Advertisement

Category: ಸಂಪಿಗೆ ಸ್ಪೆಷಲ್

ಅಜ್ಜಯ್ಯನ ಸವಾರಿ: ಚಂದ್ರಮತಿ ಸೋಂದಾ ಬರೆದ ಪ್ರಬಂಧ

“ಅಜ್ಜಯ್ಯ ನೆಂಟರ ಮನೆಗೆ ಹೋದರೂ ತಮ್ಮ ದಿನಚರಿಯನ್ನು ಬದಲಿಸಿದವರಲ್ಲ. ಸಂಜೆಹೊತ್ತಿಗೆ ಮನೆಯ ಸುತ್ತಮುತ್ತ ಇರುವ ಕೋಲು, ಕಡ್ಡಿ, ತೆಂಗು, ಅಡಿಕೆಮರಗಳ ಒಣಗಿದ ತುಂಡು ಹೀಗೆ ಬಚ್ಚಲೊಲೆಗೆ ಬೇಕಾಗುವ ಎಲ್ಲವನ್ನು ಒಟ್ಟುಗೂಡಿಸುತ್ತಿದ್ದರು. ಅವನ್ನೆಲ್ಲ ಬಚ್ಚಲ ಒಲೆಯ ಹತ್ತಿರ ಜೋಡಿಸಿಡುತ್ತಿದ್ದರು. ಬೆಳಗ್ಗೆ ಐದುಗಂಟೆಗೆ ಎದ್ದು ಒಲೆಗೆ ಉರಿ ಮಾಡುವುದು ಅವರ ರೂಢಿ. ರಾತ್ರೆ ಮಲಗುವಾಗ ತಲೆಯ ಹತ್ತಿರ ತಮ್ಮ ಲಾಟೀನನ್ನು ಸಣ್ಣಗೆ ಉರಿಸುವ ಅವರಿಗೆ ಒಲೆಗೆ ಬೆಂಕಿ ಹಿಡಿಸುವುದು ಸುಲಭವಾಗಿತ್ತು…”

Read More

ಆನೆ ಬಂತೊಂದಾನೆ… ಅಲ್ಲ.. ಮೂರಾನೆ!

“ಆ ಸುದ್ದಿ ಓದಿ ಎರಡು ಮೂರು ದಿನವಾಗಿರಲಿಲ್ಲ, ಮನೆ ಕೆಲಸಕ್ಕೆ ಬರುವ ಗಂಗೆ ಒಂದು ಬೆಳಗ್ಗೆ ಅತ್ತೆ ಹತ್ತಿರ ಕೊಡವ ಭಾಷೆಯಲ್ಲಿ ಗಂಭೀರವಾಗಿ ಏನನ್ನೋ ಮಾತನಾಡುತ್ತಿದ್ದರು. “ರಾತ್ರಿ ಎಲ್ಲ ನಿದ್ದೆಯೇ ಇಲ್ಲ ಅಕ್ಕಯ್ಯಾ… ಹೀಗೇ ಇವು ಬರ್ತಾ ಹೋದ್ರೆ, ಎಂತ ಮಾಡೋದು ನಾವು? ಗಾಬರಿಯಾಯ್ತದೆ. ಬೆಳಗ್ಗೆ ಬೆಳಗ್ಗೆ ಬೇಗ ಕೆಲಸಕ್ಕೆ ಬಾ ಅಂತಾರೆ. ಒಂದೊಂದ್‌ ಸಲಾ.ಕೆಲ್ಸಾ ಮುಗ್ಸಿ ಮನೇಗ್‌ ಹೋಗೋದು ಲೇಟಾಯ್ತದೆ. ರಾತ್ರಿ ಒಬ್ಬರೇ ಸಿಕ್ರೆ ಬಿಡ್ತಾವ..? ತುಳ್ದು ಜಜ್ಜಿ ಹಾಕ್ತವೆ…”..”

Read More

ಊರು, ಉರಿಬಿಸಿಲು ಮತ್ತು ಉಪ್ಪಿಟ್ಟು-ಚಹಾ

“ಅಲ್ಲಿನ ಉಪ್ಪಿಟ್ಟಿಗಿರುವ ರುಚಿಯೇ ಬೇರೆ. ಬೆಂಗಳೂರಿನವರ ಹಾಗೆ ಬನ್ಸಿ ರವೆಯಲ್ಲೋ, ಅಥವಾ ನಾಲಿಗೆ ಹೆಚ್ಚು ರುಚಿಯನ್ನು ಬಯಸುವಾಗ, ತುಪ್ಪದಲ್ಲಿ ಹುರಿದ ಚಿರೋಟಿ ರವೆಯಲ್ಲೋ ಮಾಡುವ ಉಪ್ಪಿಟ್ಟಲ್ಲ ಅದು. ದಪ್ಪ ರವೆಯ ಒಂಚೂರು ಹೆಚ್ಚಿಗೆಯೇ ಅನ್ನಿಸುವಷ್ಟು ಎಣ್ಣೆಯ ಒಗ್ಗರಣೆಯಲ್ಲಿ ಯಥೇಚ್ಚವಾಗಿ ಸುರಿದ ಉಳ್ಳಾಗಡ್ಡಿ (ಈರುಳ್ಳಿ), ಕರಿಬೇವು, ಸಾಸಿವೆ, ಜೀರಿಗೆ ಮತ್ತು ತಿಂದವರ ಮೂಗು ಸೋರುವಷ್ಟು ಖಾರದ ಮೆಣಸನ್ನು ಹಾಕಿದ ಉಪ್ಪಿಟ್ಟದು. ಅದರ ರುಚಿ ತಿಂದವರಿಗೇ ಗೊತ್ತು”

Read More

ಬಾಲ್ಯವೆನ್ನುವ ರಾತ್ರಿರಾಣಿಯ ಪರಿಮಳ

“ಒದ್ದೆಯಾಗಿರುತ್ತಿದ್ದ ಯೂನಿಫಾರ್ಮು ಎಲ್ಲರ ಮಾತುಗಳನ್ನು ಆಲಿಸುತ್ತಲೇ ಮರದ ಮಣೆಯ ಮೇಲೆ ಕುಳಿತು ಇಂಚಿಂಚಾಗಿ ಒಣಗುತ್ತ ಮರುದಿನದ ಕ್ಲಾಸಿಗೆ ರೆಡಿಯಾಗುತ್ತಿತ್ತು. ಬಣ್ಣಬಣ್ಣದ ಕರ್ಟನ್ನುಗಳನ್ನು ಆಗೊಮ್ಮೆ ಈಗೊಮ್ಮೆ ಒದ್ದೆಯಾಗಿಸುವ ಮಳೆಹನಿಗಳನ್ನು ನೋಡುತ್ತ ಸೋಫಾದ ಮೇಲೆ ಕುಳಿತು ಟೀ ಕುಡಿಯುವಾಗಲೆಲ್ಲ, ಬಚ್ಚಲೊಲೆಯ ಬಿಸಿಬೂದಿಯಲ್ಲಿ ಸಿಡಿಯುತ್ತ ಬಾಯಲ್ಲಿ ನೀರೂರಿಸುತ್ತಿದ್ದ. ಹಲಸಿನಬೀಜವನ್ನು ನೆನಪಿಸಿಕೊಂಡು….”

Read More

ಅಂಗಾಲಿಗೆ ಕೆಂಡವನ್ನೆ ಕಟ್ಟಿಕೊಂಡ ಕಾಲು…

“ನಾನು ಹಪಹಪಿಸುತ್ತಿದ್ದ ಊರು ನನಗೆ ನಿಧಾನಕ್ಕೆ ಹತ್ತಿರವಾಗತೊಡಗಿತು. ಮೊದಮೊದಲು ನನಗೆ ಇಲ್ಲಸಲ್ಲದ ಮರ್ಯಾದೆ ಕೊಟ್ಟು ಕಿರಿಕಿರಿ ಉಂಟು ಮಾಡುತ್ತಿದ್ದ ಸ್ನೇಹಿತರು ಮೊದಲಿನಂತೆ ಭಾಸ್ಕಳಬೈದು ಮಾತನಾಡಿಸುವಷ್ಟು ನನ್ನನ್ನು ಹತ್ತಿರ ಸೇರಿಸಿಕೊಂಡರು. ನಾನಂತೂ ಸಿಕ್ಕಿದ್ದೇ ಚಾನ್ಸು ಎಂದುಕೊಂಡು ಅವರು ಎಲ್ಲಿಗೇ ಕರೆದರೂ ಅವರ ಹಿಂದೆ ಹೋಗತೊಡಗಿದೆ. ಒಂದೇ ತಿಂಗಳಲ್ಲಿ ಅವರ ಚಾಷ್ಟಿತಾಣಗಳ ಖಾಯಂ ಅಭ್ಯರ್ಥಿಯಾಗಿಬಿಟ್ಟೆ. ಆಫೀಸು ಕೆಲಸಗಳನ್ನೆಲ್ಲಾ ರಾತ್ರಿಯೇ ಮುಗಿಸಿಬಿಟ್ಟಿರುತ್ತಿದ್ದೆನಾದ್ದರಿಂದ..”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ