ಹೊಸಕಾವ್ಯದ ಗುರು ಗೋಪಾಲಕೃಷ್ಣ ಅಡಿಗ

1955 ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದಲ್ಲಿ ಗುರುಸಮಾನರಾಗಿ ಸ್ವೀಕರಿಸಲ್ಪಟ್ಟರು. ಹೊಸ ಪೀಳಿಗೆಯ ಸಾಹಿತಿಗಳು ಅವರ ಪ್ರಭಾವಕ್ಕೆ ಒಳಗಾದರು. ಅಡಿಗರ ಕಾವ್ಯವನ್ನು ಗಮನಿಸುವಾಗ ಅವರು ನವೋದಯ, ಪ್ರಗತಿಶೀಲ ಮತ್ತು ನವ್ಯ – ಈ ಮೂರೂ ಮಾರ್ಗಗಳಿಗೆ ಸೇರುವ ಕವಿತೆಗಳನ್ನು ಬರೆದು ಬೆಳೆದವರು ಎನ್ನುವುದು ತಿಳಿಯುತ್ತದೆ. ತಮ್ಮ ಹಿಂದಿನ ಕಾವ್ಯಮಾರ್ಗಗಳನ್ನು ಅರೆದು ಕುಡಿದವರಾದ ಕಾರಣ ಅಡಿಗರು ಅವುಗಳ ಮಿತಿಯನ್ನು ಹೇಳಿದಾಗ ಅದಕ್ಕೊಂದು ಅಧಿಕೃತತೆ ಪ್ರಾಪ್ತವಾಯಿತು ಮತ್ತು ಕವಿಗಳು ಅವರನ್ನು ಅನುಸರಿಸಿದರು. ಕರಾವಳಿಯ ಕವಿರಾಜಮಾರ್ಗ ಸರಣಿಯಲ್ಲಿ ಡಾ.ಬಿ. ಜನಾರ್ದನ ಭಟ್ ಹೊಸಕಾವ್ಯದ ಗುರು ಮೊಗೇರಿ ಗೋಪಾಲಕೃಷ್ಣ ಅಡಿಗರ ಕುರಿತು ಬರೆದಿದ್ದಾರೆ.

Read More