Advertisement

Category: ಸರಣಿ

ಜೈಲು ಮತ್ತು ಮಳೆ: ಕೆ. ಸತ್ಯನಾರಾಯಣ ಸರಣಿ

ದೂರದೃಷ್ಟಿಯುಳ್ಳ ಆಡಳಿತಗಾರರ ಲೆಕ್ಕಾಚಾರವನ್ನೂ ಮೀರಿ ಅಪರಾಧಿಗಳು, ಪಾಪಿಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಲೇ ಇತ್ತು. ನಗರವು ಬೆಳೆದಂತೆ, ಎಲ್ಲ ವರ್ಗದ ಜನರು, ತಂತ್ರಜ್ಞರು, ಪೋಲೀಸರು ಕೂಡ ಹೆಚ್ಚಾಗುತ್ತಾರೆ ಎಂಬುದು ನಿಜವಾದರೂ, ಅಪರಾಧಿಗಳ ಸಂಖ್ಯೆಯ ಬೆಳವಣಿಗೆಯ ದರ ಎಲ್ಲ ಅನುಪಾತಗಳನ್ನೂ ಮೀರಿತ್ತು. ಪೋಲೀಸರ ದಕ್ಷತೆ, ನಾಗರಿಕರ ಸಮಾಜಪ್ರಜ್ಞೆಯಿಂದಾಗಿ ಎಲ್ಲ ಠಾಣೆಗಳಲ್ಲೂ ಹೆಚ್ಚು ಹೆಚ್ಚು ದೂರುಗಳು ಬರುತ್ತಿದ್ದವು, ದಾಖಲಾಗುತ್ತಿದ್ದವು. ಕಳ್ಳರು, ಕೊಲೆಗಡುಕರು ಕೂಡ ಬೇಗ ಬೇಗ ಸಿಕ್ಕಿಹಾಕಿಕೊಳ್ಳುತ್ತಿದ್ದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಐದನೆಯ ಬರಹ ನಿಮ್ಮ ಓದಿಗೆ

Read More

ಅಡಕತ್ತರಿಯಲ್ಲಿ ನಿಂತು…: ಗುರುಪ್ರಸಾದ ಕುರ್ತಕೋಟಿ ಸರಣಿ

ಬಂದು ಆಗಲೇ ಮೂರು ದಿನಗಳಾಗಿತ್ತು. ನಾನು ತಾಳ್ಮೆ ಕಳೆದುಕೊಳ್ಳತೊಡಗಿದೆ. ಇನ್ನೂ ಎಲ್ಲಿ ಕೆಲಸಕ್ಕೆ ಹೋಗಬೇಕು ಅಂತ ನನ್ನ ದಾಸ್ ಬಾಸ್ ಯಾಕೆ ಹೇಳುತ್ತಿಲ್ಲ ಅಂತ ದಿಗಿಲು ಉಂಟಾಯಿತು. ಫೋನಾಯಿಸಿ ಕೇಳಿದೆ ಕೂಡ. ಇರಿ ಇವತ್ತು ಸಂಜೆ ನಿಮ್ಮ ಹೊಟೇಲ್ ಹತ್ತಿರ ಸಿಗುವೆ ಅಂದರು ದಾಸ್. ಸಂಜೆ ಸ್ವಲ್ಪ ತಡವಾಗಿಯೇ ಆದರೂ ಬಂದರು. ಚಳಿ ಈಗಾಗಲೇ ಶುರುವಾಗಿತ್ತು. ಹೀಗಾಗಿ ಅವರ ಕಾರ್ ಅನ್ನು ಶುರು ಇಟ್ಟುಕೊಂಡೆ ಅದರ ಒಳಗಡೆಯೇ ಮಾತಾಡಲು ಕೂತೆವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಬಾಲ್ಯದ ಅಟ, ಆ ಮೊಂಡಾಟ ಇನ್ನೂ ಮರೆತಿಲ್ಲ!: ಬಸವನಗೌಡ ಹೆಬ್ಬಳಗೆರೆ ಸರಣಿ

ನಮ್ಮ ಮನೆಯಲ್ಲೋ ರಾಗಿ ಮುದ್ದೆ ಊಟ ಇರುತ್ತಿತ್ತು. ಅದು ಕಪ್ಪಾಗಿ ಇರುತ್ತಿದ್ದರಿಂದ ಉಣ್ಣೋಕೆ ಅಳುತ್ತಿದ್ದೆ. ಅಜ್ಜಿ‌ ಮನೆಯಲ್ಲಿ ಜೋಳದ ಮುದ್ದೆ ಬೆಳ್ಳಗೆ ಇರುತ್ತಿದ್ದರಿಂದ ಅದನ್ನು ಉಣ್ಣುತ್ತಿದ್ದೆ‌. ಒಮ್ಮೆ ಅಮ್ಮನ ಒತ್ತಾಯಕ್ಕೆ ಊಟ ಮಾಡಿ, ಕಕ್ಕಸ್ಸು ಕಪ್ಪಾದಾಗ ಬಹಳ ಬೇಸರವಾಗಿ ಮತ್ತೆ ಅಮ್ಮ ಉಣಿಸೋಕೆ ಬಂದಾಗ ಬಾಯೇ ತೆರೆಯದೇ ಊಟ ಮಾಡೋಕೆ ಹಠ ಮಾಡಿದ್ದೆ. ಅನ್ನಕ್ಕೆ ತತ್ವಾರ ಇದ್ದ ಕಾಲವದು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂರನೆಯ ಕಂತು

Read More

ಬೆಂಗಳೂರು ಮತ್ತು ವಿಚಾರವಾದ: ಎಚ್. ಗೋಪಾಲಕೃಷ್ಣ ಸರಣಿ

ವಿಶ್ವವಿದ್ಯಾಲಯದ ಆಗಿನ ಉಪಕುಲಪತಿ ಆಗಿದ್ದ ಶ್ರೀ ಗೋಕಾಕ್ ಅವರು ಬಾಬಾ ಶಿಷ್ಯರಾಗಿದ್ದರು. ಅದೇರೀತಿ ರಾಜ್ಯಪಾಲರು, ಕೇಂದ್ರ ರಾಜ್ಯ ಸಚಿವರು, ಖ್ಯಾತ ವೈದ್ಯರು, ಉತ್ತಮ ವಿದ್ಯೆ ಪಡೆದು ಉನ್ನತ ಸ್ಥಾನದಲ್ಲಿರುವವರು ಬಾಬಾ ಅವರ ಶಿಷ್ಯಗಣದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ಸುಮಾರು ಭಕ್ತರು ತಮ್ಮ ಮಕ್ಕಳಿಗೆ ಸಾಯಿಬಾಬಾ ಹೆಸರನ್ನು ವಿವಿಧ ರೀತಿಯಲ್ಲಿ ಇಟ್ಟಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಕಾಷ್ಟತಲ್ಪದೊಂದಿಗೆ ಗ್ರೂಪ್ ಸ್ಟಡಿ: ಸುಮಾವೀಣಾ ಸರಣಿ

ಗ್ರೂಪ್ ಸ್ಟಡಿಯಲ್ಲಿ ಮೆಹೆಂದಿ ಹೇಗೆ ಮಾಡುವುದು. ನೇಲ್ಸ್ ಹೇಗೆ ಶೇಪ್ ಮಾಡುವುದು, ನೇಲ್ ಪಾಲಿಶ್ ಹೇಗೆ ಹಚ್ಚಬೇಕು ಇತ್ಯಾದಿ ಚರ್ಚೆಗಳ ಸಂಗಡ ಮಾಸಿಕ ಮುಟ್ಟಿನ ವಿಚಾರಗಳೂ ಇರುತ್ತಿದ್ದವು. ಮಾಸಿಕ ಮುಟ್ಟಿನ ವಿಚಾರ ಈಗಿನ ಮಕ್ಕಳಿಗೆ ತಿಳಿದಿರುವಷ್ಟು ಆಗ ನಮಗೆ ತಿಳಿದಿರಲಿಲ್ಲ. ಹಾಗಾಗಿ ಆ ವಿಚಾರ ತಿಳಿಯುವ ಕುತೂಹಲ ಇರುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ