Advertisement

Tag: ಕಮಲಾಕರ ಕಡವೆ

“ಭವಿಷ್ಯದ ಕರಾಳತೆಯನ್ನು ಮುಂಗಂಡ ಎರಡು ಕಾದಂಬರಿಗಳು”

ಜಾಗತಿಕ ಪ್ರಭುತ್ವದಡಿಯಲ್ಲಿರುವ ಹಕ್ಸಲೀಯ ಕಾದಂಬರಿಯಲ್ಲಿ ಗೋಚರಿಸುವ ಸಮಾಜದಲ್ಲಿ ಸಂಬಂಧಗಳಿರುವುದಿಲ್ಲ – ಅಲ್ಲಿರುವ ಸೂತ್ರವೆಂದರೆ ‘ಎಲ್ಲರೂ ಎಲ್ಲರ ಸಂಬಂಧಿ’. ಈ ಜಗತ್ತಿನಲ್ಲಿ ಮಕ್ಕಳು ತಾಯಿಯ ಗರ್ಭದಲ್ಲಲ್ಲ, ವಿಶಾಲ ಕೋಳಿಗೂಡುಗಳಂತಹ ‘ಕಾವುಮನೆ’ಗಳಲ್ಲಿ ಜನ್ಮ ಪಡೆಯುತ್ತಾರೆ. ಟ್ಯೂಬು, ಇನ್ಕ್ಯುಬೇಟರುಗಳಲ್ಲಿರುವಾಗಲೇ ಭ್ರೂಣಗಳನ್ನು ವರ್ಗಗಳಾಗಿ ವಿಂಗಡಿಸಿ, ಆಯಾ ವರ್ಗಗಳಿಗೆ ಹೊಂದುವಂತೆ ಮಾಡಲು ಅವುಗಳಿಗೆ ಹಾರ್ಮೋನುಗಳನ್ನು, ಕೆಮಿಕಲ್ಲುಗಳನ್ನು ನೀಡಲಾಗುತ್ತದೆ. ಕಮಲಾಕರ ಕಡವೆ ಅಂಕಣದಲ್ಲಿ ಬ್ರೇವ್ ನ್ಯೂ ವರ್ಲ್ಡ್ ಕಾದಂಬರಿಯ ವಿಶ್ಲೇಷಣೆ. 

Read More

ಲಾಂಡೇಯ್: ಅಫ್ಘನ್ ಹೆಣ್ಣುಮಕ್ಕಳ ಅಕ್ಷರಸಮರ

ಲಾಂಡೇಯ್ ಸುತ್ತಲಿನ ಲೋಕದ ಕುರಿತಾದ ಗಹನ ವಿಚಾರಗಳನ್ನು, ಕಟುವಾಸ್ತವಗಳನ್ನು ಹಿಡಿದಿಡುವ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮ. ಹಾಗಾಗಿ, ಲಾಂಡೇಯ್ ರಚನೆಗಳು ನೋವಿನಿಂದ ಕೂಡಿರಬಹುದು ಅಥವಾ ಕಠೋರ ಟೀಕೆಯಿಂದ; ಹಾಸ್ಯದಿಂದ ತುಂಬಿರಬಹುದು ಅಥವಾ ವ್ಯಂಗ್ಯದಿಂದ. ಹಾಗೆಂದು, ಲಾಂಡೇಯ್ ಕೇವಲ ಬಂಡಾಯ ಕಾವ್ಯವೆಂದೇನೂ ಅಲ್ಲ; ಶೋಕ, ಪ್ರೇಮ, ದುರಂತಗಳೂ ಅದಕ್ಕೆ ಗ್ರಾಸವಾಗುವ ವಿಷಯವಾಗಬಹುದು. ಎಲ್ಲ ಕಾವ್ಯವೂ ಮೂಲದಲ್ಲಿ ಲಾಂಡೇಯ್ ತರವೇ ಅಲ್ಲವೇ – ಕರೆಯುವುದು…”

Read More

ಅರ್ಥಲೋಕದ ಬೆರಗುಗಳ ಅನಾವರಣ

ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಯ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ.
ಉಂಬರ್ಟೋ ಇಕೋ ಬರೆದ “ದ ನೇಮ್ ಆಫ್ ದ ರೋಸ್”ಕಾದಂಬರಿಯ ಕುರಿತು ಬರೆದಿದ್ದಾರೆ ಕಮಲಾಕರ ಕಡವೆ

Read More

ಅಸಾಧ್ಯತೆಗಳ ಕಲ್ಪನೆಯಲ್ಲಿ ಕತೆಗಾರ: ಇಟಾಲೋ ಕ್ಯಾಲ್ವಿನೋ

ಪುಸ್ತಕದ ಮೊದಲ ಮತ್ತು ಅಂತಿಮ ಭಾಗದಲ್ಲಿ ಹತ್ತು ಕಾಲ್ಪನಿಕ ನಗರಗಳ ವರ್ಣನೆಗಳಿದ್ದರೆ, ಮಧ್ಯದ ಭಾಗಗಳಲ್ಲಿ ಐದೈದು ನಗರಗಳ ವರ್ಣನೆಗಳಿವೆ. ಪೋಲೋ ವರ್ಣಿಸುವ 55 ನಗರಗಳನ್ನು, ನಗರ ಮತ್ತು ಸ್ಮೃತಿ, ನಗರ ಮತ್ತು ಬಯಕೆ, ನಗರ ಮತ್ತು ಸಂಜ್ಞೆ, ಸಪೂರ ನಗರ, ವ್ಯಾಪಾರದ ನಗರ, ಕಂಗಳು ಮತ್ತು ನಗರ, ಇತ್ಯಾದಿ ಹನ್ನೊಂದು ವಿಷಯ-ಕೇಂದ್ರಿತ ಗುಂಪುಗಳಾಗಿ ವರ್ಣಿಸಲಾಗಿದೆ. ಅಲ್ಲದೇ ಪ್ರತಿ ಅಧ್ಯಾಯದಲ್ಲಿಯೂ ಪೋಲೋ ಮತ್ತು ಕುಬ್ಲಾ ಖಾನರ ನಡುವಿನ..”

Read More

ಮಹಾಸಾಂಕ್ರಾಮಿಕದ ಕಾದಂಬರಿಗಳು ನಮಗೆ ಕಲಿಸುವ ಪಾಠ

ವಿಶ್ವದ ಶ್ರೇಷ್ಠ ಸಮಕಾಲೀನ ಬರಹಗಾರರಲ್ಲಿ ಒಬ್ಬರಾದ ಓರ್ಹಾನ್ ಪಾಮುಖ್ ಟರ್ಕಿಯ ಬಹುಮಾನ್ಯ ಕಾದಂಬರಿಕಾರ. 2006ರಲ್ಲಿ ನೋಬೆಲ್ ಪ್ರಶಸ್ತಿಗೆ ಪಾತ್ರರಾದ ಪಾಮುಖ್ ಅವರ ಕೃತಿಗಳು ವಿಶ್ವದ ಅನೇಕಾನೇಕ ಭಾಷೆಗಳಲ್ಲಿ ಅನುವಾದಗೊಂಡಿವೆ. ಪಾಮುಖ್ 2020ರ ಏಪ್ರಿಲ್ನಲ್ಲಿ ಕರೋನಾ ವೈರಸ್ ಸಾಂಕ್ರಾಮಿಕದ ಕುರಿತಾಗಿ ಬರೆದ ಬರಹ ಇದು. ಕಮಲಾಕರ ಕಡವೆ ಅವರು ಆ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ