Advertisement

Category: ಸಾಹಿತ್ಯ

ಪವನ್‌ ಕುಮಾರ್‌ ಆರ್. ಬರೆದ ಈ ಭಾನುವಾರದ ಕತೆ

ಅಂಥ ಮಾತುಗಾರನಲ್ಲದೆ ಹೋದರು ವಸೀಬ ಶುದ್ಧ ವ್ಯವಹಾರಸ್ಥನಾಗಿದ್ದ. ಅವನ ಬಳಿ ಬರುವ ಗಿರಾಕಿಗಳೊಂದಿಗೆ ಹೇಗೆ ವರ್ತಿಸಿ ವಿಶ್ವಾಸಗಳಿಸಿಕೊಳ್ಳಬೇಕೆಂಬುದ ಸಾಕಷ್ಟು ಪ್ರಯತ್ನ ಪೂರ್ವಕವಾಗಿ ರೂಢಿಸಿಕೊಂಡಿದ್ದ. ಬೆಳಿಗ್ಗೆ 5ರ ಜಾವಕ್ಕೆ ಇವನ ಪೆಟ್ಟಿ ಅಂಗಡಿ ತನ್ನ ಜೋಡಿರೆಕ್ಕೆಯಂತ ಬಾಗಿಲುಗಳ ಬಿಡಿಸಿಕೊಳ್ಳುತ್ತಿತ್ತು. ಅಲ್ಲಿಗೆ ಅಂದಿನ ದಿನಪತ್ರಿಕೆಗಳೆಲ್ಲ ಬಂಡಲ್‌ನಲ್ಲಿ ಬಂದು ಬೀಳುತ್ತಿದ್ದವು. ಆರ್. ಪವನ್‌ ಕುಮಾರ್‌ ಬರೆದ ಈ ಭಾನುವಾರ್ದ ಕತೆ “ವಸೀಬ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ದೇವದಾಸ ಕಳಸದ ಕತೆ

ಇಲ್ಲಿ ದಡೂತೆಪ್ಪನ ಶೆಡ್ಡಿನ ಸಂಸಾರ ಮೂರ್ನಾಲ್ಕು ವರ್ಷ ನಿರಾಯಾಸವಾಗಿ ಸಾಗಿತು. ಕೂಡು ಸಂಸಾರದಿಂದ ಸಂಪಾದನೆಗೆ ಕುಂದೆಂದು ಭಾವಿಸಿದ್ದ ಚನ್ನಪ್ಪ ಪಕ್ಕದ ಬಡಾವಣೆಯಲ್ಲಿ ಬದುಕು ಕಟ್ಟಿಕೊಂಡಿದ್ದ. ವಾಚಮನ್ಕಿಯೊಂದಿಗೆ ಕಟ್ಟಡದ ಅನ್ಯ ಕೆಲಸಗಳಿಂದಲೂ ಗಳಿಕೆ ಹೆಚ್ಚಿಸಿಕೊಂಡಿದ್ದ. ಅವನಿಗೆ ಅಂಥ ಯಾವ ಚಟ ಇರಲಿಲ್ಲವೆಂದರೂ ರಾತ್ರಿ ಮಾತ್ರ ಅರವತ್ತು ಎಮ್ಮೆಲ್ ಬೇಕೇಬೇಕಿತ್ತು. ಆತನ ಅಕ್ಕ ಹನುಮವ್ವನೂ ಕಟ್ಟಡ ಕೆಲಸದಲ್ಲಿ ದುಡಿಯುತ್ತಿದ್ದಳು. ಡಾ. ದೇವದಾಸ ಕಳಸದ ಬರೆದ ಕತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ದೀಪ್ತಿ ಭದ್ರಾವತಿ ಕತೆ

ಅರುಂಧತಿಗೆ ಎದೆಯೊಳಗೆ ಕೊಳ್ಳಿದೆವ್ವ ಓಡಾಡಿದಂತೆ ಭಾಸವಾಯಿತು. ನರ್ಸು ಹಲ್ಲು ಕಚ್ಚಿಕೊಂಡಳಾದರೂ, ಆಯಾ ಮಾತ್ರ ಅದನ್ನು ಸಮರ್ಥಿಸಿಕೊಳ್ಳುವವಳಂತೆ “ಅಯ್ಯಾ ಇರೋದನ್ನ ಏಳುದ್ನಪ್ಪ” ಇವ್ರು ರಾತ್ರಿ ಎಲ್ಲ ಸುಖ ಪಟ್ಕೊಂಡು ಈವಾಗ ನಮ್ ತವ ಕೂಗ್‍ಕೊಂಡ್ರೆ ಏನ್ ಬತ್ತದೆ” ಎಂದಳು. ಅರುಂಧತಿಗೆಒಮ್ಮೆ ಹಾವು ಮೆಟ್ಟಿದಂತಾಗಿ ಸುಮ್ಮನೆ ಅವಳನ್ನೇ ಒಮ್ಮೆ ನೋಡಿದಳು. ಬೋಳು ಹಣೆ, ಬರಿಗೈ, ನಿರ್ವಿಕಾರ ಭಾವ ಅವಳ ಕುರಿತಾಗಿ ಬೇರೆ ಏನನ್ನೋ ಧ್ವನಿಸಿತು. ದೀಪ್ತಿ ಭದ್ರಾವತಿ ಬರೆದ ಕತೆ ‘ಸ್ಫೋಟ’ ನಿಮ್ಮ ಈ ಭಾನುವಾರದ ಓದಿಗೆ

Read More

ಡಾ. ಜ್ಯೋತಿ ಬರೆದ ಈ ಭಾನುವಾರದ ಕತೆ

ನಾನು, ಮಕ್ಕಳೊಂದಿಗೆ ಕಾಡು ಮೇಡು ಸುತ್ತುತ್ತಾ ಕಷ್ಟನಷ್ಟ ಅನುಭವಿಸುವಾಗ ಜೊತೆಗಿದ್ದು, ಅಂತೂ ಈಗ ಗದ್ದುಗೆ ಸಿಕ್ಕ ಮೇಲೆ ವೈರಾಗ್ಯ ಮೂಡಿ, ಅಕ್ಕ ಭಾವನ ಹಿಂದೆ ಹೆಜ್ಜೆಯಿಡುವ ನಿರ್ಧಾರ ಮಾಡಿ, ಕಾಡಿನತ್ತ ಮುಖ ಮಾಡಿದೆ. ನನ್ನ ಮಕ್ಕಳಿಗೆ ತಕ್ಷಣ ನಂಬಲಾಗಲಿಲ್ಲ. ಮೊದಲು ನಾನೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕುರುಕ್ಷೇತ್ರ ಯುದ್ಧರಂಗ ನೋಡಿದ ಮೇಲೆ ನನಗೆ ವೈರಾಗ್ಯ ಮೂಡಿತು. ಈ ವೈಭೋಗ, ಒಣ ಪ್ರತಿಷ್ಠೆ ಯಾವುದೂ ನನಗೆ ಬೇಕಿಲ್ಲವೆನಿಸಿತು. -ಡಾ.ಜ್ಯೋತಿ ಬರೆದ ಕತೆ ‘ಕುಂತಿಯ ಮುಸ್ಸಂಜೆ ಮಾತು’ ಇಂದಿನ ಓದಿಗಾಗಿ. 

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಟಿ.ಕೆ. ದಯಾನಂದ ಕತೆ

ಕಷ್ಟಪಟ್ಟು ಎದ್ದು ಗೋಡೆಗೆ ಒರಗಿಕೊಂಡ ಆಕೆ ಕೈ ಸನ್ನೆ ಮಾಡಿ ನೀರು ಕೇಳಿದಳು. ಹತ್ತಿರದಲ್ಲೇ ನಿಂತಿದ್ದ ಹುಡುಗಿಯೊಬ್ಬಳು ನೀರು ತಂದುಕೊಟ್ಟಳು. ನೀರು ಕುಡಿದು ಸುಧಾರಿಸಿಕೊಂಡ ಮೇಲೆ ಆಕೆ ದೊಡ್ಡ ಉಸಿರು ಬಿಟ್ಟು, ‘ಮಗ ಸತ್ತರೆ ತಾಯಿ ಏನು ಹೇಳ್ತಾಳಪ್ಪ. ಮಗ ಸತ್ತ, ಸಾಯಿಸಿದ್ರು’ ಎಂದು ಅಳಲು ಶುರುಮಾಡಿದಳು. ಕಣ್ಣೀರು ಒರೆಸಿಕೊಳ್ಳುತ್ತಾ, ‘ಇನ್ನೊಬ್ಬ ಮಗ ಇದ್ದಿದ್ರೆ ಆ ಪಾಪಿಗಳನ್ನ ಹೊಡೆದುಕೊಂದು ಈ ಸಾವಿಗೆ ಸೇಡು ತೀರಿಸ್ಕೊ ಅಂತ ಹೇಳಬೋದಿತ್ತು. ಆದ್ರೆ ಇದ್ದವ್ನು ಒಬ್ಬನೇ ಮಗ. ಅವನು ವಾಪಸ್ ಬರ್ತಾನಾ’ ಎಂದು ಬರಿಗಣ್ಣುಗಳಿಂದ ಅವನನ್ನು ನೋಡಿದಳು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ