ಕದ್ದವರು, ಕಳಕೊಂಡವರು, ಕ್ಷಮಿಸಿ ಎಂದವರು

ವಸಾಹತುಶಾಹಿ-ಸಂಬಂಧಿತ ಅನ್ಯಾಯಗಳು ಮತ್ತು ತಾರತಮ್ಯಗಳು ಆಸ್ಟ್ರೇಲಿಯದಲ್ಲಿ ನಡೆಯುತ್ತಲೇ ಬಂದಿದೆ. ಆಸ್ಟ್ರೇಲಿಯಾದ ಅಬೊರಿಜಿನಲ್ ಜನರ ಕುಟುಂಬಗಳಿಂದ ಬಲವಂತವಾಗಿ ಅವರ ಮಕ್ಕಳನ್ನು ಬೇರ್ಪಡಿಸಿ ಬಿಳಿಯರ ಕುಟುಂಬಗಳಿಗೆ ಕೊಟ್ಟು ಬಿಳಿಯರ ಸಂಸ್ಕೃತಿ, ಶಿಕ್ಷಣ, ಕ್ರೈಸ್ತಧರ್ಮಗಳಿಗೆ ಅನುಗುಣವಾಗಿ ಮಕ್ಕಳು ಬೆಳೆಯುವಂತಾಗಿದ್ದು ಎರಡು ನೂರು ವರ್ಷಗಳಿಂದ ನಡೆದ ವಿಷಯ ಕಣ್ಣಿಗೆ ರಾಚುವಂತಿದೆ. ಅಂತಹ ‘ಸ್ಟೋಲನ್ ಜನರೇಶನ್’ ನ ದನಿಯಾಗಿದ್ದ ಅಂಕಲ್ ಆರ್ಚಿ ರೋಚ್ ಕಳೆದ ವಾರಾಂತ್ಯದಲ್ಲಿ ತೀರಿಕೊಂಡರು.  ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

Read More