯಬೀಳುವುದು ಖಚಿತ.
ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ

Read More

ಸಿಸಿಲಿಯನ್ ಡೈರೀಸ್: ಯುರೇಕಾ ನಗರಿ ಸಿರಕುಸಾ

ಸಿಸಿಲಿಯ ಹತ್ತು ದಿನದ ಪ್ರವಾಸದಲ್ಲಿ ಮೊದಲು ಭೇಟಿ ಕೊಟ್ಟಿದ್ದು “ಸಿರಕುಸಾ”ಗೆ. ಹೌದು! ಇದು ಆರ್ಕಿಮಿಡಿಸ್ ನ ಜನ್ಮಸ್ಥಳ ಹಾಗೂ ವಾಸಸ್ಥಳವಾಗಿತ್ತು. ಆರ್ಕಿಮಿಡಿಸ್ ಎಂದಾಕ್ಷಣ ಯುರೇಕಾ ಎಂದು ಮಾತ್ರ ತಿಳಿದಿದ್ದ ನನಗೆ, ಈ ಪ್ರವಾಸ ಬೇರೆಯ ಪ್ರಪಂಚವನ್ನೇ ತೆರೆದಿಟ್ಟಿತು.  ಆರ್ಕಿಮಿಡಿಸ್  ತನ್ನ ಬುದ್ಧಿಮತ್ತೆಯನ್ನು ಉಪಯೋಗಿಸಿ  ರಾಜ್ಯವು ಭದ್ರವಾಗಿರಲು ಬೇಕಾದ ಅನೇಕ ಸಲಹೆಗಳನ್ನು ಕೊಡುತ್ತಿದ್ದ. ಅವನ ರಾಜ್ಯ ಸಿರಕುಸಾದಲ್ಲಿ ಓಡಾಡಿದ ಅನುಭವಗಳನ್ನು ಗುರುದತ್ ಅಮೃತಾಪುರ ಅವರು ತಮ್ಮ ‘ದೂರದ ಹಸಿರು’ ಅಂಕಣದಲ್ಲಿ ಪ್ರಸ್ತುತಪಡಿಸಲಿದ್ದಾರೆ.

Read More

ಮಾರ್ಟಿನ್ ಲೂಥರ್ ಕಿಂಗ್ ನೆನಪಿನಲ್ಲಿ ಹಾಕಿದ ಹೆಜ್ಜೆಗಳು

ನಾನು ವಿದೇಶದಲ್ಲಿರುವ ಪರದೇಶಿ ಎನ್ನಿಸಲಿಲ್ಲ. ಅಮೆರಿಕ  ದೇಶವನ್ನು ನೋಡುವ ದೃಷ್ಟಿಕೋನವೇ ಬದಲಾಯ್ತು. ಆ ದಿನ ನನ್ನುಸಿರಿಗೆ ಉಸಿರು ಕೊಟ್ಟ ಮಾರ್ಟಿನ್. ನನಗೀಗ ಜೀವನ ಬೇಕು ಅನಿಸಲು ಶುರುವಾಯ್ತು. ಒಳಗಿನ ಕಣ್ಣು ಇಂಚಿಂಚೇ ತೆರೆಯ ಹತ್ತಿತು. ಮುಂದಿನ ಎಲ್ಲಾ ದಿನಗಳ ಪ್ರಯಾಣದಲ್ಲಿ ಅಲ್ಲಿನ ಎಲ್ಲೆಡೆಯಲ್ಲೂ ಕೆಳಮಟ್ಟದ ಕೆಲಸ ಎಂದು ಗುರುತಿಸಲ್ಪಟ್ಟಿರುವ ಎಲ್ಲಾ ಕೆಲಸಗಳನ್ನು ಕಪ್ಪು ಜನರೇ ಮಾಡುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಬಿಳಿಯರ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳಬೇಕೆನ್ನುವ ಹಪಾಹಪಿ ಅವರಲ್ಲಿ ಇನ್ನೂ ಜೀವಂತವಿರುವುದನ್ನು ಕಂಡೆ.
‘ಕಂಡಷ್ಟು ಪ್ರಪಂಚ’ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಟ್ಯಾಗೋರರ ಮನೆಯಂಗಳದಲ್ಲಿ ಕಂಡ ಸತ್ಯಗಳು

ತಮ್ಮ 77ನೇ ಹುಟ್ಟುಹಬ್ಬದಂದು ಟ್ಯಾಗೋರರು ಇದೇ ಮನೆಯಿಂದ ’ಜನಮ್ ದಿನ್’ ಎನ್ನುವ ತಮ್ಮ ಕವಿತೆಯನ್ನು ಆಕಾಶವಾಣಿಯ ನೇರ ಪ್ರಸಾರದಲ್ಲಿ ಓದಿದ್ದರು. ದೇಶದ ಮೊಟ್ಟಮೊದಲ ನೇರ ಪ್ರಸಾರ ಆಕಾಶವಾಣಿಯಲ್ಲಿ ಅದಾಗಿತ್ತು. ಆದರೀಗ ಆ ಮನೆ ಇಳಿ ವೇಳೆಯ ಎಲ್ಲಾ ಅಪರ ಕೃತ್ಯಗಳಿಗೆ ಚಾವಡಿಯಾಗಿದೆಯೆಂದು ತಿಳಿಯಿತು. ಎಷ್ಟು ಆಸಕ್ತಿ ಉತ್ಸಾಹದಿಂದ ಅಲ್ಲಿಗೆ ಬಂದಿದ್ದೆನೋ ಅಷ್ಟೇ ಮನನೊಂದು ಅಲ್ಲಿ ನಿಂತಿದ್ದೆ. ಅಂಜಲಿ ರಾಮಣ್ಣ ಬರಹ 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ