ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ದೇವದಾಸ ಕಳಸದ ಕತೆ

ಇಲ್ಲಿ ದಡೂತೆಪ್ಪನ ಶೆಡ್ಡಿನ ಸಂಸಾರ ಮೂರ್ನಾಲ್ಕು ವರ್ಷ ನಿರಾಯಾಸವಾಗಿ ಸಾಗಿತು. ಕೂಡು ಸಂಸಾರದಿಂದ ಸಂಪಾದನೆಗೆ ಕುಂದೆಂದು ಭಾವಿಸಿದ್ದ ಚನ್ನಪ್ಪ ಪಕ್ಕದ ಬಡಾವಣೆಯಲ್ಲಿ ಬದುಕು ಕಟ್ಟಿಕೊಂಡಿದ್ದ. ವಾಚಮನ್ಕಿಯೊಂದಿಗೆ ಕಟ್ಟಡದ ಅನ್ಯ ಕೆಲಸಗಳಿಂದಲೂ ಗಳಿಕೆ ಹೆಚ್ಚಿಸಿಕೊಂಡಿದ್ದ. ಅವನಿಗೆ ಅಂಥ ಯಾವ ಚಟ ಇರಲಿಲ್ಲವೆಂದರೂ ರಾತ್ರಿ ಮಾತ್ರ ಅರವತ್ತು ಎಮ್ಮೆಲ್ ಬೇಕೇಬೇಕಿತ್ತು. ಆತನ ಅಕ್ಕ ಹನುಮವ್ವನೂ ಕಟ್ಟಡ ಕೆಲಸದಲ್ಲಿ ದುಡಿಯುತ್ತಿದ್ದಳು. ಡಾ. ದೇವದಾಸ ಕಳಸದ ಬರೆದ ಕತೆ

Read More