Advertisement

Category: ಸರಣಿ

ಕವಿತೆಯ ಓದು ಚಲನಚಿತ್ರದಂತಿರಬೇಕು : ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಓದುಗ/ಓದುಗಳು ಕವನ ಓದುವಾಗ ಒಂದು ಚಲನಚಿತ್ರ ನೋಡಿದಂತೆ ಅನಿಸಿದರೆ ಆ ಕವನ ಯಶಸ್ವಿಯಾದಂತೆ ಅಂತ ನಾನು ಯಾವಾಗಲೂ ಹೇಳುವೆ. ಇದಲ್ಲದೆ, ಚಲನಚಿತ್ರಗಳು ಮತ್ತು ಕವನಗಳು ಇನ್ನೊಂದು ರೀತಿಯಲ್ಲಿ ಕೂಡ ಸಮಾನತೆ ಹೊಂದಿವೆ ಎಂದು ನಾನು ನಂಬುತ್ತೇನೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲಿಥುವೇನಿಯಾ ದೇಶದ ಕವಿ ಇಂಡ್ರೆ ವಲಾಂಟಿನಾಯ್ಟೆ-ಯವರ (Indrė Valantinaitė) ಕಾವ್ಯದ ಕುರಿತ ಬರಹ

Read More

ನೀ ನನಗಿದ್ದರೆ ನಾ ನಿನಗೆ: ಚಂದ್ರಮತಿ ಸೋಂದಾ ಸರಣಿ

ನಮ್ಮ ಬದುಕಿಗೆ ಹತ್ತಿರವಾದ ಹಕ್ಕಿಗಳಲ್ಲಿ ಕಾಗೆ, ಕೋಳಿಗಳೂ ಸೇರುತ್ತವೆ. ಕಾಗೆ ಬಣ್ಣ ಕಪ್ಪು ಅಂತ ಅದನ್ನು ಹಳಿಯುವುದಿದೆ. ಯಾರಾದರೂ ತಮ್ಮ ಮಕ್ಕಳನ್ನು ಹೊಗಳುತ್ತಿದ್ದರೆ ʻಕಾಗೆ ತನ್ನ ಮರಿ ಹೊನ್ನಮರಿ ಅಂದಿತ್ತಂತೆʼ ಎಂದು ಮೂಗುಮುರಿಯುವವರೂ ಇದ್ದಾರೆ. ಕೆಲವು ಬಾರಿ ಮಕ್ಕಳನ್ನು ನಂಬಿಸಲು ಕಾಗೆಯ ಬಳಕೆ ಇದೆ. ಮಗುವಿಗೆ ಕೊಡಬಾರದು ಎಂದಿರುವ ತಿನಿಸನ್ನು ಅದು ಬೇಕೇಬೇಕು ಎಂದು ಹಟಮಾಡಿದರೆ ʻಕಾಕಪಾಯಿ ಕಚ್ಗೊಂಡು ಹೋಯ್ತʼ ಅಂತ ಹೇಳುವುದಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಕೊಡಗಿನ ಮೂವರು ಮಹನೀಯರು: ಸುಮಾವೀಣಾ ಸರಣಿ

ಪಂಜೆ ಮಂಗೇಶರಾಯರು “ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ” ಎಂದು ಭೂರಮೆಯನ್ನು ಅಪ್ರತಿಮ ಪ್ರಕೃತಿ ಸೌಂದರ್ಯದ ಹಿನ್ನೆಲೆಯಲ್ಲಿ ಹಾಡಿ ಮುಂದೆ “ಸವಿದು ಮೆದ್ದರೋ ಹುಲಿಯ ಹಾಲಿನ ಮೇವನು ಕವಣೆ ತಿರಿಕಲ್ಲಾಟ ಹಗ್ಗಕ್ಕೆ ಸೆಳೆದರೋ ಹೆಬ್ಬಾವನು?” ಎಂದು ಬರೆಯುತ್ತಾರೆ. ಇದು ಅಕ್ಷರಶಃ ಸತ್ಯ. ಅಂಥ ಕೆಚ್ಚೆದೆಯ ಅಪ್ರತಿಮ ವೀರರು ಈ ಮೂವರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಅಂಗಿ, ಮತ್ತದರ ಪ್ರಸಂಗಗಳು…: ಮಾರುತಿ ಗೋಪಿಕುಂಟೆ ಸರಣಿ

ಊರಿನ ಹುಡುಗರೆಲ್ಲ ನೋಡಿ ಹೇಗೆ ಹರಳೆಣ್ಣೆ ಹಚ್ಕೊಂಡು ಓಡಾಡ್ತ ಇದ್ದಾರೆ. ನಿಮಗೆ ಹಬ್ಬ ಬ್ಯಾಡ್ವ ಎಂದು ಅಜ್ಜಿ ಗದರಿದ್ದಳು. ನಾವೇನು ಹೊಸಬಟ್ಟೆ ಹಾಕ್ಕೋಳಲ್ಲ. ನಾವ್ಯಾಕೆ ಹರಳೆಣ್ಣೆ ಹಚ್ಕೊಬೇಕು ಎಂದು ಸುಮ್ಮನಾದೆವು. ಅಪ್ಪ ಬಂದು ಗದರಿದ. ನಾವು ವಿಧಿಯಿಲ್ಲದೆ ಅದಕ್ಕೆ ಸಿದ್ಧರಾದೆವು. ಎಣ್ಣೆಸ್ನಾನ ಆದಮೇಲೆ ಇದ್ದಕ್ಕಿದ್ದಂತೆ ಹೊಸ ಬಟ್ಟೆ ಕಾಣಿಸಿದವು. ಅವು ರೆಡಿಮೇಡ್ ಬಟ್ಟೆಗಳಾಗಿದ್ದವು. ಬುಟ್ಟಿ ತೋಳಿನ ರಬ್ಬರ್‌ನ ಎಳೆಯ ಅಲ್ಲಲ್ಲಿ ಮಿಂಚು ಕಾಣಿಸುವ ಇಂಗ್ಲೀಷ್ ಅಕ್ಷರದ ಉಲ್ಟಾ ಸೀದಾ ಅಡ್ಡ ಹೀಗೆ ನಾನಾ ರೀತಿ ಕಾಣುವ ಪ್ರಿಂಟೆಡ್ ಅಕ್ಷರಗಳ ಆ ‘ಅಂಗಿ’ ಆಧುನಿಕತೆಯ ‘ಟೀ ಶರ್ಟ್’ ಆಗಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನಾರನೆಯ ಕಂತು

Read More

ವಾಲ್ಕಾಟ್‌ ಎಂಬ ಮಹಾಕವಿ: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ವಾಲ್ಕಾಟ್‌ ಅವರ ಕವಿತೆಗಳನ್ನು ವಿಮರ್ಶಿಸುತ್ತಾ, ಕವಿ ಗ್ಲಿನ್ ಮ್ಯಾಕ್ಸ್‌ವೆಲ್‌ರು ಹೀಗೆ ಹೇಳುತ್ತಾರೆ; “ಕವಿಯಾಗಿ ವಾಲ್ಕಾಟ್‌ರ ಸಾಮರ್ಥ್ಯ ವಿಷಯವಸ್ತುಗಳ ಆಯ್ಕೆಯಲ್ಲಿ ಮತ್ತು ನಿರೂಪಣೆಯಲ್ಲಿ ಮಾತ್ರ ಅಡಗಿಲ್ಲ; ಅವರ ‘ಕಿವಿ’ ಅಥವಾ ‘ಶ್ರವಣ’ ಕೂಡ ದೊಡ್ಡ ಪಾತ್ರ ವಹಿಸಿದೆ.” ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ವೆಸ್ಟ್ ಇಂಡೀಸ್-ನ ಸೇಂಟ್ ಲೂಸಿಯಾ ದೇಶದ ಕವಿ ಡೆರಿಕ್ ವಾಲ್ಕಾಟ್-ರ (DEREK WALCOTT) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…

Read More

ಬರಹ ಭಂಡಾರ