Advertisement

Category: ವಾರದ ಕಥೆ

ಮಹಾಂತೇಶ ನವಲಕಲ್ ಬರೆದ ಈ ಭಾನುವಾರದ ಕತೆ

ಬೀಜವನ್ನು ರಕ್ಷಿಸುವ ಇಂತಹ ಅಮೂಲ್ಯವಾದ ಸಂಪತ್ತನ್ನು ಮುಂದಿನ ಕಾಲ ಘಟ್ಟದವರೆಗೆ ಕೊಂಡೊಯ್ಯುವ ಸಮರ್ಥ ವ್ಯಕ್ತಿಯನ್ನು ತಾತ, ನಮ್ಮ ತಂದೆಯಲ್ಲಿ ಕಾಣಲಿಲ್ಲ ಸರ್. ತಂದೆಯವರು ಸ್ವಲ್ಪ ಅಶಿಸ್ತು ಮತ್ತು ಕುಡಿತವನ್ನು ಅವಲಂಬಿಸಿರುವ ವ್ಯಕ್ತಿ. ನಾನು ಪಿಯುಸಿಯಲ್ಲಿ ಚೆನ್ನಾಗಿ ಮಾರ್ಕ್ ತೆಗೆದುಕೊಂಡರೂ, ಎಂಬಿಬಿಎಸ್ ಸೀಟು ದೊರಕಿದರೂ..”

Read More

ಎಚ್.ಆರ್.ರಮೇಶ್‌ ಬರೆದ ಈ ಭಾನುವಾರದ ಕತೆ

ಒಂದು ಕಂದು ಬಣ್ಣದ ನಾಯಿ ಅವನ ಜೊತೆಗೆ. ಅದರ ಮೂತಿ ಕಪ್ಪಾಗಿದೆ. ನೆಲವನ್ನು ಮೂಸುತ್ತ ಬರುತ್ತಿದೆ. ಮೊಣಕಾಲು ಮಟ್ಟದ ಬರ್ಮುಡ ಮತ್ತು ಟಿ ಶರ್ಟ್ ಧರಿಸಿದ್ದಾನೆ. ಅದರ ತುಂಬ ಆಕರ್ಷಣೀಯವಾದ ಬಣ್ಣದಲ್ಲಿ ಮುದ್ರೆಯನ್ನು ಒತ್ತಿರುವ ಚಿತ್ರಗಳು. ಮುದ್ರೆ ಒತ್ತಿರುವ ಕಪ್ಪು ಬಣ್ಣದ ಕೆಂಪು ಚುಕ್ಕಿಗಳಿರುವ ಜೀರುಂಡೆ ಮತ್ತು ಕಪ್ಪು ಬಣ್ಣದ ಮಣ್ಣಿನ ದೀಪಗಳಿರುವ ಚಿತ್ರಗಳು. ಜೀರುಂಡೆಗಳ ಸಾಲು ನೇರವಾಗಿದೆ.”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆಶಾ ಜಗದೀಶ್ ಬರೆದ ಕಥೆ

ಅದು ವಯಸ್ಸಾದ ತಂದೆ, ತಾಯಿ, ಮಡದಿ, ಮಕ್ಕಳಿದ್ದ ತುಂಬು ಕುಟುಂಬ, ಈ ಜೇನಿನ ಗೂಡಿಗೆ ಕಲ್ಲು ಹೊಡೆದುಬಿಟ್ಟೆನಾ! ನಡುಗಿ ಹೋಗಿದ್ದೆ. ಲಕ್ಷ್ಮಿ ಗುದ್ದಾಡಿದಳು, ಹಾದಿಬೀದಿ ರಂಪ ಮಾಡಿದಳು, ಯಾವಾಗ ನನ್ನ ಸೀರೆ, ಪೋಲ್ಕ ಜಗ್ಗಾಡಿ ನನ್ನ ಮೇಲೆ ಕೈ ಎತ್ತಿದಳೋ, ಮಾದೇವ ಕಡ್ಡಿ ತುಂಡು ಮಾಡಿಬಿಟ್ಟ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಆಶಾ ಜಗದೀಶ್‌ ಬರೆದ ಕತೆ ‘ಎಲೆ ಉದುರುವ ಕಾಲಕ್ಕೆʼ

Read More

ಅಕ್ಷತಾ ಕೃಷ್ಣಮೂರ್ತಿ ಬರೆದ ಭಾನುವಾರದ ಕತೆ ‘ಅಬ್ಬೋಲಿ’

”ಕಾಳಿ ನದಿ ಆಣೆಕಟ್ಟಿನ ಕೆಲಸ ನೋಡಿಕೊಳ್ಳುವ ಅಧಿಕಾರಿಗಳು ರಾತ್ರಿ ಊಟಕ್ಕೆ ಬರುತ್ತಿದ್ದರು. ಅವರಿಗೆ, ‘ಒರಿಜನಲ್ಲೂ ಮತ್ತೆಲ್ಲೂ ಸಿಗದು.ತಾಜಾ ಮಾಲು’ ಎಂದು ಕಳ್ಳು ಮಾರಿ ಹಣ ವಸೂಲಿ ಮಾಡುತ್ತಿದ್ದ. ಅದರ ಅರ್ಧ ಪಾಲು ಸಡಗೋನಿಗೂ ಹೋಗುತ್ತಿತ್ತು.ಇಂತಹುದೆಲ್ಲ ವ್ಯವಹಾರ ಮಾಡುತ್ತಾ ಸಡಗೋ ಕಳ್ಳಿನ ದಾಸನಾದ. ಡಿಸೆಂಬರನಿಂದ ಫೆಬ್ರುವರಿಯವರೆಗು ಸಿಗುವ ಕಳ್ಳು ಕುಡಿಯುತ್ತ ಕಾಡಿನ ಯಾವುದೊ ಮರದ ಅಂಚಲ್ಲಿ…”

Read More

ಉಮೇಶ ದೇಸಾಯಿ ಬರೆದ ಈ ಭಾನುವಾರದ ಕಥೆ

“ಉಪಕಾರಸ್ಮರಣೆ ಈ ರೀತಿಯದ್ದಾಗಿರುತ್ತದೆ ಅಂತ ನಾ ತಿಳಿದಿರಲಿಲ್ಲ. ಒಂದೆರಡು ಸಲ ಮನೆಗೆ ಬಂದ ಪಾಟೀಲರ ಕಣ್ಣುಗಳೇ ಎಲ್ಲ ಹೇಳುತ್ತಿದ್ದವು. ಅಳುಕು ಮೊದಲು ಕಾಡಿತು ನಿಜ.. ಮುಖ್ಯವಾಗಿ ಸಂಬಂಧಕ್ಕೆ ಏನು ಹೆಸರಿಡುವುದು ಅಂತ.. ಅವರಿಗೆ ಮದುವೆಯಾಗಿತ್ತು ಮಕ್ಕಳಿದ್ದರು. ಆ ಸೆಳೆತ ಬಲವಾಗಿತ್ತು. ಕರಗಲು ಬಹಳ ಸಮಯ ಹಿಡಿಯಲಿಲ್ಲ. ಆದರೆ ಹಾಗೆ ಬೆರೆತಾಗ ಹೊಸ ಅನುಭೂತಿ ದೊರೆತದ್ದು ಸುಳ್ಳಲ್ಲ. ಹಳೆಯ ಗಂಡ ಸಿಗರೇಟಿನಿಂದ ಸುಟ್ಟ ಗಾಯಗಳ ಮೇಲೆ ಪಾಟೀಲರ ತುಟಿಗಳು ಆಡುವಾಗ ಹೊಸ ಅನುಭವ.”
ಉಮೇಶ ದೇಸಾಯಿ ಬರೆದ ಕಥೆ ‘ಕ್ಷಮೆಯೊಂದಿರಲಿ…’ ನಿಮ್ಮ ಈ ಭಾನುವಾರದ ಓದಿಗೆ

Read More

ಜನಮತ

ಕನ್ನಡ ಸಾಹಿತ್ಯ ವಲಯದಲ್ಲಿ ಈಗ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

18 hours ago
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ ಬರೆದ ಕತೆ

https://t.co/0q5FwHLLoV
18 hours ago
ಡರ್ಬನ್ ಇದಿನಬ್ಬ: ಗುಲಾಮಗಿರಿಯ ಗಾಡಿ ಏರಿ..

https://t.co/gLXkEHMKbL
2 days ago
ರಾಮು ಕವಿತೆಗಳು : ರಘುನಂದನ

https://t.co/XMeMPgpQLT

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ಬಾರೆ ರಾಜ ಕುಮಾರಿ ಹೋಗೋಣ ಜಂಬೂ ಸವಾರಿ……”

ನಾನು ಬೈಕಿನ ಕೊಂಡಿಗೆ ನನ್ನ ಕೈಯಲ್ಲಿದ್ದ ಚೀಲಗಳನ್ನೆಲ್ಲಾ ಸಿಕ್ಕಿಸಿ, ರಾಯರ ಭುಜದ ಮೇಲೆ ಕೈಯಿಟ್ಟು ಇನ್ನೇನು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಗಾಡಿ ಮುಂದೆ ಹೋಗಿಯೇ ಬಿಟ್ಟಿತು. ನಾನು ನಿಂತಲ್ಲೇ...

Read More