Advertisement

Category: ಸಂಪಿಗೆ ಸ್ಪೆಷಲ್

ಅಮ್ಮ ಒಬ್ಬಳೇ ಕುಳಿತು ನೋಡುವ ಪತ್ತನಾಜೆಯ ಕಾಲ

ದೀಪಾವಳಿ ಸಂದರ್ಭದಲ್ಲಿ ತಿರುಗಾಟ ಆರಂಭಿಸುವ ಕರಾವಳಿಯ ಯಕ್ಷಗಾನ ಮೇಳಗಳು ವೃಷಭ ಮಾಸದ ಹನ್ನೊಂದನೇ ದಿನದಂದು ಅಂದರೆ ಮೇ ತಿಂಗಳಂತ್ಯದಲ್ಲಿ ಪ್ರದರ್ಶನ ಮುಕ್ತಾಯಗೊಳಿಸುತ್ತವೆ. ದೇವಸ್ಥಾನಗಳ ಆಶ್ರಯದಲ್ಲಿ ನಡೆಯುವ ಮೇಳಗಳ ಸಮಾರೋಪವು ಒಂದು ಪುಟ್ಟ ಜಾತ್ರೆಯಂತೆ ವೈಭವಯುತವಾಗಿ ಇರುತ್ತಿತ್ತು. ಆದರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಆಚರಣೆಗಳಿಗೆ ಅವಕಾಶವಿಲ್ಲ. ಸಾಂಕೇತಿಕ ಆಚರಣೆಯ ಕುರಿತು…”

Read More

ಒಂದು ನೆಲನೆಲ್ಲಿಯ ಕತೆ

“ಸಂಸ್ಕರಿಸಿ ಪೊಟ್ಟಣವಾಗಿಸಿದ ಆಹಾರದಲ್ಲಿ ಒಪ್ಪಿತ ಮಟ್ಟದಲ್ಲಿ ಪ್ರಿಸರ್ವೇಟಿವ್, ಎಸ್ಸೆನ್ಸ್ ಅಥವಾ ರಾಸಾಯನಿಕ ಬಣ್ಣ ಇರುತ್ತದೆ. ಒಟ್ಟಿನಲ್ಲಿ ಹತ್ತಾರು ವಿಧಗಳಲ್ಲಿ ಇವುಗಳೆಲ್ಲ ನಮ್ಮ ದೇಹವನ್ನು ಸೇರಿ ಘಾಸಿ ಮಾಡುತ್ತವೆ ಎಂಬ ಅಧ್ಯಯನಗಳನ್ನು ಓದುತ್ತ ನಾವು ಜಾಗೃತರಾಗಬೇಕು ಎಂದುಕೊಳ್ಳುತ್ತೇವೆ. ಸಾವಯವ ಬದುಕನ್ನು ಬಾಳಬೇಕು ಎಂದುಕೊಳ್ಳುತ್ತೇವೆ. ಆದರೆ ಮತ್ತೊಂದೆಡೆ ಬಹಳ ಸೌಜನ್ಯ ಮತ್ತು ಸಭ್ಯತೆಯಿಂದಲೇ ನಾವು ಗಿಡಗಳ ಮೇಲೆ ದಾಳಿ ಮಾಡುತ್ತೇವೆ.”

Read More

ಜಾವಳಿ ನಾಟ್ಯಬಂಧದ ಅನಾವರಣ…

‘ಜಾವಳಿಯ ಪರಿಕಲ್ಪನೆಯು ಅಭಿನಯ ಪ್ರಧಾನವಾಗಿರುವುದಕ್ಕೆ ಇದೊಂದು ನಾಟ್ಯ ಬಂಧ. ಜಾವಳಿಯ ವಸ್ತು “ಶೃಂಗಾರ” ಮಧುರಭಾವ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಜಾವಳಿಗಳು ರಚಿತವಾಗಿವೆ. ಅವುಗಳ ವೈವಿಧ್ಯತೆಯೂ ರಮ್ಯಮನೋಹರವಾಗಿವೆ. ನೃತ್ಯಕ್ಷೇತ್ರದಲ್ಲಿ ಶೃಂಗಾರವೆಂದರೆ ಪರಿಪೂರ್ಣ ಅರ್ಪಣೆಯಲ್ಲದೆ ಮತ್ತೇನೂ ಅಲ್ಲ. ಅಷ್ಟೇ ಅಲ್ಲ. ನಾಯಕ-ನಾಯಕೀ ಭಾವವೇ ಜಾವಳಿಯ ಕೇಂದ್ರ ಬಿಂದು…’

Read More

ಅಪ್ಪನೆಂಬ ಆಲದ ಮರದ ನೆರಳಿನಲ್ಲಿ ಆಶ್ರಯಿತ ಹಕ್ಕಿಗಳು….

“ಅಪ್ಪಾಜಿ ತನಗಿಂತ ಹತ್ತು ವರ್ಷ ಚಿಕ್ಕವರಿದ್ದ ಮಕ್ಕಳಂತಿದ್ದ ಚಿಕ್ಕಪ್ಪಂದಿರು ಹೊತ್ತಿನ ಊಟಕ್ಕಾಗಿ ಇತರರ ಹೊಲಗಳಲ್ಲಿ ಕೆಲಸ ಮಾಡಿ ಹೆಬ್ಬೆರಳು ಕಿತ್ತು ರಕ್ತ ಸೋರಿಕೊಳ್ಳುವುದನ್ನು ನೋಡಿ ಮಧ್ಯ ರಾತ್ರಿ ಎದ್ದು ತನ್ನ ಜವಾಬ್ದಾರಿ ನೆನೆಯುತ್ತಿದ್ದನಾ. ಮೊದಲ ಚಿಕ್ಕಪ್ಪ ಬೇಗ ಮದುವೆಯಾಗಿ ಮಕ್ಕಳಿಗೆ ಊಟಕ್ಕೆ ನೀಡಲಾರದೇ ಹೆಣಗುತ್ತಿದ್ದುದು ಬಾದಿಸಿತ್ತಾ. ನಮ್ಮಜ್ಜಿ ಅಪ್ಪನ ತಮ್ಮಂದಿರಿಗೆ ಬಡಿಸಲು ಇಲ್ಲದಾಗ ಒದ್ದಾಡಿದ್ದು ಅಪ್ಪನ ಕಣ್ರೆಪ್ಪೆ ನೋಯಿಸಿತ್ತಾ. ಅಪ್ಪನ ಅಕ್ಕ ತಂಗಿಯರ ಬಗ್ಗೆ ಯೋಚಿಸಿ ಅಜ್ಜಿ ದಂಗಾಗಿದ್ದು ಅಪ್ಪನ ಕರಳು ಕರೆದಿತ್ತಾ.”
ಮಂಜುಳ ಡಿ ಬರೆದ ಲಹರಿ ನಿಮ್ಮ ಓದಿಗೆ

Read More

ಹಳ್ಳಿ ಮೇಷ್ಟರ ಕಾವ್ಯದ ಸೋಜಿಗ: ಸುಚೊ ಕುರಿತು ನಾದಾ ಬರಹ

“ಒಂದು ಎಳವೆಯಿಂದಲೆ ಅವರು ನಡೆಸಿಕೊಂಡು ಬಂದ ಓದು. ಮಾಸ್ತಿ, ಅಡಿಗ, ಹಾಮಾ ನಾಯಕರಂಥವರ ಮುಂದೆ ನಿಂತು ಮಾತನಾಡಬೇಕಿದ್ದರೆ ಅವರನ್ನು ಚೆನ್ನಾಗಿಯೇ ಓದಿರಬೇಕು. ಓದಿರಲೇಬೇಕು. ಚೊಕ್ಕಾಡಿಯವರು ತಮ್ಮ ತಂದೆಯವರಿಂದ ಬಂದ ‘ಮನೆಮನೆಗೆ ಪುಸ್ತಕ ಮಾರಾಟ’ದ ಉಪ ಉದ್ಯೋಗವನ್ನು ನಿಭಾಯಿಸುತ್ತಿದ್ದುದರಿಂದ ಮಾರಾಟಕ್ಕೆಂದು ತರಿಸುತ್ತಿದ್ದ ಪುಸ್ತಕಗಳನ್ನು ಮೊದಲು ತಾವು ಓದಿ ಬಳಿಕ ಮಿಕ್ಕವರಿಗೆ ಓದಿಸುತ್ತಿದ್ದರು ಎಂದರೆ ಅಚ್ಚರಿ ಪಡಬೇಕಿಲ್ಲ. ಹಳ್ಳಿಯಲ್ಲಿ ಕುಳಿತು ಅವರು…”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ