Advertisement

Tag: ಗುರುಪ್ರಸಾದ್ ಕಂಟಲಗೆರೆ

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ ಬಚಾವಾಗಿ ಪ್ರೈಮರಿ ಕೊಂಡವನ್ನು ಹಾದು, ಮಿಡ್ಲಿಸ್ಕೂಲ್ ಎಂಬ ಉನ್ನತ ಶಿಕ್ಷಣಕ್ಕೆ ತಿಪಟೂರಿಗೆ ಹೋದದ್ದು, ಊರಿನ ಪುರಾತನ ಬೇರುಗಳನ್ನು ಕಿತ್ತುಕೊಂಡು ಹಾಸ್ಟೆಲ್‌ನಲ್ಲಿ ನೆಲೆಗೊಂಡದ್ದು, ಚಿಕ್ಕಪ್ಪನ ಮತ್ತು ಕುಂದೂರು ತಿಮ್ಮಯ್ಯನವರ ಒತ್ತಾಸೆ ನಿನಗೆ ಸಿಕ್ಕಿದ್ದು ನಿನ್ನಂತ ದಲಿತ ಹುಡುಗರ ಜೀವನದಲ್ಲಿಯ ಬಹುದೊಡ್ಡ ತಿರುವು ಎಂದು ನನಗೆ ಅನಿಸುತ್ತದೆ.
ಗುರುಪ್ರಸಾದ್‌ ಕಂಟಲಗೆರೆ ಅವರ “ಟ್ರಂಕು ತಟ್ಟೆ” ಹಾಸ್ಟೆಲ್‌ ಅನುಭವ ಕಥನದ ಕುರಿತು ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಬರಹ

Read More

ಉಪೇಂದ್ರನ ಹಾವಳಿ ಮತ್ತು ರಾಮಾಂಜಿ ಲವ್

ಸರ್ಕಾರದಿಂದ ನಡೆಯುವ ಯಾವುದೇ ಪರೀಕ್ಷೆಗಳನ್ನು ನಡೆಸಲು ನಮ್ಮ ಜೂನಿಯರ್ ಕಾಲೇಜಿನ ಕೊಠಡಿಗಳನ್ನ ಕಡ್ಡಾಯವಾಗಿ ತೆಗೆದುಕೊಳ್ಳುತ್ತಿದ್ದುದರಿಂದ ಆಗೆಲ್ಲ ನಮಗೆ ದೀರ್ಘ ರಜೆ ಸಿಗುತ್ತಿತ್ತು. ಚೆನ್ನಾಗಿ ಓದಬೇಕೆಂಬ ಕನಸು ಹೊತ್ತು ಬಂದಿದ್ದ ನಮಗೆ ಇಲ್ಲಿನ ವಿಪರೀತ ರಜೆಗಳಿಂದಾಗಿ ನಿರಾಸೆ ಉಂಟಾಗಿತ್ತು. ನಮಗೆ ಇತ್ತ ಕೆಲ ತಿಂಗಳು ಕಳೆದರೂ ಕಾಲೇಜು ಪ್ರಾರಂಭ ಆಗದೆ ಊರಲ್ಲೆ ಉಳಿದಾಗ, ಪಕ್ಕದ ಮನೆ ಕೇಸುದೊಡಪ್ಪ ‘ಎಲ್ಲೊ ಪೇಲಾಗವೆ ಅದ್ಕೆ ಹೋಗಿಲ್ಲ’ ಎಂದು ಅನುಮಾನ ಪಟ್ಟುಕೊಳ್ಳುತ್ತಿತ್ತು. ಗುರುಪ್ರಸಾದ್‌ ಕಂಟಲಗೆರೆ ಬರಹ.

Read More

ಹಾಸ್ಟೆಲ್ ರೂಂನಲ್ಲಿ ಓದುವ ‘ಸೆಟಪ್’ ನಿರ್ಮಾಣ

ರಂಗಸ್ವಾಮಣ್ಣ ಮಾವನ ಬಗೆಗೆ ಕೊಟ್ಟಿದ್ದ ಬಿಲ್ಡಪ್‌ನಿಂದ ರೂಮಿನವರಾದ ನಾವಷ್ಟೆ ಅಲ್ಲದೆ ಅಕ್ಕಪಕ್ಕದವರೂ ಸೈಲೆಂಟಾಗಿದ್ದರು. ಗಂಟೆ ಗಟ್ಟಲೆ ಇದ್ದ ತಿಮ್ಮರಾಯಪ್ಪನವರು ಬಹಳ ಹೊತ್ತು ಭಾಮೈದುನನನ್ನು ಮಾತ್ರವಲ್ಲದೆ ನಮ್ಮನ್ನೂ ವಿಚಾರಿಸಿಕೊಂಡರು. ಕುಂದೂರು ತಿಮ್ಮಯ್ಯನವರ ಮಗ ಮತ್ತು ಭಾಮೈದ ಎಂದು ತಿಳಿದ ನಂತರ ನಮ್ಮನ್ನೂ ಕಾಳಜಿಯಿಂದ ಮಾತಾಡಿಸಿದರು. ಭಾಮೈದನ ವಿದ್ಯಾಭ್ಯಾಸದ ಸ್ಥಿತಿಗತಿಯನ್ನ ಒಂದಷ್ಟು ಒಳಹೊಕ್ಕೆ ಕೆದಕಿದ ನಂತರವೂ ಜೋಬಿಗೆ ಕೈ ಹಾಕಿ ಏನನ್ನೂ ತೆಗೆದಿದ್ದು ಕಾಣಲಿಲ್ಲ. ಹೊರಡಲು ಸಿದ್ಧರಾದ ತಿಮ್ಮರಾಯಪ್ಪನವರನ್ನ…

Read More

ದಪ್ಪ ತುಂಡಿನ ಬಾಡಿನೆಸರು

ನಾವು ನಮ್ಮ ಬಳಿ ಕಳವಾಗುತ್ತಿರುವ ಹಣ, ವಸ್ತುಗಳ ವಿಷಯವನ್ನ ಕುತೂಹಲದಿಂದಲೂ ಬೇಸರದಿಂದಲೂ ಹೇಳಿಕೊಳ್ಳುತ್ತಿದ್ದೆವು.  ಅದನ್ನು ಕೇಳಿಸಿಕೊಳ್ಳುವ ಆತ ನಮ್ಮಂತೆಯೇ ಆಶ್ಚರ್ಯ ಚಕಿತನಾಗುತ್ತಿದ್ದ. ‘ಈ ದಿನ ಆಜಾಗ ಬೇಡ ಈ ಜಾಗದಲ್ಲಿ ಇಟ್ಟೋಗಿ’ ಎಂದು ಸಲಹೆ ಕೊಟ್ಟು ಜೋಪಾನವಾಗಿ ಕಾಲೇಜಿಗೆ ಕಳುಹಿಸುತ್ತಿದ್ದ. ಬಂದು ನೋಡಿದರೆ ಮತ್ತೆ ಕಳವು!ಒಂದು ದಿನ ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ ಹಾಸ್ಟೆಲ್ಗೆ ಬಂದೆವು. – ಗುರುಪ್ರಸಾದ್ ಕಂಟಲಗೆರೆ ಬರಹ

Read More

ಹದಿಮೂರನೇ ರೂಮಿನಲ್ಲಿ ವಾಸ್ತವ್ಯದ ಮಹಿಮೆ

ಯಾವುದಕ್ಕೂ ಕಂಡೀಷನ್ ಹಾಕದ ನಮ್ಮ ಸೀನಿಯರ್ಸ್ ಒಂದು ವಿಷಯಕ್ಕೆ ಮಾತ್ರ ನಿರ್ಬಂಧ ಹೇರಿದ್ದರು. ರೂಮಿನ ಹಿಂಗೋಡೆಯಲ್ಲಿ ಒಂದು ಕಿಟಕಿ ಇತ್ತು. ಆ ಕಿಟಕಿ ಹತ್ತಿರ ಮಾತ್ರ ನಮ್ಮನ್ನ ಕೂರಲು ಬಿಡುತ್ತಿರಲಿಲ್ಲ. ಬದಲಿಗೆ ರಂಗಸ್ವಾಮಿ ಮತ್ತು ಕೃಷ್ಣಮೂರ್ತಿ ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಬಂದವರೇ ಕಿಟಕಿ ಓಪನ್ ಮಾಡಿಕೊಂಡು ಹಾಜರಿರುತ್ತಿದ್ದರು. ಅವರೇಕೆ ಈ ನಿರ್ಬಂಧ ಹೇರಿದ್ದಾರೆ ಎಂಬುದನ್ನು ನಾವು ಬಹಳ ತಡವಾಗಿ ಪತ್ತೆ ಮಾಡಿದ್ದೆವು.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಬರೆದ ಹಾಸ್ಟೆಲ್ ಜೀವನಾನುಭವದ ಬರಹ  ಇಲ್ಲಿದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ