Advertisement

Tag: ಎನ್.ಸಿ. ಮಹೇಶ್

ಸಹಜತೆಯ ದುಕೂಲವುಟ್ಟ ಪರ್ವ ನಾಟಕದ ಸುತ್ತ

‘ಪರ್ವ’ ನಾಟಕ ನನಗೆ ಇಷ್ಟವಾದದ್ದು ‘ಯಮ’ನನ್ನು ಸಹಜ ಮನುಷ್ಯನನ್ನಾಗಿ ಬಿಂಬಿಸುವ ಬಗೆಯಲ್ಲೇ ಇಡೀ ಪ್ರಯೋಗವನ್ನು ಸಿದ್ಧಮಾಡಿದ್ದ ಬಗೆಯಿಂದ. ಯಾವ ಪಾತ್ರವನ್ನೂ ಪುರಾಣ ಚಿತ್ರಿಸಿರುವ ಭಯಂಕರ ಯಮನನ್ನಾಗಿಸಲು ಮುಂದಾಗಿಲ್ಲ. ಎಲ್ಲೋ ಒಂದೆರಡು ಕಡೆ ಸಂಜಯನನ್ನು ಇಂದಿನ ವಾಹಿನಿಗಳ ಸುದ್ದಿ ವಾಚಕನ ರೀತಿಯಲ್ಲಿ ಸಂಗೀತ ಸಮೇತ ಬಿಂಬಿಸಿದ್ದು ಕೊಂಚ ಮಸಾಲೆ ಬೆರೆಸಿದಂತೆ ಅನಿಸಿತು.- ಪರ್ವ ನಾಟಕದ ಕುರಿತು ಎನ್. ಸಿ. ಮಹೇಶ್  ಬರೆದಿದ್ದಾರೆ

Read More

ಶೇಕ್ಸ್ ಪಿಯರನ್ನು ಪ್ರೀತಿಸುತ್ತಿದ್ದ ಜಿಕೆಜಿ ಸರ್ ನೆನಪುಗಳು

ಜೋಸೆಫ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಗೊಂಡಿದ್ದ ಪುಸ್ತಕ ‘ನಡೆನುಡಿ’.  ಜಿ.ಕೆ. ಗೋವಿಂದ ರಾವ್  ಅವರು ಹಲವು ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನ ಒಟ್ಟು ಮಾಡಿ ಎಚ್.ಎಸ್.ವಿ. ಸರ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಿಸಿದ್ದರು. ‘ಅರೆರೆ ಇವರು ಟಿವಿಯಲ್ಲಿ ಕಾಣಿಸಿಕೊಳ್ತಾರಲ್ಲ..’ ಎನ್ನುವ ಕುತೂಹಲದಲ್ಲೇ ಪುಸ್ತಕ ತೆರೆದೆ. ಅಲ್ಲಿಂದಾಚೆಗೆ ಜಿಕೆಜಿ ಸರ್ ನನಗೆ ಸ್ಪಷ್ಟವಾಗಲು ಆರಂಭಿಸಿದರು. ಅವರ ಬರವಣಿಗೆಗಳು ನನ್ನಲ್ಲಿ ಹೊಸ ಆಲೋಚನಾ ಕ್ರಮವನ್ನು ರೂಪಿಸಿಕೊಳ್ಳಲು ನೆರವಾದವು.
‘ರಂಗ ವಠಾರ’ ಅಂಕಣದಲ್ಲಿ ಎನ್. ಸಿ. ಮಹೇಶ್  ಲೇಖನ

Read More

‘ಪ್ರೇಕ್ಷಕರಿಗೆ ರಂಗಭೂಮಿಯೇನೂ ಅನಿವಾರ್ಯವಲ್ಲ’

ರಂಗಭೂಮಿ ದಣಿದಿಲ್ಲ, ಬದಲಾಗಿ ತುಂಬ ಆ್ಯಕ್ಟಿವ್ ಆಗಿದೆ. ಈ ಕ್ಷೇತ್ರದಲ್ಲಿ ‘ಕೊಬ್ಬು’ ಖಂಡಿತ ಇದೆ ನಿಜ; ಆದರೆ ಅದೇ ಕೊಬ್ಬು ವಾಸ್ತವ ಮರೆಯುವಂತೆ ಮಾಡುತ್ತಿದೆ. ವಿಚಿತ್ರ ಅಂದರೆ ಇದು ರಂಗಭೂಮಿಯಲ್ಲಿ ತೊಡಗಿಸಿಕೊಂಡವರನ್ನು ದಣಿಸುವ ಬದಲು ತುಂಬ ಆ್ಯಕ್ಟಿವ್ ಮಾಡುತ್ತಿದೆ. ಯಾವ ಬಗೆಯ ಆ್ಯಕ್ಟಿವ್‌ನೆಸ್ ಅದು ಎಂದು ನಾವು ಗ್ರಹಿಸಬೇಕು.  ತಮ್ಮ ಪ್ರಯೋಗಗಳ ಮೂಲಕ ಜನರ ಎದುರು ಸೋಲುತ್ತಿರುವ ಪ್ರಕ್ರಿಯೆಯೇ ಅವರನ್ನು ವಿಚಿತ್ರ ರೀತಿಯಲ್ಲಿ ಆ್ಯಕ್ಟಿವ್ ಮಾಡುತ್ತಿದೆ.  -ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್ ಅವರು ಡಾ. ಶ್ರೀಪಾದ ಭಟ್ ಅವರ ಲೇಖನಕ್ಕೆ ಪ್ರತಿಕ್ರಿಯೆ ದಾಖಲಿಸಿದ್ದಾರೆ.

Read More

ಜೀವನದ ʼರಂಗ ನೇಪಥ್ಯʼದಿಂದ ಮರೆಯಾದ ಗುಡಿಹಳ್ಳಿ

ಹಿಂದೊಮ್ಮೆ ಗುಡಿಹಳ್ಳಿ ಸರ್ ಅವರ ಬಳಿ ಮಾತಾಡುವಾಗ ತಮಗೆ ಹುಷಾರಿಲ್ಲ ಅಂತ ಅವರು ಹೇಳಿದದ್ದು ನೆನಪಿಗೆ ಬಂತು. ಆದರೆ ಅದು ಸಾವಿನ ರೂಪದಲ್ಲಿ ಕೂತಿದೆ ಎನ್ನುವ ಕಲ್ಪನೆ ನನ್ನಲ್ಲಿ ಇರಲಿಲ್ಲ. ನನ್ನೊಂದಿಗೆ ಮಾತಾಡುವಾಗಲೇ ಅವರ ಧ್ವನಿ ಕ್ಷೀಣಿಸಿದಂತೆ ಅನಿಸುತ್ತಿತ್ತು. ಹೀಗೇ ಏನೋ ವಯೋಮಾನ ಸಹಜವಾಗಿ ಖಾಯಿಲೆ ಅಡರಿ ಕೊಂಡಿರುತ್ತದೆ… ಕಾಲಕ್ರಮದಲ್ಲಿ ಸುಧಾರಿಸುತ್ತದೆ ಅಂದುಕೊಂಡಿದ್ದೆ. ಆದರೆ ಇದು ಅವರ ಚಿತ್ರವನ್ನು ಸಂಪೂರ್ಣ ಕಲಕಿ ಬಿಡಬಹುದು ಎಂಬ ಅಂದಾಜೂ ಇರಲಿಲ್ಲ. ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

Read More

ತ್ರಿಮೂರ್ತಿಗಳನ್ನು ರಂಗದ ಬದುಕಿನ ಚಿತ್ರಗಳೊಂದಿಗೆ ಸಮೀಕರಿಸುತ್ತ…

‘ಕಾಯೌ ಶ್ರೀಗೌರಿ..’ ಎಂಬ ನಾಡಗೀತೆಯನ್ನು ಅಂದು ಬರೆದಿದ್ದ ಬಸವಪ್ಪ ಶಾಸ್ತ್ರಿಗಳು ನೆನಪಾಗುತ್ತಾರೆ. ಮೈಸೂರನ್ನು ನಾವಿಂದು ಸಾಂಸ್ಕೃತಿಕ ನಗರಿ ಎಂದು ಕರೆದುಕೊಳ್ಳುತ್ತೇವೆ. ವಿದ್ವತ್ತಿಗೆ ಹೆಸರಾದದ್ದು ಎಂದು ತಿಳಿದೇ ಇದೆ. ಇಷ್ಟಿದ್ದೂ ಬಸವಪ್ಪ ಶಾಸ್ತ್ರಿಗಳ ಸ್ಮಾರಕದ ಕಡೆಗೆ ಅಸಡ್ಡೆ ಯಾಕೆ ಮತ್ತು ಹೇಗೆ ಬೆಳೆಯಿತೋ ಗೊತ್ತಿಲ್ಲ. ಮೈಸೂರಿನಲ್ಲಿರುವ ಎಲ್.ಐ.ಸಿ ಬಿಲ್ಡಿಂಗ್ ಬಳಿ ರಸ್ತೆ ಪಕ್ಕದಲ್ಲಿ ಬಸವಪ್ಪ ಶಾಸ್ತ್ರಿಗಳ ಸ್ಮಾರಕವಿದೆ. ಅದರ ಬಣ್ಣ ಮಾಸಿ, ಗೋಡೆಗಳ ಮೇಲೆಲ್ಲ ಬಳ್ಳಿ ಹಬ್ಬಿಕೊಳ್ಳುವಷ್ಟು ನಿರ್ಲಕ್ಷ್ಯವೇಕೆ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ