Advertisement

Tag: ಎಸ್. ದಿವಾಕರ್

ಎಸ್.‌ ದಿವಾಕರ್‌ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

ಇಪ್ಪತ್ತನೆಯ ಶತಮಾನದಿಂದ ಹಿಂಸೆಯೇ ಸ್ಥಾಯಿಯಾಗಿ ಬದುಕೇ ಅಸಂಗತ, ಅಸಾಧ್ಯ ಸತ್ಯವಾಗಿ ಬಿಟ್ಟಿದೆ. ಇಂತಹದರಲ್ಲಿ ಕಾವ್ಯ ಏನು ಮಾಡಬೇಕು? ಉತ್ತರ ಕಾವ್ಯಕ್ಕೆ ಗೊತ್ತಿಲ್ಲ. ಕವಿ ಪ್ರಯತ್ನ, ಪ್ರಯೋಗ ಮಾಡುತ್ತಲೇ ಇರಬೇಕು. ನೋವಿನ, ಹಿಂಸೆಯ ಕ್ಷೋಭೆ, ಅಸ್ಥಿರತೆ ಅನಿಶ್ಚಿತತೆಗೆ ವಿರುದ್ಧವಾದ ಭಾಷೆಯ ಪಾರದರ್ಶಕತೆ, ಧ್ವನಿಗಳ ಲಯಗಾರಿಕೆ ಮತ್ತು ಬಿಂಬಗಳ ಖಚಿತತೆಯ ಮೂಲಕ ಹೇಳುವುದನ್ನು ಹೇಳಬೇಕು. ಅಸಹಜವಾದ ಅನುಭವವನ್ನು ಅಪಾರ ಸಹಜತೆಯ ಕಾವ್ಯಭಾಷೆಯನ್ನು ಶೋಧಿಸಿಕೊಂಡು ಬರೆಯಬೇಕು. ಇದನ್ನು ದಿವಾಕರರ ಕಾವ್ಯವು ಸಾಧಿಸಿದೆ. ಅವರ ಈ ಸಂಕಲನದ ಒಂದು ಕವಿತೆಯು ಪ್ರಾಸದ ಬಗ್ಗೆ ಇದೆ.
ಎಸ್.‌ ದಿವಾಕರ್‌ ಬರೆದ ವಿಧಾನಸಭೆಯಲ್ಲೊಂದು ಹಕ್ಕಿ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

Read More

ಎಸ್. ದಿವಾಕರ್ ಅವರ ಹೊಸ ಪುಸ್ತಕದಿಂದ ಒಂದು ಪ್ರಬಂಧ

“ಘನಗಂಭೀರ ವಿಮರ್ಶೆಯಂತೆ ಭಾಸವಾಗುವ ಈ ಒಂದು ವಾಕ್ಯವನ್ನು ನೋಡಿ: “ಶ್ರೀಯುತರು ವಿಚಾರ ಸಾಹಿತ್ಯ ರಚನೆಯಲ್ಲಿ ಸಿದ್ಧಹಸ್ತರಾಗಿದ್ದರೂ ಕೂಡ, ಪರಿಕಲ್ಪನೆಗಳನ್ನು ವಿವರಿಸುವಾಗ ಅವರು ಭಾಷೆಯನ್ನು ಉದ್ದೇಶಕ್ಕೆ ತಕ್ಕಂತೆ ದುಡಿಸಿಕೊಂಡರೂ ಕೂಡ, ಅವರ ಕೃತಿಗಳು ಕೆಲವು ಕಡೆ ನಿಜಕ್ಕೂ ಕಬ್ಬಿಣದ ಕಡಲೆ ಎನ್ನಬೇಕು.” ಇಲ್ಲಿನ ‘ಸಿದ್ಧಹಸ್ತ’, ‘ದುಡಿಸಿಕೊಂಡು’, ‘ಕಬ್ಬಿಣದ ಕಡಲೆ’ ಮುಂತಾದವನ್ನು ಎಷ್ಟು ಬಾರಿ ಓದಿಕೊಂಡರೂ ಯಾವುದೇ ರಸ ಹುಟ್ಟಲಾರದು.”

Read More

ಎಸ್. ದಿವಾಕರ್ ಕವನ ಸಂಕಲನದ ಕುರಿತು ಎಚ್. ಆರ್. ರಮೇಶ್ ಬರಹ

“ಕ್ಲೀಷೆಯಲ್ಲದ, ಚರ್ವಿತಚರ್ವಣವಲ್ಲದ ಇಲ್ಲಿನ ಕವಿತೆಗಳ ವಿಸ್ತಾರ, ಭಿತ್ತಿ, ಆಧುನಿಕೋತ್ತರ ಕನ್ನಡ ಕಾವ್ಯ ಮೀಮಾಂಸೆಗೆ ಒಂದು ಕೊಡುಗೆ. ಅದರ ದಾರಿಯನ್ನು ಇನ್ನಷ್ಟು ಮುಂದಕ್ಕೆ ಸ್ಪಷ್ಟಮಾಡುವಲ್ಲಿ ಪ್ರೀತಿಯ ಪ್ರಯತ್ನ. ಅದು ಸಫಲವೂ ಕೂಡ ಇಲ್ಲಿ. ಓದುತ್ತ ಹೋದಲ್ಲಿ ಕವಿತೆಗಳ ಸಾಲುಗಳ, ಮನಗಾಣಬಹುದು. ಹೊಸ ಚೈತನ್ಯದಿಂದ ತುಂಬಿ ತುಳುಕುವವು. ಜೊತೆಗೆ ವ್ಯಕ್ತಗೊಂಡಿರುವ ವಸ್ತು ಕಡುವಾಸ್ತವದ ನಿಗಿನಿಗಿ ಕೆಂಡದಂತಿವೆ.”

Read More

ಎಂ.ಎಸ್.ಕೆ.ಪ್ರಭು ಬರೆದಿಟ್ಟು ತೆರಳಿದ ಕಥಾ ಒಡಪುಗಳು

”ಪ್ರಭು ಅವರ ಕತೆಗಳಲ್ಲಿ ಮನುಷ್ಯ ಜಗತ್ತಿನೊಡನೆ ತಾನು ಇಟ್ಟುಕೊಳ್ಳುವ ಸಂಬಂಧದಲ್ಲೇ ತನ್ನತನವನ್ನು ಕಂಡುಕೊಳ್ಳುತ್ತಾನೆಂಬ ಕಾಣ್ಕೆಯಿದೆ. ಸಂಬಂಧವೆನ್ನುವುದು ವೈಯಕ್ತಿಕವಾಗಿರುವಂತೆ ಸಾಮಾಜಿಕವೂ ಆಗಿರುವುದುಂಟು. ಹಾಗಾಗಿ ಅದನ್ನು ವಿವಿಧ ಮಗ್ಗುಲುಗಳಿಂದ ಪರಿಶೀಲಿಸಬೇಕಾಗುತ್ತದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ