Advertisement

Tag: ಎನ್.ಸಿ. ಮಹೇಶ್

ಪರಿಧಿ ಆಚೆಗಿನ ಸೃಜನಶೀಲತೆಯ ಪರಿಶೀಲನೆ: ಎನ್.ಸಿ. ಮಹೇಶ್‌ ಬರಹ

ಕಥೆಯನ್ನು ಸಿನಿಮಾಗೆ ಒಗ್ಗಿಸಬೇಕಾಗಿ ಬಂದಾಗ ನಿರ್ದೇಶಕನ ಎದುರು ಎರಡು ಪ್ರೆಸೆಂಟೇಷನ್ ಮಾದರಿಗಳು ಇರುತ್ತವೆ. ಒಂದು- ಆ ಕಥೆಯನ್ನು ಆರ್ಟ್ ಫಾರಮ್‌ನಲ್ಲಿ ಹೇಳುವುದು. ಅಂದರೆ ಮಸಾಲೆಗಳನ್ನು ಬೆರೆಸುವ ಕಾಯಕಕ್ಕೆ ತೊಡಗದೆ ಇರುವುದು. ಮತ್ತೊಂದು ಮಾದರಿ- ಅದನ್ನು ಕಮರ್ಷಿಯಲ್ ಎಲಿಮೆಂಟ್‌ಗಳ ಆ್ಯಂಗಲ್‌ಗಳಿಂದ ನೋಡುವುದು; ಕಥೆಯಲ್ಲಿ ಇಲ್ಲದ ವಿವರಗಳನ್ನು ಸಿನಿಮಾದ ಸಲುವಾಗಿ ಸಿನಿಮಾಟಿಕ್ ಆಗಿ ಕಟ್ಟುವುದು…
ಪೂರ್ಣಚಂದ್ರ ತೇಜಸ್ವಿಯವರ ಕತೆಯಾಧಾರಿತ “ಡೇರ್‌ಡೆವಿಲ್‌ ಮುಸ್ತಾಫಾ” ಚಲನಚಿತ್ರದ ಕುರಿತು ಎನ್.ಸಿ. ಮಹೇಶ್‌ ಬರಹ

Read More

ಮಳೆ ನಕ್ಷತ್ರಗಳ ಲೆಕ್ಕಾಚಾರದ ನಡುವೆ

ಹಳ್ಳಿಗರು ನಮಗಿಂತ ಬೆಸ್ಟ್. ಅವರಲ್ಲೂ ನಾಟಕ ಮಾಡುವ ಉಮೇದು ಇದೆ. ಹಾಗೆ ನೋಡಿದರೆ ನಮಗಿಂತ ಹೆಚ್ಚು ಇದೆ. ಆದರೆ ಅವರಿಗೆ ನಾಟಕ ಎನ್ನುವುದು ತಮ್ಮ ಬಿಡುವಿನ ದಿನಗಳ ಒಂದು ದಿವ್ಯ ಬಾಬ್ತು. ಮಳೆಗಾಲ ಆರಂಭವಾಗಿ ಬೇಸಾಯ ಆರಂಭಿಸಿ ಉತ್ತುಬಿತ್ತು ಫಸಲು ಕೈಗೆ ಬರುತ್ತದೆ ಅನಿಸಿದಾಗ ಅವರು ನಾಟಕದ ಪ್ರಾಕ್ಟೀಸ್ ಮಾಡಿ ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

Read More

ಸುಳಿಯ ಸೆಳವಿಗೆ ಸಿಲುಕದೇ…

ಮನುಷ್ಯ ಮುಕ್ತವಾಗಿ ಮತ್ತು ಸ್ವಚ್ಛಂದವಾಗಿ ಬೇರೆಯವರ ಜೊತೆ ಕಲೆಯಲು ರಂಗಭೂಮಿಗೆ ಬರಬೇಕು. ಅಲ್ಲಿ ಇರುವ ಮಜವೇ ಬೇರೆ. ಪ್ರೀತಿಯಲ್ಲಿ, ಸಲಿಗೆಯಲ್ಲಿ ಮತ್ತು ಸ್ನೇಹದಲ್ಲಿ ಕಾಲೆಳೆಯುವ ಬಗೆಗಳು ಇಲ್ಲಿ ಪಡೆದುಕೊಳ್ಳುವ ಆಯಾಮವೇ ಬೇರೆ. ಮೇಕಪ್‍ಗೆ ಕೂತರೆ ಮತ್ತು ರಂಗಕ್ಕೆ ಬಂದರೆ ಅಲ್ಲಿ ಅವರ ಚಹರೆ ಬೇರೆ. ಈ ಎಲ್ಲ ತಿಳಿದು ಮತ್ತು ಸಮುದ್ರದ ಬಗೆಗೆ ನನ್ನಲ್ಲಿ ಮೊದಲಿಂದ ಇರುವ ಸೆಳೆತದಿಂದ ಹೊರಟೆ. ಟಿಟಿಯಲ್ಲಿ ಹುಡುಗರ ಗೇಲಿ. ಪರಸ್ಪರ ಕಾಲೆಳೆಯುವ ಗುಣ ನಗು ತರಿಸುತ್ತಿತ್ತು.
ಎನ್.ಸಿ. ಮಹೇಶ್‌ ಬರೆಯುವ “ರಂಗ ವಠಾರ” ಅಂಕಣ

Read More

ಆತ್ಮಾವಲೋಕನ ಎಂಬುದೊಂದು ಯುದ್ಧ

ಪ್ರಸಿದ್ಧ ರಂಗಶಾಲೆಗಳಲ್ಲಿ ಕಲಿತು ಹೊರಬರುವವರು ಮಿಕ್ಕವರಿಗಿಂತ ಒಂದು ಸ್ತರದ ಮೇಲೆ ಇರುತ್ತಾರೆ. ಯಾಕೆಂದರೆ ಅವರನ್ನು ಹಾಗೆ ತರಬೇತುಗೊಳಿಸಿರಲಾಗುತ್ತದೆ. ಅವರಿಗೆ ರಂಗಪಠ್ಯವನ್ನು ಅಭ್ಯಾಸ ಮಾಡಿಸುವ ಕ್ರಮವೇ ಬೇರೆ. ನಟನೆ ಮತ್ತು ನಟರ ಆಯ್ಕೆ ನಂತರದ ಕೆಲಸ. ಮೊದಲು ರಂಗಪಠ್ಯದ ಸಾರಸರ್ವದ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ. ಆ ರಂಗನಾಟಕ ರೂಪಕವಾಗಿ ಅರಳಿಕೊಂಡಿರುವ ಬಗೆಯನ್ನು ಬೆರಗಿನಲ್ಲಿ ಅರ್ಥೈಸಲಾಗುತ್ತದೆ. ನಂತರ ಪ್ರತಿಯೊಂದು ಪಾತ್ರ, ಅದರ ಅನನ್ಯತೆಯನ್ನು ವಿವರಿಸಲಾಗುತ್ತದೆ. ಚಿಕ್ಕ ಪಾತ್ರ ದೊಡ್ಡ ಪಾತ್ರದ ವರ್ಗೀಕರಣವನ್ನು ಮೊದಲು ಇಲ್ಲವಾಗಿಸುತ್ತಾರೆ.
ಎನ್.ಸಿ. ಮಹೇಶ್‌ ಬರೆಯುವ ರಂಗ ವಠಾರ ಅಂಕಣ

Read More

ಕತ್ತಲಿಗೆ ಬೆಳಕಿನ ಬೊಟ್ಟು ಇಟ್ಟಂತೆ ಇರುವ ಚಂದ್ರ..

‘ಅಸಲಿಗೆ ಇದನ್ನೇ ನಾಟಕ ಅಂದುಕೊಂಡಿದ್ದೆ. ಅಕ್ಷರ ರೂಪದಲ್ಲಿ ಇರುವಷ್ಟು ಹೊತ್ತು ಅದು ನಾಟಕವೇ. ಕೃತಿಯೇ. ಚರ್ಚಿತ ವಸ್ತುವೇ. ಆದರೆ ನಾಟಕ ಅಂದರೆ ಅಷ್ಟೇ ಅಲ್ಲ. ನಮ್ಮ ನಡುವಿನ ಮನುಷ್ಯರ ಢಾಳಾದ ಚಿತ್ರಣ ಅಕ್ಷರಗಳಲ್ಲಿ ರೂಪು ತಳೆಯುತ್ತ ಒಂದು ರೂಪು ಪಡೆಯುವುದನ್ನು ಮೊದಮೊದಲು ನಾನೂ ನಾಟಕ ಅಂತಲೇ ಅಂದುಕೊಂಡಿದ್ದೆ. ಆದರೆ ನಂತರದಲ್ಲಿ ನಾನು ಅರಿತ ಸತ್ಯ ಅಂದರೆ ಈ ಅಕ್ಷರರೂಪದ ನಾಟಕ ರಂಗದ ಮೇಲೆ ರೂಪು ತಳೆಯಬೇಕಾದ ಪೂರ್ವದಲ್ಲಿ ಒಂದು ಮಹಾನ್ ನಾಟಕದ ಅನಾವರಣ ಆಗತೊಡಗುತ್ತದೆ.’
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ...

Read More

ಬರಹ ಭಂಡಾರ