Advertisement

Category: ಸಾಹಿತ್ಯ

ಮೋಹನ್‌ ಮಂಜಪ್ಪ ಬರೆದ ಈ ಭಾನುವಾರದ ಕಥೆ

ದೂರದ ಕಲ್ಲುಬೆಂಚಿನ ಮೇಲೆ ಕೂತಿದ್ದ ಅಪ್ಪನ ದೃಷ್ಠಿ ಶೂನ್ಯದಿಂದ ಮರಳಿರಲಿಲ್ಲ. ಮನಸ್ಸು ಗತಕಾಲದ ಕಡೆಗೆ ಹೊರಳಿತು. ಇವಳನ್ನು ತುಂಬಾ ಇಷ್ಟಪಟ್ಟು ಕಟ್ಟಿಕೊಂಡಿದ್ದೆ. ಹೊಸದರಲ್ಲೆಲ್ಲಾ ಚೆನ್ನಾಗಿಯೇ ಇತ್ತು, ಅಥವಾ ಬಿಸಿಯಲ್ಲಿ ಗೊತ್ತಾಗಲಿಲ್ಲವೆನೋ!? ಮದುವೆ ಆದ ಆರು ತಿಂಗಳಿಗೆ, ಮಲ್ಲಿಗೆ ಹೂವು ತರಲು ಮರೆತೆನೆಂದು ಮಾಡಿದ ಹಗರಣ ಮನಸ್ಸನ್ನು ತುಂಬಾ ಕದಡಿಬಿಟ್ಟಿತು. ಅಂದಿನಿಂದ ಅವಳೇ ಬೇಡ ಸಾಕು ಎನ್ನುವ ವರೆಗೆ ಫ್ರಿಡ್ಜ್‌ನಲ್ಲಿ ತರಕಾರಿ ಇಲ್ಲದಿದ್ದರೂ, ಮಲ್ಲಿಗೆ ಹೂವು ಮಿಸ್‌ ಆಗದಂತೆ ನೋಡಿಕೊಂಡಿದ್ದು ನನಗಿನ್ನೂ ನೆನಪಿದೆ.
ಮೋಹನ್‌ ಮಂಜಪ್ಪ ಬರೆದ ಕಥೆ “ಹಣೆಬರಹ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಇಂದ್ರಕುಮಾರ್‌ ಎಚ್.ಬಿ. ಬರೆದ ಕತೆ

ತನ್ನ ಮೇಲಿನ ಕೆಟ್ಟ ದೃಷ್ಟಿಗೆ ಹೊಲಸು ಮಾತಿಗೆ ತಕ್ಷಣವೇ ರಣಚಂಡಿಯಾಗಿ ಬಿಡುತ್ತಿದ್ದವಳು ಇತ್ತೀಚೆಗೆ ಮೌನಕ್ಕೆ ಶರಣಾಗತೊಡಗಿದ್ದು ಸರ್ಕಲ್ಲಿನಲ್ಲಿನ ಖಾಲಿ ತಿರುಗುವ ಜೀವಗಳಿಗೆ ಹೊಸ ಟಾಪಿಕ್ಕು ತಂದುಕೊಟ್ಟಿತ್ತು. ಕರಿಯಮ್ಮನ ಜೀವನದ ಅತಿ ಸಂಕಷ್ಟದ ದಿನಗಳು ಪ್ರಾರಂಭವಾಗಿಯೇ ಬಿಟ್ಟಂತೆ ಆಕೆಯ ಮಾತು ನಿಲುವು ಕೈಚಳಕ ಎಲ್ಲದರಲ್ಲೂ ಒಡಕು ಎದ್ದಿತ್ತು. ಹೋರಾಟದಿ ಕಟ್ಟಿಕೊಂಡ ಬಾಳು ವಿಲವಿಲ ಒದ್ದಾಡಿ ಸಾಯುತ್ತಿರುವಂತೆ ಆಕೆಗೆ ಭಾಸವಾಗತೊಡಗಿತು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಇಂದ್ರಕುಮಾರ್ ಎಚ್.ಬಿ. ಬರೆದ “ಚಾಕರಿಯಮ್ಮ” ಕಥೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗುರುರಾಜ್ ಸನಿಲ್ ಬರೆದ ಕತೆ

ಅಷ್ಟು ಕೇಳಿದ್ದೇ ತಡ, ಇಬ್ಬರ ಮುಖಗಳೂ ಕಳೆಗುಂದಿದುವು. ವಿಶ್ವನನ್ನು ತಿರಸ್ಕಾರದಿಂದ ನೋಡಿ ಕೋಪದಿಂದ ಮುಖ ಗಂಟಿಕ್ಕಿದ ಮುಖ್ಯಸ್ಥ ರಪ್ಪನೇ ತಿರುಗಿ ಯಂತ್ರದತ್ತ ನಡೆದರೆ, ಸ್ಥಳಪುರಾಣ ಓದಿದವನೂ ಕೆಂಪಗಾಗಿ ‘ಓ ಅಲ್ಲಿ ಕಾಣಿಸ್ತಿದೆಯಲ್ಲಾ ಹೊಳೆ… ಅದರಾಚೆಗಿಂದು ರಿಜರ್ವ್ ಫಾರೆಸ್ಟ್ ಇವ್ರೇ! ಈ ಜಾಗವೂ ಅದ್ರೊಳಗೆ ಬರುತ್ತೆ ಹೌದಾದ್ರೂ ಆ ಕಾನೂನು ಬರೋ ಎಷ್ಟೋ ಮೊದ್ಲಿಂದ್ಲೂ ಈ ದೇವಸ್ಥಾನ ಇಲ್ಲಿತ್ತೆಂಬುದು ನಿಮ್ಗೆ ಗೊತ್ತಿತ್ತಾ…?
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗುರುರಾಜ್ ಸನಿಲ್ ಬರೆದ “ಗುಡಿ ಮತ್ತು ಬಂಡೆ” ಕತೆ

Read More

ಸಚೇತನ ಭಟ್‌ ಅನುವಾದಿಸಿದ ಯಿ ಯುನ್ ಲಿ ಕತೆ “ಗಾಯ”

ಅವಳ ತಲೆಯಲ್ಲಿ ಯಾವತ್ತೋ ಓದಿದ್ದ “ವುಮನ್ ಇನ್ ಲವ್” ಪುಸ್ತಕದ ಸಾಲುಗಳು ಅಚ್ಚಳಿಯದಂತೆ ಕೂತಿದ್ದವು. ಪುಸ್ತಕದಲ್ಲಿ ಹುಡುಗಿಯೊಬ್ಬಳು ಯುದ್ಧಕ್ಕೆ ಹೊರಟಿರುವ ತನ್ನ ಪ್ರಿಯಕರನ ಜೊತೆಗೆ ಮಲಗುವದನ್ನು ನಿರಾಕರಿಸುತ್ತಾಳೆ. ಮುಂದೆ ಯುದ್ಧದಲ್ಲಿ ಅವನು ಸಾವನ್ನು ಪ್ರತಿ ದಿನ ಎದುರು ನೋಡುತ್ತಿರವಾಗ ಹಳೆಯ ನೆನಪಿನಿಂದಾಗಿ ದೇಹದ ಹಸಿವೆಯನ್ನು ತೀರಿಸಿಕೊಳ್ಳುವದು ಮಾತ್ರ ಅವನ ಗುರಿಯಾಗಿಬಿಟ್ಟರೆ ಎನ್ನುವ ಭಯ ಅವಳನ್ನು ಕಾಡಿತ್ತು.
ಸಚೇತನ ಭಟ್‌ ಅನುವಾದಿಸಿದ ಚೈನಾ ಮೂಲದ ಕಥೆಗಾರ್ತಿ ಯಿ ಯುನ್ ಲಿ ಕತೆ “ಗಾಯ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಟಿ.ಎಸ್.‌ ಗೊರವರ ಬರೆದ ಕತೆ

ಪದ್ಮಾಳ ಅತ್ತೆ, ಮಾವನಿಗೂ ಚಿಂತೆ ಮನೆ ಮಾಡಿತು. ತಮ್ಮ ವಂಶ ಬೆಳೆಸುವ ಕುಡಿ ಪಡೆಯಲು ಅದೇನು ಮಾಡಬೇಕೋ ತಿಳಿಯದಾಯಿತು. ದೇವರಾಜನಿಗೆ ಮತ್ತೊಂದು ಮದುವೆ ಮಾಡಿದರೆ ಹ್ಯಾಗೆ ಎನ್ನುವ ಆಲೋಚನೆ ಅವರಲ್ಲಿ ಮೊಳೆಯಿತು. ಕೆಲ ಸಂಬಂಧಿಕರು ಮದುವೆ ಮಾಡುವುದೇ ಸರಿಯೆಂದು ಸಲಹೆ ನೀಡಿದರು. ಇದು ಪದ್ಮಾಳ ಕಿವಿ ತಲುಪಿ ವಿಚಿತ್ರ ಸಂಕಟದಲ್ಲಿ ಮುಳುಗಿದಳು. ದಿನಪೂರ್ತಿ ಮಾತಿಲ್ಲದೆ ಚಿಂತೆಯಲ್ಲೇ ಮುಳುಗಿದಳು. ಲೋಕದ ಪರಿವೆಯನ್ನೇ ಮರೆಯತೊಡಗಿದಳು. ಟಿ.ಎಸ್. ಗೊರವರ ಬರೆದ ಕತೆ “ಕತ್ತಲಿನಾಚೆ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ