Advertisement

Tag: ಕೃಷಿ

ಕೃಷಿಯೆಂದರೆ ಸುಲಿದ ಬಾಳೆಯೇ?: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಅವಳು ತನ್ನ ಈ ಪರಿಸ್ಥಿತಿಗೆ ಸರಕಾರದ ಯಾವುದೋ ಒಂದು ನೀತಿಯೇ ಕಾರಣ ಅಂತ ಹಳಿಯುತ್ತಿದ್ದಳು. ಪೂರ್ತಿ ಏಳು ಎಕರೆಯಲ್ಲಿ ಶುಂಠಿ ಹಾಕು ಅಂತ ಸರಕಾರ ಅವಳಿಗೆ ಹೇಳಿತ್ತೆ? ಅದೇ ಒಂದು ವೇಳೆ ಒಳ್ಳೆ ಬೆಲೆ ಬಂದು ಒಂದಿಷ್ಟು ಲಕ್ಷ ಲಾಭವಾಗಿದ್ದರೆ ಸರಕಾರದ ಕಾರಣದಿಂದ ತನಗೆ ಲಾಭ ಆಯ್ತು ಅಂತ ಅನ್ನುತ್ತಿದ್ದಳೆ? ಊಹೂಂ.. ಆಗ ಮಾತ್ರ ನಾನು ಕಷ್ಟ ಪಟ್ಟಿದ್ದಕ್ಕೆ ಹೀಗೆ ಒಳ್ಳೆಯದಾಯ್ತು ಅನ್ನುತ್ತಿದ್ದಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

“ಯಾಕ್‌ ಫೋನ್‌ ತಗೀಲಿಲ್ಲ..” ಅಂತ ಕೇಳೋದಿಲ್ಲ!: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಈ ಬೋರಿನ ಗಾಡಿಯ ರಹಸ್ಯ ಇನ್ನೂ ಬಗೆಹರಿಯಲಿಲ್ಲ. ಪಕ್ಕದ ಹೊಲದ ಗೌಡರಿಗೆ ಫೋನ್ ಮಾಡಿದಾಗ ಅದೊಂದು ಗಾಡಿ ಬೇರೆ ಎಲ್ಲೋ ಬೋರ್ ಹೊಡೆಯಲು ಬಂದಿದ್ದು ಸ್ವಲ್ಪ ಹೊತ್ತು ನಮ್ಮ ಹೊಲದಲ್ಲಿ ನಿಂತಿತ್ತು ಅಂತ ಹೇಳಿದರು. ಇವರನ್ನೇ ಫೋನ್‌ ಮಾಡಿ ಕೇಳಿದ್ದರೆ ಈ ಗುಡ್ಡಪ್ಪನ ಮಾತು ಕೇಳಿ ಇಷ್ಟು ಅಡ್ಡಾಟ ಮಾಡೋದು ತಪ್ಪುತಿತ್ತು ಅಂತ ನನಗೆ ನಾನೇ ಹಳಿದುಕೊಂಡೆ. ಆದರೂ ಅವನ ದೆಸೆಯಿಂದ ನನ್ನ ಹೊಲಕ್ಕಾದರೂ ಹೊಕ್ಕು ಬಂದೆನಲ್ಲ ಎಂಬ ಸಮಾಧಾನವೂ ಆಯ್ತು!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಟ್ರ್ಯಾಕ್ಟರ್‌ ನಾವs ಹೊಡಿಯೋದು!: ಗುರುಪ್ರಸಾದ ಕುರ್ತಕೋಟಿ ಅಂಕಣ

ಅಲ್ಲಿನ ಬಹುತೇಕರು ಫೋನ್ ಮಾಡಿದಾಗ ಕೇಳುವ ಮೊದಲ ಪ್ರಶ್ನೆ ಇದು! ನಾನು ಎಲ್ಲಿರುವೆ ಅಂತ ತಿಳಿದುಕೊಂಡು ಹೊಲದಲ್ಲಿ ಏನಾದರೂ ಮಾಡಲು ಹೊರಟಿರಬಹುದೆ? ಎಂಬಂತಹ ಸಂಶಯ ಸೃಷ್ಟಿ ಮಾಡುವನಂತಹ ಪ್ರಶ್ನೆ ಅದು. ಹೀಗಾಗಿ ನಿರಾತಂಕವಾಗಿ ಎಲ್ಲಿದ್ದೀನಿ ಎಂಬ ವಿಷಯ ಹೇಳಿದೆ. ಅದಕ್ಕೆ “ನಿಮ್ಮ ಹೊಲದಾಗ ಯಾರೋ ಬೋರ್ ಹೊಡಿಯಾಕ್ ಹತ್ಯಾರ ನೋಡ್ರಿ..” ಅಂದ. ನನ್ನ ಕೇಳದೆ ನನ್ನ ಹೊಲದಲ್ಲಿ ಬೋರು ಹೊಡೀತಾರೆಯೇ? ಹೊಡಿಲಿ ಬಿಡ್ರಿ ಅಂದೆನಾದರೂ, ಕೂಡಲೇ ಹೊಲದ ಕಡೆಗೆ ಲಗುಬಗೆಯಿಂದ ಹೊರಟೆ..
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ

Read More

ಅಯ್ಯೋ ಸರ್ ಇಲ್ಲಿ ಹಲ್ಲಿಗಳು ಇವೆ!

ನನ್ನ ಬೆಂಗಳೂರಿನ ತರಬೇತಿಗಳು ಮುಗಿದ ತಕ್ಷಣ ನಾನು ರಾಮ್ ಇಬ್ಬರೂ ಕಾರಿನಲ್ಲಿ ಹಳ್ಳಿಗೆ ಹೊರಟೆವು. ಅದೇ ವಾರಾಂತ್ಯದಲ್ಲಿ ವಿನೋದ ಅವರಿಗೂ ಕೂಡ ಬರಲು ಹೇಳಿದ್ದೆ. ಅವರೂ ಹಳ್ಳಿಯಲ್ಲಿ ನಾವು ಸಧ್ಯ ವಾಸಕ್ಕಿದ್ದ ಹೊಸ ಮನೆಯನ್ನು ಇನ್ನೂ ನೋಡಿರಲಿಲ್ಲ. ಅದೂ ಅಲ್ಲದೆ ರಾಮನನ್ನು ಅವರಿಗೆ ಪರಿಚಯಿಸಿದಂತಾಗುತ್ತದೆ ಎಂಬುದು ನನ್ನ ಯೋಚನೆ. ಬೆಂಗಳೂರಿನಿಂದ ನಮ್ಮ ಹಳ್ಳಿಗೆ ಹೋಗಲು ಹೆಚ್ಚು ಕಡಿಮೆ ಏಳು ಗಂಟೆಗಳು ಬೇಕು. ರಾಮನಿಗೆ ಅದು ಮೊದಲ ಆಘಾತ!
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

Read More

ಹೃದಯ ವೈಶಾಲ್ಯತೆಗೆ ಬೇಲಿ ಹಾಕಿಕೊಳ್ಳುವ ಅನಿವಾರ್ಯ!

ನಾವು ಮಾನವೀಯತೆಯಿಂದ ಯೋಚಿಸುವುದನ್ನು ಹಳ್ಳಿಯಲ್ಲಿ ಬೇರೆಯ ತರಹವೆ ನೋಡುತ್ತಾರೆ! ನಾವು ಕೇಳದೆ ಅವರಿಗೆ ಹೀಗೆ ಬೋನಸ್‌ಗಳನ್ನು ಕೊಟ್ಟರೆ ನಾವು ಅವರಿಗೆ ತುಂಬಾ ಹಣವಂತರ ಹಾಗೆ ಕಾಣುತ್ತೇವೆ. ಅದು ನಮಗೆ ಆಮೇಲಾಮೇಲೆ ನಿಧಾನವಾಗಿ ಅರ್ಥವಾಗತೊಡಗಿತು! ಅಲ್ಲಿ ಹೇಗಿರಬೇಕು ಅಂದರೆ, ತುಂಬಾ ಚೌಕಾಶಿ ಮಾಡಬೇಕು, ಒಂದು ರೂಪಾಯಿನೂ ಕಾಡಿಸಿ ಕಾಡಿಸಿ ಕೊಡಬೇಕು, ಸಾಲವನ್ನಂತೂ ಮರಳಿ ಕೂಡಲೇ ಕೂಡದು ಇತ್ಯಾದಿಗಳು… ನನಗೆ ಇದನ್ನೆಲ್ಲ ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ.
ಗುರುಪ್ರಸಾದ್‌ ಕುರ್ತಕೋಟಿ ಅಂಕಣ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ