ಓಬಿರಾಯನಕಾಲದ ಕಥಾಸರಣಿಯಲ್ಲಿ ಕುಕ್ಕೇಟಿ ಮಾಧವ ಗೌಡ ಬರೆದ ಕಥೆ

“ಅಜ್ಜ ಅಡ್ಕಾರಿಗೆ ಹೋದದ್ದು ಯಾಕೆ ಎಂದು ಅಮೇಲೆ ತಿಳಿಯಿತು. ಅವರು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದರು. ಮರುದಿನ ಅಮ್ಮ ಅಜ್ಜನ ಸ್ವಚ್ಛ ಬಟ್ಟೆಗಳನ್ನು ಮಡಚಿ ತಂದು ಅಜ್ಜನಿಗೆ ಕೊಟ್ಟರು. ನಾನು ಕಿಸ್ತು ಕಟ್ಟಲು ಹೋಗುವ ನಮ್ಮ ಅಜ್ಜನ ಸಡಗರವನ್ನು ಗಮನಿಸುತ್ತಿದ್ದೆ. ಯಾವುದೋ ರಾಜಕಾರ್ಯಕ್ಕೆ ಹೋಗುವವರಂತೆ ಅಜ್ಜ ಸಂಭ್ರಮಿಸುತ್ತಿದ್ದರು. ಒಗೆದು ಶುಚಿಯಾಗಿದ್ದ ಮೊಣಕಾಲಿನ ಕೆಳಗೆ ಬರುವಂಥ ಮುಂಡು ಉಟ್ಟು”

Read More