Advertisement

Tag: ಗಿರಿಜಾ ರೈಕ್ವ

ದೇವರು ಧರಿಸುವ ಬಟ್ಟೆಯೂ ದೇವರಿಗೆ ಕೊಟ್ಟ ಮಾತೂ..

ದೇವರಿಗೆ ಉಡುಪಾಗಿ ನೇಯುವುದು ಒಂದಾದರೆ, ದೇವರನ್ನೇ ನೇಯುವುದು  ಕೂಡ ಇನ್ನೊಂದು ಬಗೆಯ  ವಸ್ತ್ರಕಲೆ. ಗುಜರಾತಿನಲ್ಲಿ ಬಟ್ಟೆಯ ಮೇಲೆ ಚಿತ್ರ ಬರೆಯುವ ಮಾತಾ ನಿ ಪಚ್ಚೆಡಿ ಅನ್ನುವ ಸಂಪ್ರದಾಯ ಇದೆ. ಇದನ್ನು ಮಾಡುವವರು ಜಲ್ಲಿ ಕಲ್ಲು ಒಡೆಯುವ, ಅಷ್ಟೇನೂ ಅನುಕೂಲಸ್ಥರಲ್ಲದ ವರ್ಗ.  ಅವರಿಗೆ ದೇವಾಲಯಕ್ಕೆ ಪ್ರವೇಶ ಕೊಡಲಿಲ್ಲ ಅಂತ ಬಟ್ಟೆಯ ಮೇಲೆ ದೇವಿಯ ಚಿತ್ರ ಬರೆದರು. ಅದನ್ನೇ ಪೂಜೆ ಮಾಡುತ್ತಾ ಬಂದರು. ಅವರು ಸೀರೆಗಳ ಮೇಲೆ ವಿಧವಿಧವಾದ ದೇವಿಚಿತ್ರಗಳನ್ನು ಕಲಾತ್ಮಕವಾಗಿ, ಗಾಢ ಬಣ್ಣಗಳಲ್ಲಿ ಬಿದಿರಿನ ಕಡ್ಡಿಗಳಿಂದ ಮೂಡಿಸುತ್ತಾರೆ. ಅದನ್ನು ಗುಜರಾತಿನ ಕಲಮ್‌ಕಾರಿ ಎನ್ನುತ್ತಾರೆ. ಅವರಿಗೆ ಅದು ಬರಿ ಬಟ್ಟೆಯಲ್ಲ, ದೇವಿಯ ಆರಾಧನೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’

Read More

ಚಂಬಲ್‌ನ ಡಕಾಯಿತರು ಕಾಪಾಡಿದ ವಿಗ್ರಹಗಳು

ನಮ್ಮ ದೇಶವನ್ನು ನೋಡಲು ಸರಿಯಾಗಿ ಒಂದು ಜನ್ಮ ಸಾಕಾಗಲ್ಲ. ಅಲೆದಾಡಲು ಇನ್ನೂ ಅದೆಷ್ಟು ಜನ್ಮಗಳು ಬೇಕೋ. ಅದರಲ್ಲೂ ಈ ಮಧ್ಯಪ್ರದೇಶ ರಾಜ್ಯವನ್ನು ನೋಡಲು ಅರ್ಧ ಜನ್ಮವೇ ಬೇಕೇನೋ. ಪ್ರಸ್ತುತ ನಾನು ಗ್ವಾಲಿಯರ್‌ನಿಂದ ೨೫ ಕಿ. ಮೀ ದೂರದಲ್ಲಿರುವ ಮೊರೇನಾ ಅನ್ನೋ ಜಿಲ್ಲೆಗೆ ಸೇರಿದ ಬಟೇಶ್ವರ ಗುಡಿಗಳು ಜೀವ ತಳೆದ ಕಥೆಯ ಬಗ್ಗೆ ಹೇಳಬೇಕು.  ಇವು ೮ ರಿಂದ ೧೦ ನೇ ಶತಮಾನದಲ್ಲಿ ನಿರ್ಮಾಣ ಆಗಿರಬಹುದು ಎನ್ನುತ್ತಾರೆ ಪುರಾತತ್ವಜ್ಞರು. ಆದರೆ ಇದು ಬೆಳಕಿಗೆ ಬಂದಿದ್ದು ೨೦೦೫ ರಿಂದ ಈಚೆಗೆ. ಅಲ್ಲೀ ತನಕ ಏನಾಗಿತ್ತು? ಯಾಕೆ ಯಾರೂ ಇಲ್ಲಿರುವ ವಿಗ್ರಹಗಳನ್ನು ಕಳುವು ಮಾಡಲಿಲ್ಲ? ಅವುಗಳನ್ನು ಚಂಬಲ್‌ ನ ಡಕಾಯಿತರು  ಪರೋಕ್ಷವಾಗಿ ಕಾಯುತ್ತಿದ್ದರು ಎಂದು ಬರೆಯುತ್ತಾರೆ ಗಿರಿಜಾ ರೈಕ್ವ.  ದೇವಸನ್ನಿಧಿ ಅಂಕಣದಲ್ಲಿ ಅವರ ಹೊಸ ಬರಹ ಇಲ್ಲಿದೆ.

Read More

ಕಲ್ಲಿನಲ್ಲಿ ಕಡೆದ ಆಲ್ಬಮ್‌, ತಾಡಿಪತ್ರಿ

ನಾನು ಮೊದಲು ಹೋಗಿದ್ದು ಬುಗ್ಗ ರಾಮಲಿಂಗೇಶ್ವರಕ್ಕೆ. ನಿತ್ಯ ಬರುವ ಭಕ್ತಾದಿಗಳನ್ನು ಬಿಟ್ಟರೆ ಹೆಚ್ಚು ಜನ ಇರಲಿಲ್ಲ. ವಿಜಯನಗರ ಶೈಲಿಯ ದೇವಾಲಯಗಳಲ್ಲಿ ಇರುವಂತೆ ಪ್ರವೇಶ ದ್ವಾರ ಎತ್ತರವಾಗಿದ್ದು, ಎರಡೂ ಬದಿಗಳಲ್ಲಿ ಗಂಗಾ, ಯಮುನೆಯರ ಶಿಲ್ಪಗಳಿಂದ ಕೂಡಿದೆ. ಇವು ಮಾನಸಿಕವಾಗಿ ನಮ್ಮನ್ನು ಗಂಗೆ, ಯಮುನೆಯರಿಂದ ಶುಚಿಗೊಳಿಸಿಕೊಂಡು ಒಳಕ್ಕೆ ಹೋಗುವ ಪ್ರತೀಕ. ದೇವಾಲಯದ ಪ್ರಶಾಂತತೆ ಹಾಗೂ ಅದರ ಬೃಹತ್‌ ಗಾತ್ರವನ್ನು ಕಂಡು ನನಗೆ ಒಂದು ಕಡೆ ಬೆರಗು ಜೊತೆಗೆ ಏನು ನೋಡಲಿ ಏನು ಬಿಡಲಿ ಅಂತ ಸ್ವಲ್ಪ ಹೊತ್ತು ತಲೆ ಕೆಟ್ಟ ನೊಣದ ಹಾಗೆ ಕ್ಯಾಮೆರಾ ಹಿಡಿದುಕೊಂಡು ಓಡಾಡಿದೆ.
‘ದೇವ ಸನ್ನಿಧಿ’ ಅಂಕಣದಲ್ಲಿ ತಾಡಿಪತ್ರಿ ಎಂಬ ಅಪರೂಪದ ಜಾಗದ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ಗಗನಚುಂಬಿ ಬೆಟ್ಟಗಳ ಸಂದಿಯಲ್ಲಿ ಬುದ್ಧಗಂಟೆಯ ಸದ್ದು

ನದಿ, ಜಲಪಾತಗಳೆಲ್ಲಾ ಹೆಪ್ಪುಗಟ್ಟಿದ್ದ ಚಳಿಗಾಲದಲ್ಲೊಮ್ಮೆ ನಾನು ಚೀನಾದ ದಟಾಂಗ್ ಎನ್ನುವ ಊರಿನಲ್ಲಿದ್ದೆ. ಇದು ಉತ್ತರ ಚೀನಾದ ಶಾಂಕ್ಷಿ ಪ್ರಾಂತ್ಯದಲ್ಲಿದೆ, ಇದರ ಸುತ್ತಮುತ್ತ ಯುನೆಸ್ಕೋ ತಾಣಗಳೂ ಸೇರಿದಂತೆ ಅನೇಕ ಪ್ರಾಚೀನ ಬೌದ್ಧತಾಣಗಳಿವೆ. ಅಲ್ಲೊಂದು ಹಳೆಯ ಬೌದ್ಧವಿಹಾರ. ಬೋಳುಬೆಟ್ಟಗಳ ಜೊತೆ ತಾನೂ ಒಂದಾಗಿರುವಂತೆ ತೋರುವ ಆ ವಿಹಾರ ನೆಲದಿಂದ ೭೫ ಮೀ ಎತ್ತರದಲ್ಲಿ ಬೆಟ್ಟದ ಮೇಲ್ಮೈನಲ್ಲಿ ೧೫೦೦ ವರ್ಷಗಳಿಂದ ಬೀಳದೆ, ಅಲ್ಲಾಡದೆ, ಮಳೆಗೆ ಜಗ್ಗದೆ, ಬಿಸಿಲಿಗೆ ಕುಗ್ಗದೆ, ಹಿಮಕ್ಕೆ ಕರಗದೆ, ಗಾಳಿಗೆ ಹಾರಿ ಹೋಗದೆ ಹಾಗೇ ಉಳಿದುಕೊಂಡು ನಮ್ಮಂತಹ ನೋಡುವ ಕಣ್ಣಿಗೆ ವಿಸ್ಮಯವಾಗಿ ಉಳಿದುಬಿಟ್ಟಿದೆ.
‘ದೇವ ಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ಬರಹ

Read More

ಶ್ರದ್ಧೆಯ ಮೂಲ ಎಲ್ಲಿದೆ?

ಆತ ಮೇಲೆ ಹೋಗಿ ಗಂಧದ ಕಡ್ಡಿ ಹಚ್ಚಿ ಅಷ್ಟೂ ದಿಕ್ಕಿಗೆ ಭಕ್ತಿಯಿಂದ ಪೂಜೆ ಮಾಡಿದ. ಆಮೇಲೆ ನಮಸ್ಕರಿಸಿದ. ಹೊರಡುವ ಮುಂಚೆ ಕೇಳಿದೆ. ಏನಿದು ಅಂತ. ಆತ “ಸುತ್ತ ದೇವರುಗಳಿದ್ದಾರೆ, ಪೂಜೆ ಮಾಡದಿದ್ದರೆ ಆಗುತ್ತಾ? ದಿನ ಬೆಳಿಗ್ಗೆ ಸಾಯಂಕಾಲ ನಾವು ಯಾರೇ ಶಿಫ್ಟ್‌ ನಲ್ಲಿರಲಿ ಪೂಜೆ ಮಾತ್ರ ತಪ್ಪಿಸಲ್ಲ” ಎಂದ. ಅವರು ಅದ್ಯಾವುದೂ ಮಾಡದಿದ್ದರೂ ನಡೆಯುತ್ತೆ. ಆರ್ಕಿಯಾಲಜಿಯವರ ಪ್ರಕಾರ ಅದೊಂದು ಸ್ಮಾರಕ. ಪೂಜೆಗೆ ದುಡ್ಡು ಕೊಡೋಲ್ಲ. ಅದು ನಿತ್ಯಪೂಜೆ ನಡೆಯುವ ದೇವಾಲಯವಲ್ಲ. ಆದರೆ ಇದು ಅಲ್ಲಿರುವ ಸೆಕ್ಯುರಿಟಿಗಳು ನಡೆಸಿಕೊಂಡು ಬಂದಿರುವ ಪರಿಪಾಠ.
ಗಿರಿಜಾ ರೈಕ್ವ ಬರೆಯುವ ಪ್ರವಾಸ ಅಂಕಣ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ