Advertisement

Tag: ಗುರುಪ್ರಸಾದ ಕುರ್ತಕೋಟಿ

ಬೆಳೆದ ಅಕ್ಕಿಯ ಉಣ್ಣುವ ತವಕ…: ಗುರುಪ್ರಸಾದ ಕುರ್ತಕೋಟಿ ಅಂಕಣ

ಇದೊಂಥರ ವೈರುಧ್ಯ. ಚೆನ್ನಾಗಿದೆ ಆದರೂ ತಿನ್ನೋಲ್ಲ! ಯಾಕಿರಬಹುದು? ಬಹುಶಃ ಬೆಳ್ಳಗೆ ಪಾಲಿಶ್ ಮಾಡಿದ ರೇಷನ್ ಅಕ್ಕಿಯನ್ನು ತಿಂದು ತಿಂದು ಅವರಿಗೆ ರೂಡಿ ಆಗಿಬಿಟ್ಟಿದೆಯೋ ಏನೋ. ತವಡನ್ನು ತೆಗೆದು ಅದರಲ್ಲಿ ಏನೂ ಇರದಂತೆ ಮಾಡಿ ಪಾಲಿಶ್ ಮಾಡಿ ಕೊಡುವ ಅಕ್ಕಿಯೇ ಎಲ್ಲರಿಗೂ ಪ್ರಿಯ. ಶ್ರೀಮಂತರು ಅಷ್ಟೇ ಯಾಕೆ ತಿನ್ನಬೇಕು ಎಲ್ಲರೂ ತಿನ್ನೋಣ ಅಂತ ಇವರೂ ಪಾಲಿಶ್ ಅಕ್ಕಿಯ ಮೊರೆ ಹೋದರೆ? ಇದೆ ಕಾರಣಕ್ಕೆ ಶ್ರೀಮಂತರಿಗೆ ಬರುವ ಸಕ್ಕರೆ ಕಾಯಿಲೆ, ಹೃದಯ ರೋಗ ಈಗ ಎಲ್ಲರಿಗೂ ಬರುತ್ತಿದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಕೊನೆಗೂ ಕೈಗೆ ಬಂದ ಭತ್ತ!: ಗುರುಪ್ರಸಾದ ಕುರ್ತಕೋಟಿ ಅಂಕಣ

ಎರಡು ಟ್ರಾಕ್ಟರ್ ಮೇಲೆ ಸ್ವಲ್ಪ ಹೆಚ್ಚು ಭತ್ತ ಸಿಕ್ಕಿತ್ತು. ಅದು ಹೆಚ್ಚು ಕಡಿಮೆ 25 ಚೀಲ ಆಗುತ್ತೆ ಎಂಬ ಅಂದಾಜು ಸಿಕ್ಕಿತು. ಒಂದು ಚೀಲ ಅರವತ್ತು ಕೆಜಿ ತೂಕ. ಹೀಗಾಗಿ ನಮಗೆ ಸಿಕ್ಕಿದ್ದು 1500 ಕೆಜಿ ಭತ್ತ. ಅದನ್ನು ಅಕ್ಕಿ ಮಾಡಿಸಿದರೆ ಹೆಚ್ಚು ಕಡಿಮೆ 1೦೦೦ ಕೆಜಿ ಅಕ್ಕಿ ಸಿಕ್ಕೀತು. ಅದು ಪ್ರಥಮ ಬಾರಿ ಬೆಳೆದ ನಮ್ಮ ಮಟ್ಟಿಗೆ ತುಂಬಾ ಹೆಮ್ಮೆಯ ಸಂಗತಿಯೇ ಆಗಿತ್ತು. ಆದರೆ ಅಲ್ಲಿಯವರೆಗೆ ಬರಲಿಕ್ಕೆ ಇನ್ನೂ ತುಂಬಾ ಸಮಯ ಇತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಎಗ್‌ ರೈಸ್‌ ತಿಂತೀರಿ ಸರ್ರ…?

ಮನೆ ಸೇರಿದಾಗ ಹಲವು ಯೋಚನೆಗಳು ಮುತ್ತಿಕೊಂಡವು. ಪಟ್ಟಣದಲ್ಲಿ ಇದ್ದ ನಾವುಗಳು ಅಲ್ಲಿನ ಒತ್ತಡದ ಬದುಕು ಸಾಕಾಗಿ, ಒಂದಿಷ್ಟು ಶುದ್ಧ ಹವೆ, ಹಸಿವಾದಾಗ ವಿಷರಹಿತ ಆಹಾರ ಸಿಕ್ಕರೆ ಅದೇ ಸ್ವರ್ಗ ಅಂತ ಅಲ್ಲಿಂದ ಇಲ್ಲಿಗೆ ನೆಮ್ಮದಿಯನ್ನು ಅರಸಿ ಬರುತ್ತೇವೆ. ಆದರೆ ಶ್ಯಾಮನಂತಹ ಗ್ರಾಮವಾಸಿ ಯುವಕರು ಕೈತುಂಬಾ ದುಡ್ಡು ಮಾಡಿದರೆ ಮಾತ್ರ ಸುಖ ಅಂತ ಅಂದುಕೊಳ್ಳುತ್ತಾರೆ. ಹೌದು ದುಡ್ಡು ಬೇಕು.. ಆದರೆ ಬೆಂಝ್ ಕಾರೆ ಆಗಬೇಕೇ? ಇದ್ದುದರಲ್ಲೇ ಸುಖ ನೆಮ್ಮದಿ ಕಾಣಲು ಸಾಧ್ಯವಿಲ್ಲವೇ?
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ನಿನ್ನೆ ಇದ್ದದ್ದು ಇವತ್ತು ಮಂಗಮಾಯ!

ಒಮ್ಮಿಂದೊಮ್ಮೆಲೆ ಮೂಡುತ್ತಿದ್ದ ಆ ಕಳೆ ನಮ್ಮಲ್ಲಿ ಚಿಂತೆ ಉಂಟುಮಾಡಿದ್ದು ಹೌದು. ಅಂತಹ ಗಿಡಗಳು ಬೆಳೆಯುವಂತೆ ಯಾರಾದರೂ ಬೇಕಂತಲೇ ಒಂದಿಷ್ಟು ಬೀಜಗಳನ್ನು ನಮ್ಮ ಭತ್ತದ ಬೆಳೆಗಳ ನಡುವೆ ಎಸೆದಿರಬೇಕು ಎಂಬ ಸಂಶಯ ನಾಗಣ್ಣ ಅವರಿಗೆ ಮೂಡಿತು. ಇದ್ದರೂ ಇದ್ದೀತು ಅಂತ ನನಗೂ ಅನಿಸಿತು. ಆದರೆ ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡೋಣ ಅಂತ ಸುಮ್ಮನಾದೆ. ಒಂದು ಮೂಟೆ ಭತ್ತ ಬಂದರೂ ಸಾಕು, ಒಂದಿಷ್ಟು ದಿನ ವಿಷರಹಿತ ಅನ್ನ ಉಣ್ಣಬಹುದು ಎಂಬ ಸಣ್ಣ ಆಸೆ ನಮಗಿತ್ತು ಅಷ್ಟೇ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

“ಸರ್ವೆ” ಜನಾಃ ದುಃಖಿನೋಭವಂತು!

ಅಂತೂ ಇಂತೂ ಅಲ್ಲಿನ ಸೊಸೈಟಿಯಲ್ಲಿ ನಮ್ಮ ಖಾತೆ ತೆರೆದಿದ್ದು ಆಯ್ತು. ಬೆಳೆ ಸಾಲವಂತೂ ಸಿಕ್ಕಿತು. ಸ್ವಲ್ಪ ಉಸಿರಾಡುವಂತಾಯ್ತು. ಬೇಲಿ ಕಟ್ಟಲು ಸಾಲವನ್ನು ಮುಂದಿನ ವರ್ಷ ಕೊಡುತ್ತೇವೆ ಅಂತ ಅಲ್ಲಿನವರು ಹೇಳಿದರಾದರೂ ಒಂದು ಹೆಜ್ಜೆಯಾದರೂ ಮುಂದೆ ಬಂದೆನಲ್ಲ ಅಂತ ಖುಷಿಯಾಗಿತ್ತು. ಈ ಎಲ್ಲ ಪ್ರಕ್ರಿಯೆಗಳಲ್ಲಿ ಶಂಭುಲಿಂಗ ಹೆಗಡೆ ಮಾವನ ಪಾತ್ರ ತುಂಬಾ ದೊಡ್ಡದು. ಅವರಿಲ್ಲದಿದ್ದರೆ ನನಗೆ ಇಷ್ಟೆಲ್ಲ ಸುಲಭದಲ್ಲಿ ಸೊಸೈಟಿ ಸಾಲ ಸಿಗುತ್ತಿರಲಿಲ್ಲ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ...

Read More

ಬರಹ ಭಂಡಾರ