Advertisement

Category: ಸಾಹಿತ್ಯ

ರಾಗಂ ಪುಸ್ತಕದ ಕುರಿತು ಮುರ್ತುಜಾಬೇಗಂ ಕೊಡಗಲಿ ಬರೆದ ಲೇಖನ

“ಕೊಂಚ ಮನ ತಹಬದಿಗೆ ಬಂದಂತಾಗಿ, ಗೆಳೆಯರೊಬ್ಬರ ಮನೆಗೆ ಹೋಗಿ, ಅಲ್ಲಿದ್ದ ಪುಟ್ಟ ಕಂದಮ್ಮಗಳ ಬೊಗಸೆ ತುಂಬಿಸಿಕೊಂಡು ಮುದ್ದಾಡಿದೆ. ಮಗಳಂತೆ ಕಾಣುವ ಅಪ್ಪ-ಅಮ್ಮನ ಜೊತೆ ಮಾತಾಡಿ, ಕೀಟ್ಸ್‍ ನ ಸಹವಾಸದಿಂದ ಹೊರಬಂದೆ. ‘ಯಪ್ಪಾ, ಬದುಕಿದೆ’ ಅಂತ ನಿಟ್ಟುಸಿರು ಬಿಟ್ಟೆ. ಮಹಾಶಯ ಕೈಬಿಡಲೇ ಇಲ್ಲ. ಮರುದಿನ ಮತ್ತೆ ಅವನದೆ ಕನವರಿಕೆ, ಮುಂದೇನಾಯಿತು? ನಮ್ಮ ದೋಸ್ತನಿಗೆ ಎಂಬ ಹಳವಂಡ. ಮತ್ತೆ ತೆಕ್ಕೆಗೆಳೆದುಕೊಂಡು ಅವನೊಂದಿಗೆ ಮಾತಾದೆ”

Read More

ಪ್ರಕಾಶ್ ಪೊನ್ನಾಚಿ ಬರೆದ ಈ ವಾರದ ಕಥೆ “ಪರಿಧಿ”

“ಬೆಳಗೆದ್ದರೆ ಯುಗಾದಿ ಹಬ್ಬ, ಊರಲ್ಲೆಲ್ಲಾ ಎತ್ತುಗಳನ್ನ ಸಿಂಗರಿಸಿ ನೇಗಿಲು ನೊಗವನ್ನೆಲ್ಲಾ ಸ್ವಚ್ಚಗೊಳಿಸಿ ಭೂಮಿ ತಾಯಿಗೆ ಒಂದೆರಡು ಸುತ್ತು ಉಳುಮೆ ಮಾಡಿ ಪೂಜೆ ಸಲ್ಲಿಸಿ ಆ ವರ್ಷದ ವ್ಯವಸಾಯಕ್ಕೆ ಪಾದಾರ್ಪಣೆಗೆ ಅಡಿಗಲ್ಲು ಹಾಕುವುದು ಮಾಮೂಲು. ಅಪ್ಪ ಎಂದಿನಂತೆ ಕೆಬ್ಬೆ ಹೊಲದಲ್ಲಿ ಎತ್ತುಗಳನ್ನು ಕೆಬ್ಬೆ ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿ ಹೊನ್ನೇರು ಕಟ್ಟಲು ಅಣಿ ಮಾಡುತ್ತಿದ್ದರು. ನಾನು, ಅಕ್ಕ ಹೂ, ವಿಭೂತಿ, ನೀರುಗಳನ್ನು ಹಿಡಿದು ಅಪ್ಪನ ಪೂಜೆ, ಮೊದಲ ಏರಿನ ಸುತ್ತು ನೋಡಲು ಕಾತುರದಿಂದ ಅಪ್ಪನ ..”

Read More

ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ: ಸಂವಾದಿ

“ಸಂಜನಾಳ ಬೆಳಗುಗಳು ನಂತರ ಮನೋಹರನ ಮೆಸೇಜುಗಳಿಲ್ಲದೇ ಆರಂಭವಾಗುತ್ತಿರಲಿಲ್ಲ. ಬೆಳ್ಬೆಳಿಗ್ಗೆ ಗುಲಾಬಿಗಳ ಗುಛ್ಛ ಬಂದರೆ ನಂತರ ಮೆಸೇಜುಗಳ ಸುರಿಮಳೆ. ಇಡೀ ಪುರಾಣ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಿದ್ದ. ಐಐಎಸ್ಸಿಯ ಮೈಕ್ರೋಬಯಾಲಜಿ ವಿಭಾಗದಲ್ಲಿದ್ದ. ಎಂಥ ಸೆಮಿನಾರೇ ಇರಲಿ, ಲೆಕ್ಚರ್ ಡೆಮಾನ್ಸ್ಟ್ರೇಷನ್ ಇರಲಿ. ಮೆಸೇಜು ತಪ್ಪುತ್ತಿರಲಿಲ್ಲ. ಸಂಜನಾಳೇ ಶೂಟಿಂಗ್ ಎಂದೊ ಎಡಿಟಿಂಗ್ ಎಂದೊ ಒಮ್ಮೊಮ್ಮೆ ಬೇಕೂಂತಲೇ ಉತ್ತರಿಸಲು ನಿಧಾನಿಸಿದರೂ ಬೇಸರವಿಲ್ಲದೆ ಇರುತ್ತಿದ್ದ. `”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಗೋಪಾಲಕೃಷ್ಣ ಪೈ ಬರೆದ ಕಥೆ

“ವೆಂಕು ಹೆಂಗ್ಸಿಗೆ ತನಗಾಗದ ಮಂದಿ ಯಾರೆಂದು ಊಹಿಸುವುದು ಸುಲಭವಾಗಿತ್ತು. ಅವರುಗಳು ಆಗಾಗ ಆ ಹೋಟೇಲಿಗೆ ಬರುವುದು ಕ್ರಮ. ಬರುವುದು ಕತ್ತಲಾದ ಮೇಲೆಯೇ. ಒಂದು ದೋಸೆ ತಿಂದು ಬೇಕೆಂದೇ ಆ ಗಂಡನಿಲ್ಲದವಳೊಡನೆ ಮಾತು ತೆಗೆಯುವುದು ರೂಢಿ. ಹೆಣ್ಣು ಹಸಿದಿದ್ದಾಳೆಂದು ವಾಸನೆ ಹಿಡಿಯುವ ಬೀಜದ ಹೋರಿಗಳವು.”

Read More

ಕೆ. ಸತ್ಯನಾರಾಯಣ ಬರೆದ ‘ಚಿನ್ನಮ್ಮನ ಲಗ್ನ’ ಪುಸ್ತಕದಿಂದ ಒಂದು ಟಿಪ್ಪಣಿ

“ಮುಕುಂದಯ್ಯ ಗದ್ದೆ ಕೊಯ್ಲಿಗೆ ಜನರನ್ನು ಗೊತ್ತುಮಾಡಬೇಕು, ಸುಮ್ಮನೆ ಕೂತರೆ ಆಗುವುದಿಲ್ಲ ಎಂದೆಲ್ಲ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಐತನೊಡನೆ ಚರ್ಚಿಸುತ್ತಿದ್ದಾನೆ. ಚಳಿಗೆ ಬೆಂಕಿಯ ಹತ್ತಿರ ಕಾಯಿಸಿಕೊಳ್ಳುತ್ತಾ ಸಂಸಾರದ ಜವಾಬ್ದಾರಿ ಹೊರಲು ತಯಾರಾಗುವುದು, ವೃತ್ತಿ ಜೀವನದ ಮುಂದಿನ ಕೆಲಸಗಳ ಬಗ್ಗೆ ಕಾಳಜಿ ವಹಿಸುವುದು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ