Advertisement

Tag: ಸದಾಶಿವ ಸೊರಟೂರು

ಜನಗಣಮನ..

ಎಲ್ಲರೂ ತಮ್ಮಷ್ಟಕ್ಕೆ ತಾವು ಮರೆತು ಹೋದವರಂತೆ ಗಪ್ ಚುಪ್! ಪ್ರತಿದಿನದ ಸಂತೆಯಾದ್ದರಿಂದ ಅಲ್ಲಿ ಅವರಿಗೆ ಎಲ್ಲವೂ ಯಾಂತ್ರಿಕ. ಆಕಳಿಕೆ ಬಂದರೂ ಕಸುವಾಕಿ ಬಿಗಿ ಹಿಡಿಯುತ್ತಾರೆ. ನೊಣವೊಂದು ಮೊಣಕಾಲು ತುರಿಸಿದರೂ ಹಲ್ಲುಕಚ್ಚಿ ಹಿಡಿಯುತ್ತಾರೆ. ನೆಟ್ಟ ನಿಂತ ಕಾಲು, ಸೆಟೆದು ನಿಂತ ಭಂಗಿ ಊಹೂಂ ಅಲುಗುವಂತಿತ್ರಿಕೆಯೊಂದಿಗೆ ಮಾತು ನಿಲ್ಲಿಸಿದವಳನ್ನು ಗಮನಿಸಿದ ಹಿರೇಮಣಿ ಜೋರಾಗಿ ಗದರುವಂತೆ ಸವಧನ್ ಗದರಿಸುತ್ತಾನೆ. ಕಾಲುಗಳು ಪಕ್ಕಕ್ಕೆ ಬಡಿದುಕೊಳ್ಳುತ್ತವೆ.
ಸದಾಶಿವ ಸೊರಟೂರು ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಮನುಷ್ಯ ಲೋಕದ ಸಂಕಟಗಳು ಕಥೆಗಳಾದ ಪರಿ

ಇಲ್ಲಿನ ಕಥೆಗಳಲ್ಲಿ ಬರುವ ‘ಪರಸು, ತೇಜು ಮತ್ತು ಸಂಜು ಪಾತ್ರಗಳು ಒಂದು ಹೊಸ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. ಇವರೆಲ್ಲಾ ಬದುಕಿನ ಹೊಸ ಸಮಸ್ಯೆಯೊಂದರ ಪ್ರತಿರೂಪದಂತೆ ನಿಲ್ಲುತ್ತಾರೆ. ಮುಗಿಲ ದುಃಖ ಮತ್ತು ಹುಚ್ಚು ಕಥೆಗಳು ತುಂಬಾ ಭಾವನಾತ್ಮಕವಾಗಿವೆ. ನಿಮ್ಮ ಮನೆಯ ಪಕ್ಕದವರ ಕಥೆಯಷ್ಟೆ ಆಪ್ತವಾಗಿ ಬಂದಿದೆ. ಆಧುನಿಕ ಕಾಲದ ಅನಾಥ ಬದುಕನ್ನು ಈ ಎರಡು ಕಥೆಗಳು ತೆರೆದಿಡುತ್ತವೆ.
ಸದಾಶಿವ ಸೊರಟೂರು ಅವರ ಅರ್ಧ ಮಳೆ ಅರ್ಧ ಬಿಸಿಲು ಕಥಾ ಸಂಕಲನದ ಕುರಿತು ರಾಘವೇಂದ್ರ ಈ. ಹೊರಬೈಲು ಬರಹ

Read More

ಮುನ್ನೂರ ಅರವತ್ತೈದು ದಿನಗಳ ಹೊಸ ತಃಖ್ತೆ!

ಹೊಸದಿನಗಳಲ್ಲಿ ನೀವು ಬರೆಯುವ ದಿನಾಂಕದಲ್ಲಿ ಹಳೆ ಇಸ್ವಿ ಇಣುಕುತ್ತದೆ. ಮತ್ತೆ ಮತ್ತೆ ಹಳೆಯದನ್ನೇ ಬರೆದು ಛೇ ಎಂದು ತಿದ್ದುತ್ತೇವೆ. ಹೊಸದಕ್ಕೆ ಹೊಂದುಕೊಳ್ಳುವುದಕ್ಕೆ ಸಮಯಬೇಕು. ಹಳೆಯದನ್ನು ಬಿಡುವುದಕ್ಕೆ ಸಮಯ ಬೇಕು. ಈ ಹಳೆಯದು ಮತ್ತು ಹೊಸದರ ಸಂಬಂಧ ‘ನ್ಯೂ ಇಯರ್’ ದಿನ ಕೇಕ್ ಕತ್ತರಿಸಿ ತೆಗೆದಂತೆ ಅಲ್ಲ. ಹೊಸದರೊಳಗೆ ಹಳೆಯದು ಸೇರಿಕೊಳ್ಳಬೇಕು. ಹಳೆಯದರ ಒಡಲಿನಲ್ಲಿ ಹೊಸತರ ಗುಟ್ಟಿರಬೇಕು.
ಸದಾಶಿವ ಸೊರಟೂರು ಪ್ರಬಂಧ

Read More

ಕಣ್ಣೊರಿಸಿಕೊಂಡ ಪುಟ್ಟ ದೇವರು…

ತರಗತಿಯಿಂದ ತರಗತಿಗೆ ಹಾರಿ ಅದೇ ಶಾಲೆಯಲ್ಲಿ ಕೂತವರಿಗೆ ಒಂದು ರೂಮಿನ ಬದಲಾವಣೆ ಅಷ್ಟೇ.. ತರಗತಿಯಿಂದ ಉಸಿರು ಬಿಗಿ ಹಿಡಿದು ಹಾರಿ ಜಿಗಿದು ಮತ್ತೆಲ್ಲೊ ಮತ್ಯಾವ ಶಾಲೆ, ಕಾಲೇಜಿನ ರೂಮಿನಲ್ಲೊ ಇಲ್ಲಿ ಕಿತ್ತುಕೊಂಡು ಬಂದ ಓದಿನ ಗಿಡವನ್ನು ಅಲ್ಲಿ ನೆಟ್ಟು ಪೋಷಿಸಬೇಕು. ಕಿತ್ತು ನಡೆಯುವ ಹೊತ್ತಲ್ಲಿ ಗಂಟಲಿಗೆ ಬಂದು ಆತು ಕೂತುಕೊಳ್ಳುತ್ತಲ್ಲಾ ಆ ದುಃಖ ಮತ್ತು ಅದನ್ನು ನುಂಗಿ ಸಾಯಿಸಿ ಸಾಯಿಸಿ ನಗಬೇಕಲ್ಲ ಆ ಸಂಕಟ, ಮತ್ತು ಪಿಳಿಪಿಳಿ ಕಣ್ಣುಗಳಿಂದ ಬಂದೇ ಬಿಡುತ್ತಲ್ಲ ಆ ಪವಿತ್ರ ಕಣ್ಣೀರು.. ಓ ಎಂತ ಪಾಪಿಷ್ಟ ಗಳಿಗೆ ಅದು.
ಸದಾಶಿವ ಸೊರಟೂರು ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಕಥಾ ಬೇಸಾಯವನ್ನು ಬದುವಿನಲ್ಲಿ ನಿಂತು ನೋಡಿ

ಉಳುಮೆ ಅನುಭವದ್ದು. ಒಂದು ಸಾಲಿನ ಉಳುಮೆ ಸಾಕೋ, ಎರಡುಸಾಲು ಹೊಡೆಯಬೇಕೋ, ಮೂರುಸಾಲು ಆಗಬೇಕೋ ಎಂಬುದು ಉಳುಮೆಗಾರನ ವಿವೇಚನೆಯದು. ಹಾಗೆಯೇ ಬಲಸುತ್ತು, ಎಡಸುತ್ತು ಉಳುಮೆಯ ವಿಚಾರವೂ ಸಹ. ಬದುವಿನ ಉಬ್ಬಂಚು ತಗ್ಗಬೇಕಾದರೆ ಎಡಸುತ್ತಿನ ಉಳುಮೆಗೆ ನೇಗಿಲು ಹಿಡಿಯಬೇಕು. ಎದೆಯ ಹೊಲದಲ್ಲಿ ಹುಟ್ಟುವ ಕಥೆ ಬೆಳೆದು ಬೆಳೆಯಾಗವುದು ಇಂತಹ ಹದಗಳಲ್ಲಿಯೇ. ಹೊಲದ ವಿಸ್ತಾರವಿದ್ದಂತೆ ಕಥೆಯ ವಿಸ್ತಾರವೂ ಇರುತ್ತದೆ. ವಿಸ್ತಾರ ದೊಡ್ಡದಿದ್ದರೂ ಉಳುಮೆಯಾದಷ್ಟು ನೆಲದಲ್ಲಷ್ಟೇ ಬೆಳೆ. ಸದಾಶಿವ ಸೊರಟೂರು ಕಥಾಸಂಕಲನ “ಅರ್ಧ ಬಿಸಿಲು ಅರ್ಧ ಮಳೆ”ಗೆ ಸ. ರಘುನಾಥ ಬರೆದ ಮುನ್ನುಡಿ

Read More
  • 1
  • 2

ಜನಮತ

ಸಾಹಿತ್ಯ ಪ್ರಕಾರಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ...

Read More

ಬರಹ ಭಂಡಾರ