Advertisement

Category: ವಾರದ ಕಥೆ

ಸಚೇತನ ಭಟ್‌ ಅನುವಾದಿಸಿದ ಜಪಾನಿನ ಹರುಕಿ ಮುರಕಮಿ ಕತೆ

ಮಧ್ಯರಾತ್ರಿ ನನಗೆ ಎಚ್ಚರವಾದಾಗ ಇಜುಮಿ ಇರಲಿಲ್ಲ. ನಾನು ಹಾಸಿಗೆಯ ಪಕ್ಕದಲ್ಲಿದ್ದ ಗಡಿಯಾರವನ್ನು ನೋಡಿದೆ. ಹನ್ನೆರಡು ಮೂವತ್ತು. ತಡಕಾಡುತ್ತಾ ಲ್ಯಾ೦ಪ್ ಹಚ್ಚಿದೆ. ರೂಮಿನ ಸುತ್ತ ದೃಷ್ಟಿ ಹಾಯಿಸಿದೆ. ನಾನು ಗಾಢ ನಿದ್ರೆಯಲ್ಲಿದ್ದಾಗ ಯಾರೋ ಕದ್ದು ಒಳ ನುಗ್ಗಿ ಸುತ್ತಲೂ ನಿಶ್ಯಬ್ದವನ್ನು ಹರಡಿಟ್ಟು ಹೋದ ಹಾಗೆ ಎಲ್ಲವೂ ಸ್ತಬ್ದವಾಗಿದ್ದವು. ನಾನು ಎದ್ದು ಹೊರಗೆ ಬಂದು ಹಾಲಿನಲ್ಲಿ ಹುಡುಕಾಡಿದೆ. ಇಜುಮಿ ಅಲ್ಲಿರಲಿಲ್ಲ.
ಸಚೇತನ ಭಟ್‌ ಅನುವಾದಿಸಿದ ಜಪಾನಿನ ಪ್ರಸಿದ್ಧ ಕತೆಗಾರ ಹರುಕಿ ಮುರಕಮಿ ಕತೆ “ಮನುಷ್ಯನನ್ನು ತಿನ್ನುವ ಬೆಕ್ಕುಗಳು”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ

ಸೂರ್ಯನಿಗೋ ಯಾರು ಹುಟ್ಟಿದರೆಷ್ಟು? ಯಾರು ಸತ್ತರೆಷ್ಟು? ಅವನ ಕೆಲಸ ಅವನದ್ದೇ. ಬೆಳಗಿನ ಮೋಟಾರು ಗಾಡಿ ಬಂದು ಹೋದ ಸದ್ದಾಯಿತು. ಬಸವಣ್ಣನ ಅಣ್ಣನ ಮಗ ಮಲ್ಲೇಶ ಬಾಗಿಲಲ್ಲಿ ಬಂದು ನಿಂತಿದ್ದ. ನಿಧಾನಕ್ಕೆ ಬಸವಣ್ಣನ ಬಳಿಗೆ ಬಂದ. ಬೆನ್ನು ಸವರಿದ. ಅವರಿಬ್ಬರೆ ತಾನೆ ಗೋಪುವನ್ನು ಕೊನೆಯ ಬಾರಿಗೆ ನೋಡಿದವರು. ಕಾಣುತ್ತಿದ್ದಂತೇ ಕೈಜಾರಿ ಬಿದ್ದ ಗೋಪು ಅಪ್ಪಾ ಅಪ್ಪಯ್ಯಾ ಎಂದು ಕೂಗಿದ್ದೊಂದೇ ಗೊತ್ತು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ “ಭೂಮಿಯೊಳಗಿದೆ ಬದುಕು” ನಿಮ್ಮ ಓದಿಗೆ

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಅಲ್ಲಿದ್ದ ಟೀಪಾಯಿಯತ್ತ ನೋಡಿದರೆ ಚಹಾದ ಲೋಟ ಇಲ್ಲ. ಹೆಂಡತಿಯಲ್ಲಿ ಕೇಳೋಣ ಎಂದುಕೊಂಡ ಅವರು ಮನೆಯೊಳಗೆ ಹೋದರೆ ಅಲ್ಲಿ ಅವರ ಹೆಂಡತಿ ಇನ್ನೂ ಕೂಡಾ ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ. ಡೈನಿಂಗ್ ಟೇಬಲ್ ಮೇಲೆ ಚಹಾದ ಲೋಟ ಇದೆ. ಲೋಟ ಎತ್ತಿಕೊಳ್ಳಹೋದಾಗ ಕೃಷ್ಣಾಚಾರ್ಯರ ಕೈತಗುಲಿ ಲೋಟ ಬಿದ್ದು, ಒಂದು ಲೋಟ ಚಹಾ ಎಲ್ಲ ಚೆಲ್ಲಿಹೋಯಿತು. ಅದನ್ನು ನೋಡಿದ ಅವರ ಹೆಂಡತಿ “ಸರಿ ಕಂದಾ, ನಾನೇ ಮತ್ತೆ ಕಾಲ್ ಮಾಡುತ್ತೇನೆ” ಎಂದು ಹೇಳಿ, ಕಾಲ್ ಕಟ್ ಮಾಡಿದಳು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಒಂದು ಲೋಟ ಚಹಾ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪಾರ್ವತಿ ಪಿಟಗಿ ಕತೆ

ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಮುಗಿದ ನಂತರ, ಮೆರವಣಿಗೆ ಹೈಸ್ಕೂಲಿಗೆ ಹೊರಟಿತು. ನಿನ್ನೆಯಷ್ಟೇ ಜೋರಾಗಿ ಮಳೆಬಂದು ಹೋಗಿತ್ತಾದರೂ ಬಿಸಿಲು ಬಹಳ ತೀಕ್ಷ್ಣವಾಗಿತ್ತು. ನುಣ್ಣಗೆ ಬೋಳಿಸಿದ ತಲೆ, ತುಂಡು ಪಂಜೆಯಲ್ಲಿರುವ ಗಾಂಧೀಜಿ, ಪ್ರಾಥಮಿಕ ಶಾಲೆಯಿಂದ ದೂರದ ಹೈಸ್ಕೂಲು ತಲುಪುವುದರಲ್ಲಿ ಬಿಸಿಲಿನ ಬೇಗೆಯಲ್ಲಿ ಬೆಂದು ಬಸವಳಿದ. ಕೈಯಲ್ಲಿ ಬರೀ ಒಂದು ಕೋಲನ್ನು ಮಾತ್ರ ಹೊಂದಿದ್ದ ಆತ ಆಗಾಗ ಬಗ್ಗಿ ಬಗ್ಗಿ ಪಂಚೆಯಿಂದಲೇ ಬೆವರು ಒರೆಸಿಕೊಳ್ಳುತ್ತಿದ್ದ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಪಾರ್ವತಿ ಪಿಟಗಿ ಕತೆ “ಹೇ ರಾಮ್!” ನ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಮೊದಲು ಮುಕುಂದರಾವ್ ಹೆಂಡತಿ ಬಳಿ ಹೇಳಿದರು. ಆಗ ಶ್ರೀ ವೇದ “ಅಲ್ಲರೀ, ಆಟೋದವರಿಗೆ ಹೆಣ್ಣು ಕೊಡುವುದಂದರೆ ನೆಂಟರಿಷ್ಟರು ಆಡಿಕೊಳ್ಳುವುದಿಲ್ಲವೇ, ಸಾಮಾನ್ಯವಾಗಿ ಆಟೋ ಡ್ರೈವರ್‌ಗಳ ಬಗ್ಗೆ ಕೆಲವರಿಗೆ ಏನೋ ಒಂದು ರೀತಿಯ ತಾತ್ಸಾರ ಭಾವ ಇರುತ್ತಲ್ಲವೇ, ಅಲ್ಲದೆ ಶ್ರಾವಣಿಗೂ ತುಂಬಾ ವಯಸ್ಸು ಆಗಿ ಹೋಗಿಲ್ಲ, ಇನ್ನೂ ಸ್ವಲ್ಪ ಕಾಯೋಣ, ಬನಶಂಕರಿ ಹುಡುಗ ಇನ್ನೂ ಏನು ಫೈನಲ್ ಮಾಡಿಲ್ಲ ಅಲ್ಲವೇ? ಅದು ಆದರೂ ಆಗಬಹುದಲ್ಲವೇ” ಎಂದಳು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ಸಮನ್ವಿತ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ