ಕನ್ನಡಕ್ಕೆ ಬಂದ ತೆಲುಗಿನ ಕತೆಗಳ ಮುನ್ನುಡಿಯಿದು

ಜಾಗತಿಕ ಮುಕ್ತ ಮಾರುಕಟ್ಟೆಯ ಕಬಂಧ ಬಾಹುಗಳು ದೇಶದ ಅಧಿಕಾರಶಾಹಿಗಳ ಸ್ವಾರ್ಥ ರಾಜಕಾರಣದ ಬೆಂಬಲದೊಂದಿಗೆ ಚಾಚಿಕೊಂಡದ್ದರಿಂದಾಗಿ ರೈತರ ಬದುಕು ಮೂರಾಬಟ್ಟೆಯಾದ ಕಥೆಯನ್ನು ಹೇಳುವ ‘ಕೈಗೊಂಬೆ’, ಬೆವರು ಸುರಿಸಿ ಪ್ರಾಮಾಣಿಕವಾಗಿ ದುಡಿಯುವ ಶ್ರಮಜೀವಿಗಳ ಕಷ್ಟದ ದುಡಿಮೆಯನ್ನು ಸೊಳ್ಳೆಗಳು ರಕ್ತ ಹೀರುವಂತೆ ದರೋಡೆಗೈದು ಅವರ ಬದುಕನ್ನು ನರಕಸದೃಶವಾಗಿಸುವ ಭ್ರಷ್ಟಾಚಾರಿ ಅಧಿಕಾರಿವರ್ಗದವರ ಅನ್ಯಾಯದ ಜಾಲವನ್ನೂ ಅಲ್ಲಿ ಸೃಷ್ಟಿಯಾಗುವ ಹೃದಯವಿದ್ರಾವಕ ಸನ್ನಿವೇಶಗಳನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕಥೆ ‘ನಿಗೂಢ ಹಸ್ತಗಳು’.
ತೆಲುಗು ಕತೆಗಾರ ಪೆದ್ದಿಂಟಿ ಅಶೋಕ್‌ ಕುಮಾರ್‌ ಅವರ ಒಂದಷ್ಟು ಕತೆಗಳನ್ನು “ಜಾಲ” ಎಂಬ ಸಂಕಲನದ ಮೂಲಕ ಎಂ.ಜಿ. ಶುಭಮಂಗಳ ಕನ್ನಡಕ್ಕೆ ತಂದಿದ್ದು, ಅದಕ್ಕೆ ಡಾ. ಪಾರ್ವತಿ ಜಿ. ಐತಾಳರು ಬರೆದ ಮುನ್ನುಡಿ ಇಲ್ಲಿದೆ.

Read More