Advertisement

Tag: ಡಾ. ಕೆ.ಬಿ. ಸೂರ್ಯಕುಮಾರ್

ವಿಷ ವರ್ತುಲದ ಒಂದು ವಿಚಿತ್ರ ವೃತ್ತಾಂತವು..

ಆಕೆಯ ಹೆಸರು ರೇಖಾ, ವಯಸ್ಸು ಇಪ್ಪತ್ತೈದು. ಗಂಡ ಕಾರ್ಯಪ್ಪನ ಪ್ರಕಾರ ಸಾಧಾರಣವಾಗಿ ಆರೋಗ್ಯವಾಗಿಯೇ ಇದ್ದ ಆಕೆ ಅಂದು ರಾತ್ರಿ ಪಕ್ಕನೆ ಎದೆ ನೋವು, ಸುಸ್ತು ಎನ್ನುತ್ತ ವಾಂತಿ ಮಾಡತೊಡಗಿದ್ದಳು. ತುಂಬಾ ಸುಸ್ತಾಗಿದ್ದ ಆಕೆ ನರಳುತ್ತಾ ತನಗೆ ಉಸಿರಾಡಲು ತೊಂದರೆಯಾಗುತ್ತಿದೆ, ತುಂಬಾ ತಲೆನೋವು, ತಲೆ ತಿರುಗುತ್ತಿದೆ, ಕಿವಿಯಲ್ಲಿ ಏನೋ ಶಬ್ಧ ರಿಂಗಣಿಸುತ್ತಿದೆ ಎನ್ನುತ್ತಿದ್ದಳು. ನಾನು ಚಿಕಿತ್ಸೆ ಮಾಡುತ್ತಿದ್ದಂತೆಯೇ, ಆಕೆಗೆ ಅಪಸ್ಮಾರ ಬಂತು.

Read More

ಐಬಿಲ್ಲದ ಕೊಲೆ ಯಾವುದೂ ಇಲ್ಲಾ..

 ರೈಲು ಹಳಿಯ ಮೇಲಿದ್ದ ಗೋಣಿ ಚೀಲದಲ್ಲಿನ ಶವ ಮಮ್ಮಿಫೈಡ್ ಸ್ಥಿತಿಯಲ್ಲಿತ್ತು. ತೆರೆದು ನೋಡುವಾಗ ಶರೀರದಲ್ಲಿ ಯಾವ ವಾಸನೆಯು ಕೂಡ ಇರಲಿಲ್ಲ. ಶರೀರದಲ್ಲಿ ಅಲ್ಲಲ್ಲಿ ಒಣಗಿದ ಮರಳು ಸಿಕ್ಕಿಕೊಂಡಿದ್ದು, ಶರೀರವನ್ನು ಕೆಲವು ದಿನಪತ್ರಿಕೆಗಳಿಂದ ಸುತ್ತಲಾಗಿತ್ತು. ಎಲ್ಲಾ ಬಿಡಿಸಿ ನೋಡುವಾಗ ಶವವು ಸಾಧಾರಣ ನಲವತ್ತರಿಂದ ಐವತ್ತು ವರ್ಷದ ಒಳಗಿನ ಒಬ್ಬ ಗಂಡಸಿನ ಶರೀರವಾಗಿತ್ತು. ಮೈಯ ಮೇಲೆ ಪೈಜಾಮ ಮತ್ತು ಕಮರಿ ಆಂಗ್ರಖಾ ಎನ್ನುವ ಬಟ್ಟೆಗಳು ಇದ್ದವು.

Read More

ವಾರಂಟ್ ಎಂಬ ಮಾಯಾ ಬಜಾರ್

ಆಗ ರಸ್ತೆಗಳು ಅಷ್ಟು ಸರಿ ಇಲ್ಲದ್ದರಿಂದ ಮಡಿಕೇರಿಯಿಂದ ಬೆಂಗಳೂರಿಗೆ ಸಾಧಾರಣ ಏಳರಿಂದ ಎಂಟು ಗಂಟೆ ಸಮಯ ಬೇಕಿತ್ತು. ನಮ್ಮ ಸರಕಾರಿ ಕೆಂಪು ಬಸ್ಸಿನ ಪ್ರಯಾಣ ನಿಮಗೆಲ್ಲರಿಗೂ ಖಂಡಿತ ತಿಳಿದೇ ಇರುತ್ತದೆ. ಸೊಂಟ ಕುಲುಕಿಸಿಕೊಂಡು, ರಸ್ತೆಯ ಗುಂಡಿಗಳಲ್ಲಿ ಏಳುತ್ತಾ ಬೀಳುತ್ತಾ ಮುಂದೆ ಸಾಗಿದ ಬಸ್ಸನ್ನು ಮಂಡ್ಯದಲ್ಲಿ ತಿಂಡಿಗೆಂದು ನಿಲ್ಲಿಸಿದರು. ನಾನು ಕೆಳಗೆ ಇಳಿದು ಬಂದೆ. ಚಂದ್ರಶೇಖರನು ನನ್ನ ಜೊತೆಯಲ್ಲಿ ಬಂದು ನನ್ನ ಪಕ್ಕದಲ್ಲೇ ನಿಂತ.

Read More

ಕುಂಡೆಹಬ್ಬ ತಂದ ಮಂಡೆಬಿಸಿ

ಕೊಡಗಿನ ಬುಡಕಟ್ಟು ಜನರ ಒಂದು ವಿಶಿಷ್ಟವಾದ ಹಬ್ಬ ‘ಬೋಡ್ ನಮ್ಮೆ’  ಅಥವಾ ‘ಕುಂಡೆ’ ಹಬ್ಬ. ಈ ಹಬ್ಬದಲ್ಲಿ ಇವರು ವಿಚಿತ್ರ ವೇಷ ಭೂಷಣಗಳನ್ನು ಧರಿಸುತ್ತಾರೆ. ಕೆಲವರು ಮೈಯ್ಯನ್ನು ಸೊಪ್ಪಿನಿಂದ ಮುಚ್ಚಿ, ಇನ್ನು ಕೆಲವರು ನವೀನ ಪೋಷಾಕುಗಳ ಜೊತೆಗೆ, ಕಪ್ಪು ಕನ್ನಡಕ, ತಲೆಗೆ ಚಿತ್ರ ವಿಚಿತ್ರವಾದ ಟೋಪಿಗಳನ್ನು ಹಾಕಿಕೊಂಡು ವೇಷ ಕಟ್ಟುತ್ತಾರೆ. ಹಬ್ಬವೆಂದ ಮೇಲೆ ಕುಡಿತ ಕುಣಿತ, ತಿನಿಸುಗಳಿರಬೇಕಲ್ಲವೇ. ಆದರೆ ಈ ಹಬ್ಬಕ್ಕೆ ಸಂಬಂಧಿಸಿದ ಘಟನೆಯೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ. ಅಷ್ಟೇನೂ ಒಳ್ಳೆಯ ಘಟನೆಯಲ್ಲ ಅದು. ಹಬ್ಬ ತಂದಿಟ್ಟ ದುರಂತವು ಅನಾವರಣಗೊಳಿಸಿದ ಸತ್ಯಗಳನ್ನು  ಡಾ. ಕೆ.ಬಿ. ಸೂರ್ಯಕುಮಾರ್ ‘ನೆನಪುಗಳ ಮೆರವಣಿಗೆ’ ಅಂಕಣದಲ್ಲಿ ಪ್ರಸ್ತುತಪಡಿಸಿದ್ದಾರೆ. 

Read More

‘ಕೈ ಮದ್ದು’ ಹಾಕುವವರ ಮಧ್ಯೆ..

ಈ ಮದ್ದು ತೆಗೆಯುವುದು ಎಂದರೆ ಸಂತೆಯಲ್ಲಿ, ಜಾತ್ರೆಯಲ್ಲಿ, ಕಿವಿ, ಕಣ್ಣಿನಿಂದ ಕಲ್ಲು ತೆಗೆದಂತೆ. ತಮ್ಮ ಕೈಚಳಕದಿಂದ ತಾವೇ ಹಾಕಿದ್ದನ್ನು ರಾಶಿಗಟ್ಟಲೆ ತೆಗೆದು ತೋರುವವರಂತೆ ಇದು ಒಂದು ವೃತ್ತಿ. ಆದರೆ ಕೆಲವೊಮ್ಮೆ ಈ ರೀತಿಯ ಪ್ರಕ್ರಿಯೆಯ ನಂತರ ರೋಗ ಗುಣ ಆಗುವುದೂ ಉಂಟು. ಶರೀರಕ್ಕೆ ಬರುವ ಅನೇಕ ರೋಗಗಳು ಮನಸ್ಸಿಗೆ ಸಂಬಂಧಿಸಿದ್ದು. ಅದರಿಂದ ಅನೇಕ ಬಗೆಯ ಚಿಹ್ನೆಗಳು ಕಂಡು ಬರಬಹುದು. ಹೀಗಿರುವಾಗ ತನ್ನಲ್ಲಿದ್ದ “ಮದ್ದು” ಹೊರಬಿತ್ತು ಎಂಬ ನಂಬಿಕೆಯೂ ಅವರನ್ನು ಗುಣಪಡಿಸಲು ಸಾಕು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ