Advertisement

ಅಮ್ಮ ಮತ್ತು ಕಟ್ಟಿಗೆಯ ಒಲೆ: ಮಾರುತಿ ಗೋಪಿಕುಂಟೆ ಸರಣಿ

ಅಮ್ಮನ ಕೆಲಸಗಳಲ್ಲಿ ಜಾಸ್ತಿ ಸಹಾಯ ಮಾಡುತ್ತಿದ್ದದ್ದೆ ನಾನು. ಆ ಒಲೆಯ ಹತ್ತಿರ ಕುಳಿತು ಒಂದೊಂದೆ ಕಟ್ಟಿಗೆಯನ್ನು ಇಡುವುದರಲ್ಲಿ ಏನೊ ಒಂದು ಖುಷಿ ಇರುತ್ತಿತ್ತು. ಬೆಳಗಿನ ಚುಮು ಚುಮು ಚಳಿಗೆ ಒಲೆ ಮುಂದೆ ಕುಳಿತು ಬಿಸಿಕಾಯಿಸುತ್ತಿದ್ದಾಗ ಕಟ್ಟಿಗೆ ಉರಿಯಿಂದ ಬೆರಳು ಸುಟ್ಟುಕೊಂಡಿದ್ದು ಇದೆ. ಎಲ್ಲರೂ ಒಟ್ಟಿಗೆ ಕುಳಿತು ಕಾಫಿ ಕುಡಿದು ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದ ದಿನಗಳು ಈಗಲೂ ಕಣ್ಣಲ್ಲಿ ನೀರು ತರಿಸುತ್ತದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಮೂವತ್ತನೆಯ ಕಂತು ನಿಮ್ಮ ಓದಿಗೆ

Read More

ಪ್ರವಾಸಗಳೆಂಬ ಜವಾಬ್ದಾರಿ ಮತ್ತು ಮಕ್ಕಳು: ಅನುಸೂಯ ಯತೀಶ್ ಸರಣಿ

ನಾನೂ ಹೊರಡಲು ಸಿದ್ಧಳಾದಾಗ ನನ್ನ ಕೈಯನ್ನು ಮೃದುವಾಗಿ ಹಿಡಿದುಕೊಂಡ. ಪುಟ್ಟ ಹಸುಳೆ ತನ್ನ ತಾಯಿಯ ಬೆರಳು ಹಿಡಿದಂತ ಅನುಭವವಾಯಿತು. ನಾನು ಮುಖ್ಯ ಶಿಕ್ಷಕರನ್ನು ಸರ್, ನನಗೇಕೋ ಬರಲು ಮನಸ್ಸಿಲ್ಲ. ನೀವೆಲ್ಲ ಹೋಗಿ ಬನ್ನಿ ನಾನು ಸಂಜೆವರೆಗೂ ಇಲ್ಲೇ ಇವನೊಂದಿಗೆ ಇದ್ದು ಮನೆಗೆ ಹೋಗುವೆ ಎಂದೆ….
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

Read More

ಮೌನ ದಂಗೆಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರಿನ ನಾಜ಼ಿ ಜರ್ಮನಿಯು ಪೋಲಂಡನ್ನು ಆಕ್ರಮಿಸಿತು. ಇದನ್ನು ವಿರೋಧಿಸಿದ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ ‘ಪೋಲಿಷ್ ಪ್ರತಿವಿರೋಧ ಚಳುವಳಿ’ಯನ್ನು ಸೇರಿ, ‘ವಾರ್ಸಾ ಬಂಡಾಯ’ದ ಸಮಯದಲ್ಲಿ ‘ಮಿಲಿಟರಿ ನರ್ಸ್’ ಆಗಿ ಕೆಲಸ ಮಾಡಿದರು. ಆಗ ಭೂಗತವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಗಾಗಿ ಅವರು ಕವನಗಳನ್ನು ಬರೆಯುತ್ತಿದ್ದರು. ಈ ಯುದ್ಧಕಾಲದ ಅನುಭವಗಳು ಅವರ ಕಾವ್ಯದ ಮೇಲೆ ಬಹಳಷ್ಟು ಪ್ರಭಾವ ಬೀರಿದವು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ದೇವಿಕಾ ನಾಗೇಶ್‌ ಬರೆದ ಈ ಭಾನುವಾರದ ಕತೆ

ಸಬಿತ ಚಿಕ್ಕಿಗೆ ಬರೆಯುವ ಪತ್ರದಲ್ಲಿ ಪದ್ದಜ್ಜನ ಮಾಮೂಲಿನ ಕ್ಷೇಮ ಸಮಾಚಾರ, ಉಭಯ ಕುಶಲೋಪರಿ, ಅಳಿಯಂದಿರಿಗೆ ಮೊಮ್ಮಕ್ಕಳಿಗೆ ಆಶೀರ್ವಾದದ ಜೊತೆಗೆ ಪತ್ರ ಮುಗಿಯುತಿದ್ದರೆ ಬಾಗಿದೊಡ್ಡನಿಗೆ ಬರೆಯಲು ಬಾಕಿ ಇನ್ನೊಂದಷ್ಟು ವಿಚಾರಗಳು ಇರುತ್ತಿದ್ದವು.
ದೇವಿಕಾ ನಾಗೇಶ್‌ ಬರೆದ ಈ ಭಾನುವಾರದ ಕತೆ “ಕತೆ ಕತೆ ಕಾರಣ” ನಿಮ್ಮ ಓದಿಗೆ

Read More

ಕಾನೂನು ಮತ್ತು ಕಾಗದದ ಗಂಡ-ಹೆಂಡತಿ: ಎಂ.ವಿ. ಶಶಿಭೂಷಣ ರಾಜು

ಅವಳ ಅಮೇರಿಕೆಗೆ ಬರುವ ಹಿಂದೆ ಒಂದು ಕಥೆ ಇದೆ. ಅಮೇರಿಕಾಗೆ ತುಂಬಾ ಹಿಂದೆ ಬಂದು ಈಗ ನಾಗರೀಕನಾಗಿರುವ ಹುಡುಗ ಮೆಕ್ಸಿಕೋಗೆ ಬಂದು ಅಕ್ಕನನ್ನು ಮದುವೆಯಾಗಿ ಅಮೇರಿಕಾಗೆ ಕರೆತರುತ್ತಾನೆ. ಅಕ್ಕನಿಗೆ ಅವನ ಮೂಲಕ ಒಂದು ವರುಷದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಸಿಗುತ್ತದೆ . ಅದಾದನಂತರ ಅವ ಅಕ್ಕನಿಗೆ ವಿಚ್ಚೇದನ ನೀಡುತ್ತಾನೆ.
ಎಂ.ವಿ. ಶಶಿಭೂಷಣ ರಾಜು ಬರೆಯುವ “ಅನೇಕ ಅಮೆರಿಕಾ” ಅಂಕಣ

Read More

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು ಪಾತ್ರವಾಗಿ ಬಂದ ಉದಾಹರಣೆ ಕಡಿಮೆ. ಹಾಗೆ ಮಾಡಿದಾಗಲೂ ಮಳೆಯು ಸಿನಿಮಾಕ್ಕೆ ತರುವ ರಮ್ಯತೆಗೇ ಹೆಚ್ಚು ಒತ್ತು ಇರುತ್ತಿತ್ತು. ಹಾಗಾಗದೇ ಮಳೆ ಒಂದು ಪಾತ್ರವೇ ಆಗಬೇಕು ಎಂಬ ಉದ್ದೇಶ ನಮ್ಮದಾಗಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ದ್ವೀಪ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

Read More

ಸಾಕ್ಷರತೆಯ ರೂಪವಾಗಿ ಅಕ್ಷರ: ಚಂದ್ರಮತಿ ಸೋಂದಾ ಸರಣಿ

ಶಾಲೆಯ ಪಠ್ಯದ ಭಾಗವಾಗಿ ಪತ್ರಲೇಖನ ಇರುತ್ತಿತ್ತು. ಮಕ್ಕಳ ಪತ್ರಕ್ಕಾಗಿ ಹೆತ್ತವರು, ಹೆತ್ತವರ ಪತ್ರಕ್ಕಾಗಿ ಮಕ್ಕಳು ಕಾಯುತ್ತಿದ್ದರು. ಹಬ್ಬ ಅಥವಾ ವಿಶೇಷ ಸಂದರ್ಭಗಳ್ಲಿ ಶುಭಾಶಯ ಅಥವಾ ಹಾರೈಕೆಯ ಪತ್ರಗಳಿಗೆ ಹೆಚ್ಚಿನ ಮಾನ್ಯತೆ ಇತ್ತು. ಕಳಿಸುವವರು ಮತ್ತು ಪಡೆಯುವವರ ನಡುವೆ ಇದೊಂದು ಸ್ನೇಹಸೇತುವಾಗಿತ್ತು. ಈಗಿನಂತೆ ದೂರವಾಣಿಯ ಸಂಪರ್ಕ ಇಲ್ಲದಿದ್ದುದರಿಂದ ಪತ್ರವೇ ಸರ್ವಸ್ವವಾಗಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ಮನುಷ್ಯತ್ವದ ಚರ್ಮವ ಸುಲಿದು
ಹೃದಯ ಕಂಪಿಸುವಾಗಲೂ
ಜಾತಿಯ ಅಮಲಿನಲ್ಲಿ
ಧರ್ಮದ ಅಫೀಮಿನಲ್ಲಿ
ನನ್ನನ್ನೇ ನಾನು ಅರಸುತಿದ್ದೆ
ನೆನಪುಗಳ ಒಲೆಯಲ್ಲಿ
ಶಿರವನಿಟ್ಟು
ಉರಿಸುತಿದ್ದೆ
ಉರುವಲಿನಂತೆ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ಬಾಯಲ್ಲಿರುವ ಬಿಸಿ ತುಪ್ಪವೇ!: ಗುರುಪ್ರಸಾದ ಕುರ್ತಕೋಟಿ ಸರಣಿ

ಎಲ್ಲ ಅಡ್ಡಾಡಿ ಆದ ನಂತರ ಒಂದು ಕುರಿಯನ್ನು ಕರೆದು ತಂದು ಒಂದು ಕಟಕಟೆಯ ಮೇಲೆ ನಿಲ್ಲಿಸಿದಳು. ಕತ್ತಿ ತೊಗೊಂಡು ಕಡೆದೇ ಬಿಡುತ್ತಾಳೆಯೇ ಅಂತ ಭಯ ಆಯ್ತು. ಅವಳು ಅದನ್ನು ನಿಲ್ಲಿಸಿದ್ದು ಅವತ್ತು ಬಂದಿದ್ದ ಅತಿಥಿಗಳ ಅಮೃತ ಹಸ್ತಗಳಿಂದ ಅದರ ಹಾಲು ಹಿಂಡಿಸಲು ಅಂತ ತಿಳಿದು ತುಸು ಸಮಾಧಾನ ಆಯ್ತು. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಓದುವ ಸುಖ ಹಾಗೂ ಅರಿವು: ಗೋಳೂರ ನಾರಾಯಣಸ್ವಾಮಿ ಬರಹ

ಇಂದು ಸಮಾಜದಲ್ಲಿ ನಡೆಯುತ್ತಿರುವ ಒಳ್ಳೆಯದು ಕೆಟ್ಟದ್ದನ್ನು ಹೇಳುವ ಸಾಹಿತಿಗಳು, ನ್ಯಾಯವಾದಿಗಳು, ಮುಂದಾಳುಗಳು ಹಾಗೂ ಇನ್ನಿತರರು ಮಾಧ್ಯಮಗಳ ನಡುವೆ ಅಸೂಯೆ, ವೈಮನಸ್ಸು, ಅಹಂಕಾರ ಇರುತ್ತದೆ; ಆದರೆ ಬಂಡವಾಳಶಾಹಿಗಳು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ದಂಧೆಕೋರರು, ಭಯೋತ್ಪಾದಕರು, ಉಗ್ರಗಾಮಿಗಳು, ಆಯಕಟ್ಟಿನ ಜಾಗಗಳಲ್ಲಿ ಆಡಳಿತ ನಡೆಸುವ ಭ್ರಷ್ಟಾಚಾರಿಗಳ ನಡುವೆ ತುಂಬಾ ದೊಡ್ಡ ಸಾಮರಸ್ಯವಿದೆ: ಸಹಕಾರವಿದೆ.
ಗೋಳೂರ ನಾರಾಯಣಸ್ವಾಮಿ ಬರಹ ನಿಮ್ಮ ಓದಿಗೆ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ