Advertisement

Tag: ರೂಪಶ್ರೀ ಕಲ್ಲಿಗನೂರ್

ಸ್ವಾಭಿಮಾನಕ್ಕೆ ಅಂತಸ್ತಿನ ಗಡಿರೇಖೆಗಳುಂಟೆ!

“ಆಕೆಯದ್ದು ವಿಚಿತ್ರ ಸ್ವಭಾವ. ಅಮ್ಮ ಹೇಳಿರುತ್ತಿದ್ದ ಸಮಯಕ್ಕೆ ಯಾವತ್ತೂ ಬಂದಿದ್ದು ನನಗೆ ನೆನಪಿಲ್ಲ. ತನಗೆ ಬಿಡುವಾದಾಗಲೇ ಆಕೆ ಕೆಲಸಕ್ಕೆ ಬರೋದು. ಹಾಗಂತ ಕಡಿಮೆ ದುಡ್ಡಿಗೆ, ಚೌಕಾಸಿಗೆ ಬರುವ ಹೆಂಗಸೂ ಆಕೆಯಲ್ಲ. ಹಾಗೇನಾದ್ರೂ ಕೇಳಿದ್ರೆ ‘ಆಯ್ತು, ಎಲ್ಡು ಬಟ್ಟೆ ಕಮ್ಮಿ ಒಕ್ಕೊಡ್ತೀನಿ.. ಸುಮ್ಮನಿರ್ತಾರಾ…ʼ ಅಂತ ಸೀದಾ ಕೇಳಿಬಿಡುವವಳು. ಹಾಗಾಗಿ ಅವಳ ಈ ಸ್ವಭಾವ ಸಹಿಸಿಕೊಳ್ಳುವವರು ಅಥವಾ ಅನಿವಾರ್ಯವಿದ್ದವರು ಮಾತ್ರವೇ ಅವಳನ್ನು ಕೆಲಸಕ್ಕೆ ಕರೆಯುತ್ತಿದ್ದರು. …”

Read More

ಆನೆ ಬಂತೊಂದಾನೆ… ಅಲ್ಲ.. ಮೂರಾನೆ!

“ಆ ಸುದ್ದಿ ಓದಿ ಎರಡು ಮೂರು ದಿನವಾಗಿರಲಿಲ್ಲ, ಮನೆ ಕೆಲಸಕ್ಕೆ ಬರುವ ಗಂಗೆ ಒಂದು ಬೆಳಗ್ಗೆ ಅತ್ತೆ ಹತ್ತಿರ ಕೊಡವ ಭಾಷೆಯಲ್ಲಿ ಗಂಭೀರವಾಗಿ ಏನನ್ನೋ ಮಾತನಾಡುತ್ತಿದ್ದರು. “ರಾತ್ರಿ ಎಲ್ಲ ನಿದ್ದೆಯೇ ಇಲ್ಲ ಅಕ್ಕಯ್ಯಾ… ಹೀಗೇ ಇವು ಬರ್ತಾ ಹೋದ್ರೆ, ಎಂತ ಮಾಡೋದು ನಾವು? ಗಾಬರಿಯಾಯ್ತದೆ. ಬೆಳಗ್ಗೆ ಬೆಳಗ್ಗೆ ಬೇಗ ಕೆಲಸಕ್ಕೆ ಬಾ ಅಂತಾರೆ. ಒಂದೊಂದ್‌ ಸಲಾ.ಕೆಲ್ಸಾ ಮುಗ್ಸಿ ಮನೇಗ್‌ ಹೋಗೋದು ಲೇಟಾಯ್ತದೆ. ರಾತ್ರಿ ಒಬ್ಬರೇ ಸಿಕ್ರೆ ಬಿಡ್ತಾವ..? ತುಳ್ದು ಜಜ್ಜಿ ಹಾಕ್ತವೆ…”..”

Read More

ಊರು, ಉರಿಬಿಸಿಲು ಮತ್ತು ಉಪ್ಪಿಟ್ಟು-ಚಹಾ

“ಅಲ್ಲಿನ ಉಪ್ಪಿಟ್ಟಿಗಿರುವ ರುಚಿಯೇ ಬೇರೆ. ಬೆಂಗಳೂರಿನವರ ಹಾಗೆ ಬನ್ಸಿ ರವೆಯಲ್ಲೋ, ಅಥವಾ ನಾಲಿಗೆ ಹೆಚ್ಚು ರುಚಿಯನ್ನು ಬಯಸುವಾಗ, ತುಪ್ಪದಲ್ಲಿ ಹುರಿದ ಚಿರೋಟಿ ರವೆಯಲ್ಲೋ ಮಾಡುವ ಉಪ್ಪಿಟ್ಟಲ್ಲ ಅದು. ದಪ್ಪ ರವೆಯ ಒಂಚೂರು ಹೆಚ್ಚಿಗೆಯೇ ಅನ್ನಿಸುವಷ್ಟು ಎಣ್ಣೆಯ ಒಗ್ಗರಣೆಯಲ್ಲಿ ಯಥೇಚ್ಚವಾಗಿ ಸುರಿದ ಉಳ್ಳಾಗಡ್ಡಿ (ಈರುಳ್ಳಿ), ಕರಿಬೇವು, ಸಾಸಿವೆ, ಜೀರಿಗೆ ಮತ್ತು ತಿಂದವರ ಮೂಗು ಸೋರುವಷ್ಟು ಖಾರದ ಮೆಣಸನ್ನು ಹಾಕಿದ ಉಪ್ಪಿಟ್ಟದು. ಅದರ ರುಚಿ ತಿಂದವರಿಗೇ ಗೊತ್ತು”

Read More

ಹುಣ್ಣಮೀಗೊಂಥರಾ ಹೋಳಗಿ, ಅಮ್ವಾಸಿಗೊಂಥರಾ ಹೋಳಗಿ…

“ಸಣ್ಣಸಣ್ಣ ಸಂಭ್ರಮಕ್ಕೂ, ಹಬ್ಬಕ್ಕೂ ಹುಣ್ಣಮೀಗೂ ಕಡ್ಲಿಬ್ಯಾಳೀ ಹೋಳಿಗಿ, ತೊಗರಿ ಬ್ಯಾಳಿ ಹೋಳಿ, ಆ ಕಡಬು ಈ ಕಡುಬು, ಮತ್‌ ಆ ಥರದ್‌ ಹುಗ್ಗಿ, ಇಂಥಾ ಹುಗ್ಗಿ ಅಂತೆಲ್ಲ ಮಾಡೂದ ಮಾಡೂದು. ಸೀ ಇಷ್ಟಾ ಅಂತ ಒಬ್ಬಾಕೇ ಮಾಡಿ ಕುತ್ಕೊಂಡ್‌ ತಿನ್ನೂವಂಥ ಹೆಣಮಗಳು ಅಲ್ಲ ಬಿಡ್ರಿ. ತಾ ಜಗ್ಗ ಕೆಲಸಾ ಮಾಡಿ ಮಂದೀಗೆ ತಿನ್ನಸೂದಂದ್ರ ಸಂಭ್ರಮ ಅಕೀಗೆ. ಹಂಗಂತನ, ನಮ್‌ ಹಳೇಮನ್ಯಾಗಿದ್ದ ನನ್‌ ಕ್ಲಾಸ್‌ ಮೇಟು ಡುಮ್ಮನ ದಿನೇಶಾ, “ಏ, ನಿಮ್‌ ಮಮ್ಮೀನ ನಮ್‌ ಮಮ್ಮೀನ ಎಕ್ಸ್ಚೇಂಜ್‌ ಮಾಡ್ಕೊಳ್ಳೂಣಣ… ಪ್ಲೀಸ್‌..”

Read More

ಇಳೆಯ ಹಾಗೆ ಮಳೆಗೆ ಕಾಯುತ್ತಾ: ರೂಪಶ್ರೀ ಕಲ್ಲಿಗನೂರ್ ಅಂಕಣ

“ನಾವಿಷ್ಟಪಟ್ಟ ಸ್ಥಳಕ್ಕೆ ಆದಾಗಲೊಮ್ಮೆ ಭೇಟಿಕೊಡುತ್ತೇವೆ ಅನ್ನೋದು ನಿಜ. ಆದ್ರೆ ಆ ಸ್ಥಳ ಮೊದಲ ಸಲ ಹೋದಾಗ ಇದ್ದಷ್ಟೇ ಚಂದವಾಗಿ ಇದ್ಯ? ಕಳೆದ ಸಲ ಹೋದಾಗ ಅದರ ಪರಿಸ್ಥಿತಿ ಏನಾಗಿತ್ತು? ಒಮ್ಮೆ ಎರಡೂ ಪ್ರವಾಸವನ್ನು ನೆನಪಿಗೆ ತಂದುಕೊಳ್ಳಿ. ಮೊದಲಿಗೆ ಹೋದಾಗ ಆಗಿದ್ದ ಸಂತೋಷ ಮತ್ತೆಮತ್ತೆ ಹೋದಾಗಲೂ ಘಟಿಸುತ್ತಿದೆಯೆಂದರೆ ಆ ಸ್ಥಳವಿನ್ನೂ ಮನುಷ್ಯನ ಅಟ್ಟಹಾಸಕ್ಕೆ ಸಿಕ್ಕಿಹಾಕಿಕೊಂಡಿಲ್ಲ ಎಂದರ್ಥ. ಆದ್ರೆ ಹಾಗೆ ಯಾವುದಾದ್ರೂ ಸ್ಥಳ ಕೇವಲ ಹತ್ತು ವರ್ಷ ಹಿಂದಿದ್ದಷ್ಟೇ ಪ್ರಶಾಂತವಾಗಿ, ಸ್ವಚ್ಛವಾಗಿ, ಚಂದದಿಂದ ಉಳಿದುಕೊಂಡಿರೋದು ಸಾಧ್ಯವೇ ಇಲ್ಲ ಅನ್ನಬಹುದು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ