Advertisement

Category: ವಾರದ ಕಥೆ

ಮಂಜುನಾಯಕ ಚಳ್ಳೂರು ಬರೆದ ಕತೆ “ಫೂ….”

ಆ ಹೊತ್ತು ಅವಳು ಹುಚ್ಚಿಯಂತೆ ಕಾಣುತ್ತಿದ್ದಳು ನನಗೆ. ಮುಖದ ತುಂಬ ಕೈಯಾಡಿಸಿದಳು. ತಲೆ ಸವರಿದಳು. ಯಾಕೋ ಎಷ್ಟೊತ್ತಾದರೂ ನನ್ನ ಬಿಡಲೇ ಇಲ್ಲ. ಅವ್ವ ಅಲ್ಲಿಂದಲೇ, `ಸಾಕ್ ಹೋಗು ಚಂದ್ರಪ್ಪಾ. ಬುಟ್ರ ಲಂಗದಾಗ್ ಸುರುಗ್ಸ್ಯಂತಾಳ್ ಈ ಅಡಾವುಡಿ ನಿನ್ನಾ…’ ಎಂದಳು. ಅತ್ತೆ, `ಯೇ ಮಂಗಾ.. ಬಾಯೈತಂತ ಏನೇನರ ಬೊಗಳ್ಬ್ಯಾಡ. ನನ ಹೊಟ್ಯಾಗ್ ಹುಟ್ಬೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ.’ ಎಂದುತ್ತರಿಸಿದಳು. ಆಗವಳ ಕೈಗಳು ನಡುಗುತ್ತಿದ್ದವು. ಕೆಂಡದಂತೆ ಬೆಚ್ಚಗಾಗಿದ್ದವು.
ಮಂಜುನಾಯಕ ಚಳ್ಳೂರು ಅವರ “ಫೂ..” ಕಥಾಸಂಕಲನದ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಾಲತಿ ಪಟ್ಟಣಶೆಟ್ಟಿ ಬರೆದ ಕಥೆ

ಇವಾ ಹಿಂಗ್ಯಾಕ ಇದ್ದಾನ? ನನ್ನ ನೋಡಿದ್ರ ನಗೋದಿಲ್ಲಾ ಮಾತಾಡೊದಿಲ್ಲಾ? ಅವ್ವನೂ ಯಾವಾಗ್ಲೂ ಹಿಂಗs ಇರತಾಳ…. ಬ್ಯಾಂಕಿನಿಂದ ಬಂದಾಕಿನs ಮಲಗಿ ಬಿಡತಾಳ…. ನಾ ಯಾರ ಕೂಡ ಮಾತಾಡಬೇಕು?…. ಮುಂಜಾನಿಂದ ಊಟಿಲ್ಲಾ…. ಹಂಗs ಕೂತಾಳ; ಅಪ್ಪಾ ತಾ ಮಾತ್ರ ಹೊರಗ ಊಟಾ ಮಾಡಿ ಬರತಾನ, ಆಕೀಗೆ ಊಟಾ ಮಾಡು ಅಂತ ಸುದ್ದಾ ಹೇಳೋದಿಲ್ಲಾ…. ಛೇ ಎಂಥಾ ಅಪ್ಪಾ ಇವಾ….?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಾಲತಿ ಪಟ್ಟಣಶೆಟ್ಟಿ ಬರೆದ ಕಥೆ “ನಾ ಯಾಕ ಹುಟ್ಟಿದೆನೋ…… ?” ನಿಮ್ಮ ಓದಿಗೆ

Read More

ರವಿಶಂಕರ್ ಎಸ್‌.ಎಲ್.‌ ಬರೆದ ಈ ಭಾನುವಾರದ ಕಥೆ

ಮನೆಯಕಡೆಯಿಂದ ಜಾನಕಿ ನರಳುವ ಸಣ್ಣಸದ್ದು ಕೇಳತೊಡಗಿತು. ಜಾನಕಿಗೆ ಒಂಭತ್ತು ತಿಂಗಳುಗಳು ತುಂಬಿದ್ದರಿಂದ ಹೆರಿಗೆನೋವು ಶುರುವಾಗಿತ್ತು. ಶಿವಮ್ಮ ಸಾಕಷ್ಟು ಹೆರಿಗೆಗಳನ್ನು ಮಾಡಿಸಿದ್ದರಿಂದ, ಯಾರ ಸಹಾಯವೂ ಬಯಸದೆ, ಒಬ್ಬಂಟಿಯಾಗೇ ಹೆರಿಗೆಮಾಡಿಸುವ ಅನುಭವ ಪಡೆದಿದ್ದಳು. ಹೆರಿಗೆನೋವಿನ ನರಳುವಿಕೆಯ ಕೂಗು ಹೆಚ್ಚಾಗುತ್ತಿದ್ದಂತೆಯೇ, ಸಂಗಣ್ಣ ತಾನು ಇಳಿದು ಹೋಗಲೆ. ಬೇಡವೇ? ಎಂಬ ಯೋಚನೆಗೆಬಿದ್ದ.
ರವಿಶಂಕರ್ ಎಸ್‌.ಎಲ್.‌ ಬರೆದ ಈ ಭಾನುವಾರದ ಕಥೆ “ಹಬ್ಬ” ನಿಮ್ಮ ಓದಿಗೆ

Read More

ಎಸ್. ಗಂಗಾಧರಯ್ಯ ಬರೆದ ಈ ಭಾನುವಾರದ ಕಥೆ

ಈ ನಡುವೆ ಪಾತ್ಲಿಂಗಪ್ಪ ಹಾಗೂ ಚಿತ್ಲಿಂಗ ಮತ್ಮತ್ತೆ ಭೇಟಿಯಾಗುತ್ತಿದ್ದದ್ದು ತಿಳಿದು ಮಗಳು ಕುದ್ದು ಹೋಗಿ ವರ್ಷದ ಹಿಂದೆ ಅಪ್ಪನಿಗೆ ಲಾಯರ್‌ ನೋಟೀಸ್‌ ಕಳಿಸಿದ್ದಳು. ಇದು ಪಾತ್ಲಿಂಗಪ್ಪನನ್ನು ಕುಗ್ಗಿಸಿತ್ತು. ತನ್ನದೆಲ್ಲವನ್ನೂ ಕಿತ್ತುಕೊಂಡು ಬೀದಿಗೆ ತಳ್ಳುವ ಹುನ್ನಾರದಂತೆ ಕಂಡಿತ್ತು. ಹಂಗಾಗಿ ಅದು ಆ ವಿಚಾರದಲ್ಲಿ ಅವನನ್ನು ಮತ್ತಷ್ಟು ಬಿಗಿಯಾಗುವಂತೆ ಮಾಡಿತ್ತು. ಅದರೊಟ್ಟಿಗೆ ಅವನೊಳಗೆ ತಾನು ತಮ್ಮನ ಮಗನಿಗೆ ಮಾಡಿದ್ದ ಅನ್ಯಾಯದ ಪಾಪಪ್ರಜ್ಞೆ ಬೆಳೆಯತೊಡಗಿತ್ತು.
ಎಸ್. ಗಂಗಾಧರಯ್ಯ ಬರೆದ ಈ ಭಾನುವಾರದ ಕಥೆ “ಸೋಲು” ನಿಮ್ಮ ಓದಿಗೆ

Read More

ಸೌರಭಾ ಕಾರಿಂಜೆ ಬರೆದ ಈ ಭಾನುವಾರದ ಕಥೆ

ಬೆಳಿಗ್ಗೆ ತುಂಬಿಸಿಕೊಂಡ ದೋಸೆ ಡಬ್ಬಿ ಹಾಗೇ ಇದೆ ಎಂಬುದು ನೆನಪಾಯಿತು ಅವಳಿಗೆ. ಕೊಟ್ಟು ಬಿಡಲೇ ಅನಿಸಿತು ಒಮ್ಮೆ. ಮನೆಗೆ ಹೋಗಿ ತಿನ್ನಬಹುದು ತಾನು. ಆದರೆ ಇವನಿಗೆ ಬೇಕಾದದ್ದು ದುಡ್ಡು, ಊಟ ಅಲ್ಲ, ಆ ದುಡ್ಡನ್ನು ಕಬಳಿಸಲು ನಮೂನೆ ನಮೂನೆಯ ಪ್ರಯತ್ನ ಅನ್ನಿಸಿ ಮನಸ್ಸೆಲ್ಲಾ ಕಹಿಯಾಯಿತು. ಜೊತೆಗೆ ಬಾಯಿಯೂ ಕಹಿಯಾಯಿತು. ಬಾಯಿಯಲ್ಲಿ ತುಂಬಿಕೊಂಡಿದ್ದ ಎಂಜಲನ್ನು ನುಂಗಲು ಅಸಹ್ಯವಾಗಿ ಉಗುಳುವ ಒತ್ತಡ ಉಂಟಾಯಿತು. ಯಾವತ್ತೂ ರಸ್ತೆಯಲ್ಲಿ ಉಗುಳಿದವಳಲ್ಲ. ಮುಜುಗರ ಒತ್ತಿ ಬಂತು.
ಸೌರಭಾ ಕಾರಿಂಜೆ ಬರೆದ ಕಥೆ “ಹಣಾಹಣಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ