Advertisement

Category: ದಿನದ ಕವಿತೆ

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ವಿಭಾಗಿಸಿ ಒಡೆದುಹಾಕುವ ವ್ಯಾಸಕ್ಕೆ ಬೆದರದೆ
ತ್ರಿಜ್ಯದ ಸಂಪರ್ಕವನ್ನು ಅತಿಯಾಗಿ ಹಚ್ಚಿಕೊಳ್ಳದೆ-
ಹಾಗೆಂದು ದೂರವೂ ಉಳಿಯದೆ
ಸುತ್ತ ಆವರಿಸಿ ನಿಂತ ಪರಿಧಿಗಳೆಲ್ಲವನ್ನೂ ಮೀರಿದ
ನಗುಮುಖದ ವೃತ್ತವಾಗಬೇಕು”- ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಅಭಿಷೇಕ ಬಳೆ ಮಸರಕಲ್ ಬರೆದ ಗಜಲ್

“ತುಟಿಯ ಹನಿಯಲ್ಲಿ ಮಧುವಿರಲು ಮಧು ಶಾಲೆಯೇತಕೆ
ಅಂದದ ನಡುವು ಚೆಂದಾಗಿ ಕಾಡುತಿರಲು ಕಾಮನಬಿಲ್ಲೇತಕೆ

ಮಾತಲ್ಲೇ ಸವಿಜೇನು ತುಂಬಿರಲು ಆ ಮಧುವೇತಕೆ
ಏನೊಂದು ಲೋಪವಿಲ್ಲದ ಪುತ್ಥಳಿ ನೀನು ಕುಂಚವೇತಕೆ”-‌ ಅಭಿಷೇಕ ಬಳೆ ಮಸರಕಲ್ ಬರೆದ ಗಜಲ್

Read More

ಎಂ. ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ

“ಭುವಿಮುಗಿಲಿಗೆಷ್ಟು
ಅಂತರ?
ಹಿಗ್ಗಿದಷ್ಟೂ ಕುಗ್ಗಿದೆವು
ಬಸಿರುಗಟ್ಟುವ ಸಂಜೆ
ಮತ್ತೆ ನೀ ನೆನಪಾದೆ
ಆದರೆ ನಾ ನಿನಗೆ
ನೀ ನನಗೆ
ಎಂದೂ ದಕ್ಕುವುದೂ
ಇಲ್ಲ”- ಎಂ. ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ

Read More

ಮಾಲತಿ ಶಶಿಧರ್ ಬರೆದ ಈ ದಿನದ ಕವಿತೆ

“ಕವಿಗಳ ಪುಸ್ತಕ ಸೇರಿಕೊಂಡ ನಕ್ಷತ್ರಗಳು
ಊಳಿಡುವ ಮರಗಳು
ಕವಿಮಿತ್ರನೊಬ್ಬ ಹೇಳಿದ್ದ
“ಹೋದ ಜನ್ಮದಲಿ ಹೆಣ್ಣಾಗಿ ಹುಟ್ಟಿದವರು
ಈ ಜನ್ಮದಲಿ ಮರವಾಗಿ ಬರುತ್ತಾರೆ”
ಅದಕ್ಕೆ ನನಗೆ ಕಂಡ ಮರಗಳ
ಕದಪುಗಳಲ್ಲಿ ಬರೀ ಕಣ್ಣೀರ ಕಲೆಗಳು”- ಮಾಲತಿ ಶಶಿಧರ್ ಬರೆದ ಈ ದಿನದ ಕವಿತೆ

Read More

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಎರಡು ಕವಿತೆಗಳು

“ಕೆಲ ಹೀಗೂ ಕವನಗಳು ಜೀವವನ್ನೇ
ಹಾರಾಡಿಸುತ್ತವೆ ನಭದಲ್ಲಿ
ಉಸಿರು ಸ್ತಂಭನ
ತಡಕಾಡಿದರೆ ವೆಂಟಿಲೆಟರ್ ಇಲ್ಲ
ಸೂಕ್ಷ್ಮ ವಿಚಾರಗಳು ಖುಲ್ಲಾ ಖುಲ್ಲಾ
ಅಶ್ಲೀಲ ಶಬ್ದಗಳು ಸಾಮಾನ್ಯ
ಸೆರೆಹಿಡಿದ ಕೈದಿಯಂತೆ ಕವನದಲ್ಲಿ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಎರಡು ಕವಿತೆಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ