Advertisement

Category: ಸರಣಿ

ಹೀಗೊಂದು ಕುಟುಂಬದ ಕೆಲವೊಂದು ಪುಟಗಳು

ಒಂದು ಕಾಲದಲ್ಲಿ ಬಹಳ ಜನಪ್ರಿಯವಾಗಿದ್ದ ತಾಯಿನಾಡು ಪತ್ರಿಕೆಯನ್ನು ಆರಂಭಿಸಿ ಮುನ್ನಡೆಸಿದ ಪಾಲಹಳ್ಳಿ ರಾಮಯ್ಯ ಅವರ ಮಗ ಪಾಲಹಳ್ಳಿ ವಿಶ್ವನಾಥ್ ಅವರು ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ದೇಶವಿದೇಶಗಳಲ್ಲಿ ವಿಜ್ಞಾನವನ್ನು ಬೋಧಿಸಿದವರು. ತಮ್ಮ  ತಂದೆಯವರು ಆ ಕಾಲಕ್ಕೇ ಪ್ರಭುತ್ವವನ್ನು ಎದುರು ಹಾಕಿಕೊಂಡು ಪತ್ರಿಕೋದ್ಯಮವನ್ನು ನಿಭಾಯಿಸಿದ ಬಗೆ ಹಾಗೂ…”

Read More

ಉನ್ಮಾದಕತೆಯನ್ನು ಬದಿಗಿರಿಸಿದ ಮೆಕ್ಸಿಕೋ ಸಿನಿಮಾ ʻರೋಮಾʼ

ಕ್ಲಿಯೋಳ ಪ್ರಿಯಕರ ಮಾರ್ಷಿಯಲ್ ಆರ್ಟ್ಸ್‌ ಪ್ರವೀಣ. ಕ್ಲಿಯೋಳ ಎದುರು, ಬಹುಶಃ ಅನಗತ್ಯವಾಗಿ, ನಗ್ನನಾಗಿ ಅದರ ವೈಖರಿಯನ್ನು ಪ್ರದರ್ಶಿಸುತ್ತಾನೆ. ಕ್ಲಿಯೋ ತನ್ನ ಪ್ರಿಯಕರನ ಜೊತೆ ಇದ್ದಾಗಲೂ ಹೆಚ್ಚು ಉನ್ಮಾದಕರ ಭಾವ ಪ್ರಕಟಿಸುವುದಿಲ್ಲ. ನಸುನಗೆಯಲ್ಲಿಯೇ ವರ್ತಿಸುತ್ತಾಳೆ. ಅವಳದು ಚೌಕು ಎನ್ನಬಹುದಾದ ಮುಖದ ಆಕಾರ. ಕಂದು ಬಣ್ಣದ ಅವಳ ಮುಖದಲ್ಲಿ ಎದ್ದು ಕಾಣುವುದು ಕಣ್ಣು ಮಾತ್ರ. ಅದರ ಸೂಕ್ಷ್ಮವಾದ ಚಲನೆಯೇ ಭಾವ ಪ್ರಕಟಣೆಗೆ ಬೆಂಬಲ.

Read More

ಬೋರ್ಡಿಂಗ್ ನಲ್ಲಿ ಸರ್ವಧರ್ಮದ ಸೌಹಾರ್ದ ಗೀತ

ನನ್ನ ಬಾಲ್ಯಕಾಲದಲ್ಲಿ ಎಲ್ಲ ಸಮುದಾಯಗಳಲ್ಲಿ ಇಂಥ ಸಂವೇದನಾಶೀಲ ಮತ್ತು ನ್ಯಾಯನೀತಿಯ ಹಿರಿಯರು ಇದ್ದರು. ತಪ್ಪುಗಳು ಘಟಿಸಬಾರದು ಎಂಬುದಕ್ಕೆ ‘ನಾಲ್ಕು ಜನ ಏನಂದಾರು?’ ಎಂದು ತಪ್ಪು ದಾರಿ ಹಿಡಿಯುವ ಲಕ್ಷಣವುಳ್ಳವರಿಗೆ ಅವರು ಪ್ರಶ್ನಿಸುತ್ತಿದ್ದರು. ಅಂದಿನ ಕಾಲದಲ್ಲಿ ಸಮಾಜವೇ ದೈವವಾಗಿತ್ತು. ಹಿರಿಯರೇ ನ್ಯಾಯಾಧೀಶರಾಗಿದ್ದರು. ಇತರ ಅನುಭವಿಗಳೇ ವಕೀಲರಾಗಿದ್ದರು.

Read More

ವ್ಯಂಗ್ಯ ದರ್ಶನದ ಕವಿ ಪಾ.ವೆಂ. ಆಚಾರ್ಯ

ಪಾವೆಂ ಅವರ ನೆಚ್ಚಿನ ಸಾಹಿತ್ಯ ಪ್ರಕಾರ ಕಾವ್ಯ. ಪಾ. ವೆಂ. ಅವರು ನವೋದಯ ಪಂಥದಿಂದ ನವ್ಯಕ್ಕೆ ಬಂದ ಒಬ್ಬ ಪ್ರಮುಖ ಕವಿ. ಅವರ ಮೊದಲನೆಯ ಸಂಕಲನ `ನವನೀರವ’ ದಲ್ಲಿ ನವೋದಯ ಸಂವೇದನೆಯ ಕವಿತೆಗಳು ಮತ್ತು ಸಮಾಜದ ವಾಸ್ತವಗಳನ್ನು ಹೊಸ ಬಗೆಯಲ್ಲಿ ಹಾಸ್ಯ ದೃಷ್ಟಿಕೋನದಿಂದ ನೋಡಲಾರಂಭಿಸಿದ ಕವಿತೆಗಳಿವೆ. ಸಂಖ್ಯೆಯ ದೃಷ್ಟಿಯಿಂದ ಅವರು ಬರೆದ ಕವನಗಳು ಹೆಚ್ಚಿಲ್ಲ. ನವೋದಯ ಮತ್ತು ನವ್ಯ ಎರಡೂ ಬಗೆಯ ಕಾವ್ಯ ಪ್ರಕಾರಗಳಲ್ಲೂ ಅವರು ಕವನಗಳನ್ನು ರಚಿಸಿದ್ದಾರೆ.

Read More

ವಾರಂಟ್ ಎಂಬ ಮಾಯಾ ಬಜಾರ್

ಆಗ ರಸ್ತೆಗಳು ಅಷ್ಟು ಸರಿ ಇಲ್ಲದ್ದರಿಂದ ಮಡಿಕೇರಿಯಿಂದ ಬೆಂಗಳೂರಿಗೆ ಸಾಧಾರಣ ಏಳರಿಂದ ಎಂಟು ಗಂಟೆ ಸಮಯ ಬೇಕಿತ್ತು. ನಮ್ಮ ಸರಕಾರಿ ಕೆಂಪು ಬಸ್ಸಿನ ಪ್ರಯಾಣ ನಿಮಗೆಲ್ಲರಿಗೂ ಖಂಡಿತ ತಿಳಿದೇ ಇರುತ್ತದೆ. ಸೊಂಟ ಕುಲುಕಿಸಿಕೊಂಡು, ರಸ್ತೆಯ ಗುಂಡಿಗಳಲ್ಲಿ ಏಳುತ್ತಾ ಬೀಳುತ್ತಾ ಮುಂದೆ ಸಾಗಿದ ಬಸ್ಸನ್ನು ಮಂಡ್ಯದಲ್ಲಿ ತಿಂಡಿಗೆಂದು ನಿಲ್ಲಿಸಿದರು. ನಾನು ಕೆಳಗೆ ಇಳಿದು ಬಂದೆ. ಚಂದ್ರಶೇಖರನು ನನ್ನ ಜೊತೆಯಲ್ಲಿ ಬಂದು ನನ್ನ ಪಕ್ಕದಲ್ಲೇ ನಿಂತ.

Read More

ಜನಮತ

ಸಿನಿಮಾ ಕವಿ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

10 hours ago
‘ಕಾವ್ಯದ ಕನ್ನಡಿಯಲ್ಲಿ ಕಂಡ ಜೀವನಪಥ’

https://t.co/bhf6PnH4Cw
13 hours ago
ಪ್ರೇಯಸಿ ವಿಷವುಣಿಸುತ್ತಾಳೆ ಎಂದು ಅಳುವ ಆ ಪುಟ್ಟ ಪೋರ

https://t.co/wiJRdM9igR
1 day ago
ಹೀಗೊಂದು ಕುಟುಂಬದ ಕೆಲವೊಂದು ಪುಟಗಳು

https://t.co/caLWrHgwGM

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕಂಬಾರರಿಗೆ ಒದಗಿ ಬಂದ ಮತ್ತೊಂದು ಕತೆ ಚಾಂದಬೀ ಸರ್ಕಾರ

ದೇಶಪಾಂಡೆ ಅವರ ಮನೆಯಿಂದ ಖಾನ್ ಇದ್ದ ಸ್ಥಳಕ್ಕೆ ತಲುಪುವತನಕ ಚಾಂದಬೀ ಭೂಮಿಯ ಮೇಲೆ ಕಾಲೂರಲೇ ಇಲ್ಲ. ಕ್ಷಣಕ್ಕೊಮ್ಮೆ ಗರ್ಭವ ಮುಟ್ಟಿ ನೋಡಿಕೊಳ್ಳುತ್ತ ಪ್ರತಿಸಲವೂ ಹೊಸ ಹೊಸದಾಗಿ ಕೃಷ್ಣನ...

Read More