Advertisement

Tag: ಅಂಕಣ

ಬಿಸಿಲು ಮೂಡುವ ಹೊತ್ತಿಗೆ, ಕೈಯಲ್ಲೊಂದು ಹೊತ್ತಿಗೆಯಿರಲಿ

ಇತ್ತೀಚೆಗೆ ಇತ್ತ ನಾಟಕವೂ ಅಲ್ಲದ, ಅತ್ತ ಸರಳ ಓದುವಿಕೆಯೂ ಅಲ್ಲದ ಮಧ್ಯಮಾರ್ಗದಲ್ಲಿ ನಿಂತ ಆಡಿಯೋ ಪುಸ್ತಕಗಳ ಭರಾಟೆಯೂ ಹೆಚ್ಚಿದೆ. ಕೆಲಸ ಮಾಡುತ್ತಲೇ ಕೇಳಿಸಿಕೊಳ್ಳಬಹುದು. ವಿಚಾರ ತಿಳಿಯಬಹುದು ಎಂಬ ಸಕಾರಾತ್ಮಕ ಅಂಶಗಳ ಬೆಂಬಲವಿದ್ದರೂ, ಏಕಾಂತದಲ್ಲಿ ಈ ಜಗದ ಪರಿವೆ ಇಲ್ಲದೆ, ಮನೋಲೋಕದಲ್ಲಿ ಪಾತ್ರವೇ ನಾವಾಗಿ ವಿಹರಿಸುವ ‘ಓದಿ’ನ ಆನಂದವನ್ನು ಎಂದಿಗೂ ಅವು ನೀಡಲಾರವು. ನಮ್ಮ ಕಲ್ಪನೆಯಲ್ಲಿ ಪಾತ್ರಗಳಿಗೆ ರೂಪ, ಬಣ್ಣ, ನಿಲುವು ಸಿಕ್ಕಂತೆಯೇ ಅವುಗಳಿಗೆ ಧ್ವನಿಯೂ ಲಭಿಸಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

Read More

ಅಂಗೈ ಗೆರೆಗಳಾಗುವುದಿಲ್ಲ ಭವಿಷ್ಯದ ಹೆದ್ದಾರಿಗಳು

ನನಗೆ ನನ್ನ ಭವಿಷ್ಯದ ಬಗ್ಗೆ ತಿಳಿಯುವ ಕುತೂಹಲವುಂಟಾಗಿ ನನ್ನ ಅಂಗೈಯನ್ನು ಅವನ ಮುಂದೆ ಮಾಡಿದೆ. ಆ ಭವಿಷ್ಯಗಾರ ಇಡಿ ನನ್ನ ಅಂಗೈ ಜಾಲಾಡಿ ‘ನಿನ್ನ ವಿದ್ಯಾಭ್ಯಾಸ ಇಲ್ಲಿಗೆ ಕೊನೆ ಆಗತೈತಿ. ಇನ್ ಮುಂದಾ ಓದಾಕ ಹೋಗಬ್ಯಾಡ. ಓದಿದ್ರೂ ತಲಿಗೆ ಹತ್ತಾಂಗಿಲ್ಲ. ಈ ಲಾರಿನ ನಿನಗ ಗತಿ ಆಗ್ತೇತಿ’ ಅಂತ ಹೇಳಿ ಇಳಿದು ಹೋಗಿಬಿಟ್ಟ. ಅಂಗೈ ಮೇಲಿನ ಭವಿಷ್ಯ ನಿಜಾನೋ ಸುಳ್ಳೋ ಒಂದು ತಿಳಿಯದ ವಯಸ್ಸದು. ಯಾರಾದ್ರೂ ಏನಾದ್ರೂ ಹೇಳಿಬಿಟ್ಟರೆ ನಂಬಿಬಿಡುವ ಮುಗ್ಧತೆಯೋ ದಡ್ಡತನವೋ ಆಗ ನನ್ನಲ್ಲಿತ್ತು. ಇಸ್ಮಾಯಿಲ್‌ ತಳಕಲ್‌ ಅಂಕಣ

Read More

ಇಂಟರ್‌ನೆಟ್‌ ಸೃಷ್ಟಿಸುತ್ತಿರುವ ಆಧುನಿಕ ಪುರಾಣಗಳು

ಭೂಲೋಕದಲ್ಲಿರುವ ಬೆರಗು ಹುಟ್ಟಿಸುವ ಎಲ್ಲ ಕೆಲಸಗಳನ್ನು ಅನ್ಯಲೋಕದ ಜೀವಿಗಳು ಬಂದು ಮಾಡಿದ್ದಾರೆ ಅಂತ ಎಲ್ಲವನ್ನೂ ಏಲಿಯನ್‌ ಟೆಕ್ನಾಲಜಿಗೆ ಒಪ್ಪಿಸುವ ಅಸಂಬದ್ಧತೆ ಈಗ ಎಲ್ಲಾ ಕಡೆಗಳಲ್ಲಿ ಢಾಳಾಗಿ ಕಾಣಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಜನರನ್ನು ನಂಬಿಸಿದೆ ಅಂದರೆ ಇತ್ತೀಚೆಗೆ ಒಬ್ಬರು ನನ್ನೊಂದಿಗೆ ಯಾರಾದರೂ ಮನುಷ್ಯರು ಅಷ್ಟು ಚೆನ್ನಾಗಿ ಕೆತ್ತಲು ಸಾಧ್ಯವೇ ಇಲ್ಲ ಅಂತ ವಾದಿಸುತ್ತಿದ್ದರು. ಅವರಿಗೆ ಈಗಲೂ ಕೆತ್ತನೆ ಮಾಡುವ ಸ್ಥಪತಿಗಳಿರುವುದು ತಿಳಿದಂತಿಲ್ಲ.
ಗಿರಿಜಾ ರೈಕ್ವ ಬರೆಯುವ ‘ದೇವಸನ್ನಿಧಿ’ ಅಂಕಣದಲ್ಲಿ ಹೊಸ ಬರಹ

Read More

ನಿರ್ಜೀವವೊಂದು ಉಸಿರು ಪಡೆದುಕೊಳ್ಳುವ ಪರಿ…..

ಭೂಮಿಯ ಗರ್ಭಕ್ಕಿಳಿದ ಬೀಜಗಳು ಮೊಳಕೆಯೊಡೆದು ಸಸಿಯಾಗಿ, ಹೂಬಿಟ್ಟು ನೂರಾರು ಕಾಯಿಗಳಾಗಿ, ಹಣ್ಣಾಗಿ, ತೆನೆಗಳಾಗಿ ಹಸಿದ ಹೊಟ್ಟೆಗಳನ್ನು ತಣಿಸುವುದು ಇದೆಯಲ್ಲ, ಇದಕ್ಕಿಂತ ಸೃಜನಾತ್ಮಕವಾದದ್ದು ಪ್ರಪಂಚದಲ್ಲಿ ಬೇರೆ ಯಾವುದೂ ನನ್ನ ಕಣ್ಣಿಗೆ ಕಾಣುವುದಿಲ್ಲ. ಈ ಮಣ್ಣಿನ ಅಂತಃಕರಣವಾದರೂ ಎಂತಹದ್ದು?
ಇಸ್ಮಾಯಿಲ್‌ ತಳಕಲ್‌ ಬರೆಯುವ “ತಳಕಲ್‌ ಡೈರಿ”ಯಲ್ಲಿ ಹೊಸ ಬರಹ

Read More

ಆ ಹುಡುಗಿ ಹಾಗೆಯೇ ಮರಳಿ ಹೋಗಿದ್ದಳು

ಭಿಕ್ಷುಕರೆಂದರೆ ಯಾಕೆ ನಮ್ಮ ಮನಸ್ಸಿಗೆ ತಂಗಳನ್ನವೇ ಬರಬೇಕು ಅಂತ ಪ್ರಶ್ನಿಸಿಕೊಂಡಿದ್ದೇನೆ. ಯಾವುದೋ ಕಾರಣ, ಅಸಹಾಯಕತೆ, ಮತ್ಯಾವುದೋ ಅನಿವಾರ್ಯತೆಯ ಪರಿಸ್ಥಿತಿಗಳು ಅವರನ್ನು ಭಿಕ್ಷೆಗೆ ಹಚ್ಚಿರಬಹುದು. ಆದರೆ ಅವರಿಗೂ ನಮ್ಮಂತೆಯೇ ಎಲ್ಲ ಸವಿಯನ್ನೂ ಸವಿಯಬೇಕೆನ್ನುವ ಆಸೆಗಳೂ ಇರುತ್ತವೆ. ಆ ಆಸೆಗಳನ್ನು, ಅಭಿಲಾಷೆಗಳನ್ನು ನಾವು ಅರ್ಥ ಮಾಡಿಕೊಂಡರೆ ಆ ಮುಗ್ಧ ಮುಖಗಳಲ್ಲಿ ಒಂದಿಷ್ಟಾದರೂ ಮಂದಹಾಸ ಮೂಡಿಸಬಹುದಲ್ಲವೇ? ದೈಹಿಕ ಸಾಮರ್ಥ್ಯವಿದ್ದೂ, ಶಕ್ತರಾಗಿದ್ದೂ ಭಿಕ್ಷೆ ಬೇಡುತ್ತಿದ್ದರೆ ಅದನ್ನು ವಿರೋಧಿಸೋಣ.
ಇಸ್ಮಾಯಿಲ್‌ ತಳಕಲ್‌ ಬರಹ

Read More
  • 1
  • 2

ಜನಮತ

ಅಗಲಿದ ಕೆ.ವಿ. ತಿರುಮಲೇಶರು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಸೌಮ್ಯ ಹೆಗ್ಗಡಹಳ್ಳಿ‌ ಕವನ ಸಂಕಲನ ‘ನಶೆಯ ಲೇಖನಿ’ ಕುರಿತು ಬರೆದಿದ್ದಾರೆ

https://t.co/Aq61m8YfKG
ಸು. ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿ “ಶ್ರೀಕೃಷ್ಣ”ದ ಕೆಲವು ಪುಟಗಳು ನಿಮ್ಮ ಓದಿಗೆ

https://t.co/iPNLhNJoTQ
ರಘುನಾಥ್‌ ಕೆ. ಅನುವಾದಿಸಿದ ಭೂಮಿಕಾ ರಾಜನ್‌ ಕಥೆ “ಶಾಹೀನಳ ದುಃಸ್ವಪ್ನ” ನಿಮ್ಮ ಈ ಭಾನುವಾರದ ಓದಿಗೆ

https://t.co/RcnGXergJA

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗೋಕುಲದ ನಾಯಕರು ನಾವು….

ನಾನು ಒಂಟಿಯಾಗುತ್ತಿದ್ದಂತೆ ಮೊನ್ನೆಯ ಸಮುದ್ರ ತೀರದ ಹತ್ಯಾಕಾಂಡ ನೆನಪಾಯಿತು, ವಿಷಾದವಾಯಿತು. ಒಂದು ಕ್ಷಣ ಅರಮನೆಗೆ ಹೋಗಿಬಿಡಲೇ ಎನ್ನಿಸಿತು. ಅಲ್ಲಿ ಇನ್ನು ನನಗೇನು ಕೆಲಸ? ಎಂಬ ಪ್ರಶ್ನೆ ಮೂಡಿತು....

Read More

ಬರಹ ಭಂಡಾರ