Advertisement

Category: ಪ್ರವಾಸ

ಕಲ್ಲಿನಲ್ಲಿ ಕಡೆದ ಆಲ್ಬಮ್‌, ತಾಡಿಪತ್ರಿ

ನಾನು ಮೊದಲು ಹೋಗಿದ್ದು ಬುಗ್ಗ ರಾಮಲಿಂಗೇಶ್ವರಕ್ಕೆ. ನಿತ್ಯ ಬರುವ ಭಕ್ತಾದಿಗಳನ್ನು ಬಿಟ್ಟರೆ ಹೆಚ್ಚು ಜನ ಇರಲಿಲ್ಲ. ವಿಜಯನಗರ ಶೈಲಿಯ ದೇವಾಲಯಗಳಲ್ಲಿ ಇರುವಂತೆ ಪ್ರವೇಶ ದ್ವಾರ ಎತ್ತರವಾಗಿದ್ದು, ಎರಡೂ ಬದಿಗಳಲ್ಲಿ ಗಂಗಾ, ಯಮುನೆಯರ ಶಿಲ್ಪಗಳಿಂದ ಕೂಡಿದೆ. ಇವು ಮಾನಸಿಕವಾಗಿ ನಮ್ಮನ್ನು ಗಂಗೆ, ಯಮುನೆಯರಿಂದ ಶುಚಿಗೊಳಿಸಿಕೊಂಡು ಒಳಕ್ಕೆ ಹೋಗುವ ಪ್ರತೀಕ. ದೇವಾಲಯದ ಪ್ರಶಾಂತತೆ ಹಾಗೂ ಅದರ ಬೃಹತ್‌ ಗಾತ್ರವನ್ನು ಕಂಡು ನನಗೆ ಒಂದು ಕಡೆ ಬೆರಗು ಜೊತೆಗೆ ಏನು ನೋಡಲಿ ಏನು ಬಿಡಲಿ ಅಂತ ಸ್ವಲ್ಪ ಹೊತ್ತು ತಲೆ ಕೆಟ್ಟ ನೊಣದ ಹಾಗೆ ಕ್ಯಾಮೆರಾ ಹಿಡಿದುಕೊಂಡು ಓಡಾಡಿದೆ.
‘ದೇವ ಸನ್ನಿಧಿ’ ಅಂಕಣದಲ್ಲಿ ತಾಡಿಪತ್ರಿ ಎಂಬ ಅಪರೂಪದ ಜಾಗದ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ದೇವಾಲಯಗಳ ಕಣಿವೆಯಲ್ಲಿ ಈಗ ಹಸಿರು ಚಿತ್ರಗಳು

ನಾನು ನೆಲೆಸಿರುವ ಜರ್ಮನಿ ಹಾಗೂ ಸುತ್ತಲಿನ ದೇಶಗಳ ಇತಿಹಾಸ ಬಹಳ ಸಪ್ಪೆ ಎನ್ನಿಸುತ್ತದೆ. ಇವರು ಅರಮನೆ ಎಂದು ಕರೆಯುವ ಕಟ್ಟಡಗಳನ್ನು ಮೀರಿಸುವ ಮನೆಗಳನ್ನು ನಮ್ಮ ದೇಶದಲ್ಲಿ ಈಗಿನ ರಾಜಕಾರಣಿಗಳು, ಉದ್ಯಮಿಗಳು ಹೊಂದಿದ್ದಾರೆ. ಇಷ್ಟು ವರ್ಷಗಳ ಪ್ರವಾಸದಲ್ಲಿ ನಮ್ಮ ಮೈಸೂರಿನ ಭವ್ಯ ಅರಮನೆಯಂತಹ ಮತ್ತೊಂದನ್ನು ಇಲ್ಲಿ ನೋಡಲಿಲ್ಲ. ಸಾವಿರಾರು ವರ್ಷಗಳ ಹಿಂದಿನ, ಗತ-ವೈಭವಗಳಿಂದ ಕೂಡಿದ ಇತಿಹಾಸ ಅತಿ ವಿರಳ. ಆದರೆ ಯೂರೋಪಿನ ದಕ್ಷಿಣಕ್ಕೆ ಚಲಿಸಿದಂತೆ ಗ್ರೀಕ್, ರೋಮನ್ ಸಾಮ್ರಾಜ್ಯಗಳ ಕುರುಹುಗಳು ಕಾಣುತ್ತಿದ್ದಂತೆ ಕಣ್ಣು, ಕಿವಿ ಅರಳಿಬಿಡುತ್ತದೆ. ಗುರುದತ್ ಅಮೃತಾಪುರ ಬರಹ

Read More

ಪ್ರಾರ್ಥನೆಯೊಂದೇ ಆಯ್ಕೆಯಾಗಿ ಉಳಿದಾಗ…

ಆ ದಿನ ಅಲ್ಲಿ ಹಾಗೆ ಆದಾಗ ಆಕೆಗೆ ಒಳಿತಾಗಲಿ ಎಂದು ಬಯಸಿದ್ದು ಅಲ್ಲಿದ್ದ ನೂರಾರು ಮನಸ್ಸುಗಳು. ಅನುಮಾನವೇ ಇಲ್ಲ. ಆದರೆ ನನ್ನ ಗಮನ ಆಕೆಯ ಇಬ್ಬರು ಹರೆಯದ ಹೆಣ್ಣುಮಕ್ಕಳಾದ ಶ್ರದ್ಧಾ ಮತ್ತು ಪೂಜಾರೆಡೆಗೆ ಇದ್ದದ್ದೂ ಸುಳ್ಳಲ್ಲ. ಇಡೀ ಗುಂಪಿನಲ್ಲಿ ಅವರಿಬ್ಬರಿಗೇ ಇಂಗ್ಲಿಷ್ ಬರುತ್ತಿದ್ದದ್ದು. ಸ್ವಂತ ತಾಯಿ ಕುಸಿದು ಬಿದ್ದಿದ್ದಾಳೆ. ಅಪ್ಪನಿಗೆ ದಿಗ್ಭ್ರಮೆಯಾಗಿದೆ. ಪುಟ್ಟ ತಮ್ಮ ಅಳುತ್ತಿದ್ದಾನೆ. ವಯಸ್ಸಾದ ನೆಂಟರಿಷ್ಟರೆಲ್ಲಾ ಆತಂಕಗೊಂಡಿದ್ದಾರೆ. ಡಾಕ್ಟರ್‌ಗಳು ಹತ್ತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
“ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ವಿಮಾನ ಪ್ರಯಾಣದ ಒಂದು ಭಿನ್ನ ಅನುಭವವನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ

Read More

ಗಾಂಧಿತಾತನ ಜೊತೆಗೆ ಒಲಿವಿಯಾಳೂ ಸಿಕ್ಕಳು

ವಿದ್ಯಾರ್ಥಿಗಳು, ಕಲಾವಿದರು ತಮ್ಮ ಖರ್ಚು ಸರಿದೂಗಿಸಿಕೊಳ್ಳಲು ಹೀಗೆ ಸ್ವಯಂಸೇವೆ ಮಾಡುತ್ತಾರೆ ಮತ್ತು ಪಗಾರ ಪಡೆಯುತ್ತಾರೆ. ಬಹಳಷ್ಟು ಸ್ಮಶಾನಗಳಿಗೆ ಭೇಟಿ ನೀಡಿದ್ದೇನೆ. ಅವುಗಳು ಪಾರ್ಕ್‌ನಂತೆ ಬಳಸಲ್ಪಡುತ್ತವೆ. ಸ್ವಚ್ಛತೆ ಮತ್ತು ಮೌನವು ಮಾರ್ದನಿಸುತ್ತಿರುತ್ತವೆ. ಕೆಲವು ಕಡೆ ಸಮಯ ನಿಗಧಿಯಾಗಿರುತ್ತದೆ, ಆದರೆ ಬಹುಪಾಲು ಸ್ಮಶಾನಗಳಿಗೆ ಸಾರ್ವಜನಿಕರು ದಿನದ ಯಾವ ಸಮಯದಲ್ಲಿಯಾದರೂ ಹೋಗಬಹುದು, ಅಲ್ಲಿ ಕುಳಿತು ಸಮಯ ಕಳೆಯಬಹುದಾಗಿರುತ್ತದೆ.
ಅಂಜಲಿ ರಾಮಣ್ಣ ಬರಹ

Read More

ಗಗನಚುಂಬಿ ಬೆಟ್ಟಗಳ ಸಂದಿಯಲ್ಲಿ ಬುದ್ಧಗಂಟೆಯ ಸದ್ದು

ನದಿ, ಜಲಪಾತಗಳೆಲ್ಲಾ ಹೆಪ್ಪುಗಟ್ಟಿದ್ದ ಚಳಿಗಾಲದಲ್ಲೊಮ್ಮೆ ನಾನು ಚೀನಾದ ದಟಾಂಗ್ ಎನ್ನುವ ಊರಿನಲ್ಲಿದ್ದೆ. ಇದು ಉತ್ತರ ಚೀನಾದ ಶಾಂಕ್ಷಿ ಪ್ರಾಂತ್ಯದಲ್ಲಿದೆ, ಇದರ ಸುತ್ತಮುತ್ತ ಯುನೆಸ್ಕೋ ತಾಣಗಳೂ ಸೇರಿದಂತೆ ಅನೇಕ ಪ್ರಾಚೀನ ಬೌದ್ಧತಾಣಗಳಿವೆ. ಅಲ್ಲೊಂದು ಹಳೆಯ ಬೌದ್ಧವಿಹಾರ. ಬೋಳುಬೆಟ್ಟಗಳ ಜೊತೆ ತಾನೂ ಒಂದಾಗಿರುವಂತೆ ತೋರುವ ಆ ವಿಹಾರ ನೆಲದಿಂದ ೭೫ ಮೀ ಎತ್ತರದಲ್ಲಿ ಬೆಟ್ಟದ ಮೇಲ್ಮೈನಲ್ಲಿ ೧೫೦೦ ವರ್ಷಗಳಿಂದ ಬೀಳದೆ, ಅಲ್ಲಾಡದೆ, ಮಳೆಗೆ ಜಗ್ಗದೆ, ಬಿಸಿಲಿಗೆ ಕುಗ್ಗದೆ, ಹಿಮಕ್ಕೆ ಕರಗದೆ, ಗಾಳಿಗೆ ಹಾರಿ ಹೋಗದೆ ಹಾಗೇ ಉಳಿದುಕೊಂಡು ನಮ್ಮಂತಹ ನೋಡುವ ಕಣ್ಣಿಗೆ ವಿಸ್ಮಯವಾಗಿ ಉಳಿದುಬಿಟ್ಟಿದೆ.
‘ದೇವ ಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…

Read More

ಬರಹ ಭಂಡಾರ