ದಾರಿಯೂ ಬೆಳಕೂ ಆಗುವ ಕಾವ್ಯಧ್ಯಾನ

ಹೊರಗಿನ ಮಾತುಗಳಿಗಿಂತ ಒಳಗಿನ ಅರಳುವಿಕೆ ಕವಿಗೆ ಮಹತ್ವದದ್ದೆನಿಸಿದೆ. ಆತ್ಮದ ಅರಳುವಿಕೆಯಲ್ಲಿ ಹಿಗ್ಗುತ್ತಿರುವ ವಿಕಾಸ ಭಾವವೊಂದು ಹೊರಲೋಕದ ಸುಳ್ಳುಸುಳ್ಳೇ ಚಹರೆಗಳನ್ನು ನೋಡಿ ವಿಹ್ವಲಗೊಳ್ಳುತ್ತದೆ. ಇಂದು ಜೊಳ್ಳುಗಳೇ ವಿಜೃಂಭಿಸುತ್ತಿರುವ ಕಾಲ. ವಿಚಾರ, ದರ್ಶನ, ಭಾವ ಬದುಕು ಎಲ್ಲವೂ ಜೊಳ್ಳು ಮಾದರಿಗಳ ಹಿಂದೆಬಿದ್ದಿದೆ. ಸ್ವರೂಪ ಮರೆಯಾಗಿ ನಾಮಫಲಕಗಳೇ ವಿಜೃಂಭಿಸುವುದು ನಮ್ಮ ಬದುಕಿನ ಅಂತಃಸತ್ವವೇ ತೀರಿಹೋಗಿರುವ ವ್ಯಂಗ್ಯವನ್ನು ಸೂಚಿಸುತ್ತದೆ. ಇಂಥ ಚಿತ್ರಗಳ ಮೂಲಕ ತಮ್ಮ ಹುಡುಕಾಟದ ನೆಲೆ ಏನೆಂಬುದನ್ನು ಅವರ ಕಾವ್ಯವು ನಮಗೆ ಕಾಣಿಸುತ್ತಿದೆ.
ಅಶೋಕ ಹೊಸಮನಿ ಕವನ ಸಂಕಲನ “ಹರವಿದಷ್ಟು ರೆಕ್ಕೆಗಳು” ಕೃತಿಗೆ ಡಾ. ಗೀತಾ ವಸಂತ ಬರೆದ ಮುನ್ನುಡಿ

Read More