ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚೀಮನಹಳ್ಳಿ ರಮೇಶಬಾಬು ಕತೆ

ಮಳೆ ನಿಂತಿತ್ತಾದರೂ ಸಂದಿಯಲ್ಲಿರುವ ನೀರು ಖಾಲಿಯಾಗುವವರೆಗು ಮನೆಯೊಳಗೆ ನೀರು ಬರುತ್ತಲೆ ಇತ್ತು. ಹಾಗಾಗಿ ಅವಳು ಬಹುಪಾಲು ರಾತ್ರಿಯೆಲ್ಲ ಹಾಗೆ ನೀರನ್ನು ಹೊರ ಹಾಕುತ್ತಲೆ ಇದ್ದಳು. ಅದಾದ ಮೇಲೆ ಮಣ್ಣನ್ನೆಲ್ಲ ತೆಗೆದು ಒಂದಷ್ಟು ಸ್ವಚ್ಛಗೊಳಿಸಿದ್ದಳಾದರು ಮುಂಜಾವಿನವರೆಗೂ ತಾರಸಿ ಸೋರುತ್ತಲೆ ಇತ್ತು. ಅವಳು ತುಂಬಿದ ಪಾತ್ರೆಗಳಲ್ಲಿನ ನೀರನ್ನು ಆಚೆ ಚಲ್ಲಿ ಮತ್ತೆ ಅದೇ ಜಾಗದಲ್ಲಿ ಇಡುತ್ತಿದ್ದಳು. ಹೀಗೆ ರಾತ್ರಿಯೆಲ್ಲ ಎದ್ದು ಬಗ್ಗಿ ಓಡಾಡಿ ಹೈರಾಣಾಗಿದ್ದಳು. ರಾತ್ರಿಯ ಕತ್ತಲಲ್ಲಿ ಅದುಮಿಟ್ಟುಕೊಂಡಿದ್ದ ಅವಳೆಲ್ಲ ಭಾವನೆಗಳು ಬೆಳಗಾಗುತ್ತಿದ್ದಂತೆ ಸಿಡಿದು ಸದ್ದು ಮಾಡತೊಡಗಿದವು.

Read More