Advertisement

Tag: ಗುರುಪ್ರಸಾದ್ ಕಂಟಲಗೆರೆ

ಗಂಟಲೊಳಗೆ ಇಳಿಯಲೊಲ್ಲದ ಗುಲ್ಜಾರ್ ಖಾನ್ ಕಟ್ಟಿದ ಮುದ್ದೆಗಳು

ಡಬ್ಬಿಯಲ್ಲಿದ್ದ ತಿಂಡಿ ಕಳವಾಗುತ್ತಿರುವುದನ್ನು ನೋಡಿದ ‘ಹಾರ್ಟ್ ವೀಕ್’ ಮಾರನೆ ಬೆಳಗ್ಗೆ ಊಟವಾದ ಮೇಲೆ ಒಂದು ಉಪಾಯ ಮಾಡಿದ, ತನ್ನ ಟ್ರಂಕಿನ ಮುಂದೆ ನಿಂತುಕೊಂಡು ಎಲ್ಲ ವಿದ್ಯಾರ್ಥಿಗಳನ್ನುದ್ದೇಶಿಸಿ ತನ್ನ ತಿಂಡಿಬಾಕ್ಸ್ ಮುಚ್ಚಳವನ್ನು ತೆಗೆದು ಎಲ್ಲರಿಗೂ ಕಾಣುವಂತೆ ‘ನೋಡ್ರಪ್ಪ ನಾನು ನನ್ನ ತಿಂಡಿಗೆ ಬಾಯಿ ತುಂಬ ಉಗಿತಾ ಇದಿನಿ, ಯಾರಾದರೂ ತಿಂದರೆ ನನ್ನ ಎಂಜಲು ತಿಂದಂತೆ’ ಎಂದು ಕ್ಯಾಕರಿಸಿ ಕ್ಯಾಕರಿಸಿ ಚೆನ್ನಾಗಿ ಉಗಿದು, ನಂತರ ಬಾಯಿ ಮುಚ್ಚಿ ಟ್ರಂಕಿಗಿಟ್ಟು ಸ್ಕೂಲಿಗೆ ಹೋದ. ಮಧ್ಯಾಹ್ನ ಬಂದು ನೋಡಿದಾಗ ಆತನ ತಿಂಡಿ ಹೇಗಿತ್ತೋ ಹಾಗೆಯೇ ಇತ್ತು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು-ತಟ್ಟೆ’ ಸರಣಿಯ ಮೂರನೆಯ ಕಂತು

Read More

ಒಂದು ಬೊಗಸೆ ನೀರಿಗೆ ಹರಸಾಹಸ

ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ತೆಂಗಿನಮರಗಳು ರಾತ್ರಿ ಉಚ್ಚೆ ಉಯ್ಯಲು ಹೊರ ಬಂದು ನೋಡಿದಾಗ ದೆವ್ವದಂತೆ ಕಾಣುತ್ತಿದ್ದವು. ಹಾಸ್ಟೆಲ್ ಹುಡುಗರು ಸಂಜೆ ಸ್ಕೂಲಿಂದ ಬಂದರೆಂದರೆ ಗುರಿ ಇಟ್ಟು ಕಲ್ಲು ಬೀಸಿ ತೆಂಗಿನ ಕಾಯಿ ಉದುರಿಸುತ್ತಿದ್ದರು. ಪ್ರತಿನಿತ್ಯ ಒಂದೆರಡು ತೆಂಗಿನ ಕಾಯಿ ಕಿತ್ತು ಚೂಪಾದ ಕಲ್ಲಿನಿಂದ ಮತ್ತು ಹಲ್ಲಿನಿಂದ ಸಿಪ್ಪೆ ಸಿಗಿದು ಕಾಯಿ ಕೆಚ್ಚಿ ಪಚಿಡಿ ಮಾಡಿ ತಿನ್ನುತ್ತಿದ್ದೆವು. ತೋಟದ ಮಾಲೀಕರಿಗೆ ಗೊತ್ತಾದರೆ ದೊಣ್ಣೆಯೊಂದಿಗೆ ಓಡಿಸಿಕೊಂಡು ಬರುತ್ತಿದ್ದರು. ಅವರ ಹತ್ತಿರ ಬಂದೂಕು ಇದೆ, ಅವರು ನಿರ್ದಯಿಗಳು, ಕಳ್ಳತನ ಮಾಡಿದರೆ ಗುಂಡು ಹಾರಿಸಿ ಸುಟ್ಟು ಬಿಡುತ್ತಾರೆಂದು…”

Read More

ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು ತಟ್ಟೆ’ ಸರಣಿ ಇಂದಿನಿಂದ ಶುರು

ಹಾಸ್ಟೆಲ್ ಜೀವನವೆಂದರೆ ಬದುಕನ್ನು ಸ್ವಯಂ ಅನ್ವೇಷಿಸುವ ಮೊದಲ ಹೆಜ್ಜೆಯಂತೆ. ಸಮವಯಸ್ಕರ ಜೊತೆಗೆ ಬದುಕುವ ಅವಕಾಶ ಸಿಗುವುದರಿಂದ ಅಲ್ಲಿನ ನೋವು ನಲಿವುಗಳೊಡನೆ ನವಿರು ಭಾವವೊಂದು ಸೇರಿಕೊಂಡಿರುತ್ತದೆ. ಕಥೆಗಾರ ಗುರುಪ್ರಸಾದ್ ಕಂಟಲಗೆರೆ ತೀರಾ ಎಳವೆಯಲ್ಲಿಯೇ ಹಾಸ್ಟೆಲ್ ಬದುಕನ್ನು ಕಂಡವರು. ಆ ನೆನಪುಗಳನ್ನು ಅವರು ಪ್ರತಿವಾರ ‘ಟ್ರಂಕು ತಟ್ಟೆ’ ಎಂಬ ಸರಣಿಯಲ್ಲಿ ಬರೆಯಲಿದ್ದಾರೆ. ಈ ಬರಹಗಳು ಅಕ್ಷರಗಳನ್ನು ಮೀರಿದ ಕಥೆಯೊಂದನ್ನು ಹೇಳುತ್ತವೆಯೆನಿಸುತ್ತದೆ. ಮೊದಲ ಬರಹ ನಿಮ್ಮ ಓದಿಗಾಗಿ ಇಲ್ಲಿದೆ.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ