ಊರು ಬಿಟ್ಟವರ ಹಾಡುಪಾಡು

ಜೀವದಿಂದಿಡಿದು ಜೀವನದೊಟ್ಟಿಗೆ ಬೆರೆತುಹೋಗಬೇಕಿದ್ದ ಭಾಷೆಯನ್ನು ನಿಧಾನಕ್ಕೆ ಮರೆಯಲಾರಂಭಿಸಿ, ಸಾಂಸ್ಕೃತಿಕ ಕೇಂದ್ರಗಳಾಗಿದ್ದ ಹಳ್ಳಿಗಳನ್ನ ತೊರೆದು ಎಲ್ಲವೂ ವ್ಯಾಪಾರವಾಗಿರುವ ಪಟ್ಟಣದ ಮೋಹಕ್ಕೆ ಒಂದು ತಲೆ ಮಾರನ್ನೇ ವರ್ಗಾಯಿಸಿದ್ದು ದುರಂತವಲ್ಲದೇ ಮತ್ತೇನು? ಪಟ್ಟಣದಲ್ಲಿ ಸೈಟು ಮಾಡಿ, ದೊಡ್ಡ ದೊಡ್ಡ ಬಂಗಲೆ ಕಟ್ಟುವುದನ್ನೇ ಜೀವನದ ಅತಿದೊಡ್ಡ ಯಶಸ್ಸು ಎಂಬ ಹುಸಿ ಸುಳ್ಳನ್ನು ಮುಗ್ಧ ಮನಸ್ಸುಗಳಲ್ಲಿ ಬಿತ್ತಲಾರಂಭಿಸಿದ ಪರಿಣಾಮ ಬಾಗಿಲು ಹಾಕಿದ ದೊಡ್ಡ ದೊಡ್ಡ ಬಂಗಲೆಗಳಲ್ಲಿ ವೈಚಾರಿಕತೆ ಹಳ್ಳಿಯ ಹೆಂಚಿನ ಮನೆಗಳಲ್ಲೇ ಉಳಿದುಬಿಟ್ಟವು.
ಪ್ರಕಾಶ್‌ ಪೊನ್ನಾಚಿ ಬರಹ

Read More