ನಾಟಕ ರೂಪದ ವರದಿ ವಾಚನದ ಮಜಾ… ಬಸವನಗೌಡ ಹೆಬ್ಬಳಗೆರೆ ಸರಣಿ
ತಮಾಷೆಯ ಸಂಗತಿ ಅಂದರೆ ಇನ್ಸಲ್ಟ್ ಆಗಿದ್ದ ದಯಾನಿಗೆ ಹೊರಗೆ ಹೋದ ಕೂಡಲೇ ಅವನು ಮದುವೆಯಾಗಬೇಕೆಂದುಕೊಂಡಿದ್ದ ಅವನ ಮನದರಸಿ ಕರೆ ಮಾಡಿದ್ದಾಳೆ. ಅವಳ ಕರೆಯಲ್ಲಿ ಅವನು ತಲ್ಲೀನನಾಗಿಬಿಟ್ಟಿದ್ದಾನೆ. ನಾಟಕವನ್ನು ಮರೆತುಬಿಟ್ಟಿದ್ದಾನೆ ಅನಿಸುತ್ತೆ. ತಕ್ಷಣ ನಾನೇ ಹೊರ ಹೋಗಿ ಅವನನ್ನು ಒಪ್ಪಿಸಿ ವಾಪಸ್ಸು ಕರೆ ತಂದಿದ್ದಾಯ್ತು, ನಂತರ ಕಾಳಿದಾಸ ಫಿಲಂ ನಲ್ಲಿನ ‘ಕಮಲೇ ಕಮಲೋತ್ಪತ್ತಿಃ’ ಪದದ ಬದಲು ಪ್ರೇರಣಾ ತರಬೇತಿಯಾದ್ದರಿಂದ ‘ಪ್ರೇರಣೇ ಪ್ರೇರಣೋತ್ಪತ್ತಿಃ’ ಎಂದು ಹೇಳುತ್ತಾ ಬಂದು ಪ್ರಶ್ನೆ ಕೇಳಿಸಿ ನಮ್ಮ ವರದಿ ವಾಚನದ ನಾಟಕವು ಮೂಡಿಬಂತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

