Advertisement

Tag: ಪುಸ್ತಕ

ಮೈಮನಗಳ ತಾಕಲಾಟದಲ್ಲಿ ಮೂಡಿದ ಜೀವನ ಶೋಧ: ಸುಧಾಕರ ದೇವಾಡಿಗ ಬಿ ಬರಹ

ಸುಮನ ತನ್ನ ಉದ್ಯೋಗದಲ್ಲಿ ಎದುರಿಸುವ ಮತ್ತೊಂದು ಸೂಕ್ಷ್ಮ ಇಕ್ಕಟ್ಟೆಂದರೆ, ತಾಯಿಯ ಮೊಲೆಯನ್ನು ಕಚ್ಚಿಕೊಂಡಿರುವ ಮರಿಗಳನ್ನು ತಾಯಿ ಇಲಿಯಿಂದ ಬೇರ್ಪಡಿಸುವ ಕ್ರಿಯೆ. ಇದು ಅವಳಿಗೆ ಹಿಂಸೆಯನ್ನುಂಟು ಮಾಡುತ್ತದೆ. ಆ ಟ್ರಾನ್ಸ್‌ಜೆನಿಕ್‌ ಇಲಿಗಳ ಸ್ಥಿತಿಯು ತನ್ನ ಸ್ಥಿತಿಗಿಂತ ಭಿನ್ನವೇನಲ್ಲ ಎಂದು ಭಾಸವಾಗುತ್ತದೆ. ಆ ಇಲಿಗಳಿಗೆ ಅನಸ್ತೇಶಿಯಾ ನೀಡಿ ಪ್ರಜ್ಞೆಯನ್ನು ತಪ್ಪಿಸುವುದು. ನಂತರ ಅದರ ದೇಹದ ಒಂದೊಂದು ಭಾಗವನ್ನು ಬೇರ್ಪಡಿಸುವ ಕ್ರಿಯೆ ಇದು ತನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲುತ್ತಾಳೆ.
ಚೀಮನಹಳ್ಳಿ ರಮೇಶ್‌ಬಾಬು ಕಾದಂಬರಿ “ಮಂಪರು” ಕುರಿತು ಸುಧಾಕರ ದೇವಾಡಿಗ ಬಿ ಬರಹ

Read More

ಲೇಖಕರ ಮತ್ತು ಓದುಗರ ನಡುವಿನ ಕೊಂಡಿ ಹೊಸೆಯುತ್ತಾ…

ಪ್ರಕಾಶಕರು, ಲೇಖಕರ ಮತ್ತು ಓದುಗರ ನಡುವಿನ ಬಹುಮುಖ್ಯ ಕೊಂಡಿ. ಅವರ ಸಹಾಯವಿಲ್ಲದೇ ಯಾವುದೇ ಲೇಖಕರ ಕೃತಿಯು ಓದುಗರನ್ನು ತಲುಪಲು ಸಾಧ್ಯವಿಲ್ಲ. ನಮ್ಮ ಭಾಷೆಯಲ್ಲಿ ಯಾವೆಲ್ಲ ತರಹದ ಸಾಹಿತ್ಯ ಕೃಷಿ ನಡೆಯುತ್ತಿದೆ ಅನ್ನುವುದನ್ನು ಓದಿ, ಓದುಗರ ಮುಂದಿಟ್ಟಾಗಲೇ ಒಬ್ಬ ಓದುಗನಿಂದ ಮತ್ತೊಂದು ಓದುಗ ಹುಟ್ಟಿಕೊಳ್ಳುವುದು. ಅದರ ಜೊತೆಗೇ ಎಂಥ ಪ್ರಕಾರದ ಪುಸ್ತಕವನ್ನು ಓದುಗರ ಕೈಗಿಡಬೇಕು, ಮತ್ತೆ ಓದುಗನಿಗೆ ಪುಸ್ತಕ ತಲುಪಿಸುವ ಮಾರ್ಗಗಳೇನು ಎಂಬುದೂ ಈ ಹೊತ್ತಿನಲ್ಲಿ ಚರ್ಚಿಸಬೇಕಾದ ವಿಷಯ. ರೂಪಶ್ರೀ ಕಲ್ಲಿಗನೂರ್‌ ಬರಹ ಇಲ್ಲಿದೆ

Read More

ತಿಪಟೂರು ಸೀಮೆಯ ಘಮಲು

ಕೇವಲ ನಿರೂಪಕಿ ಆಗದೆ ಕತೆಗಳ ಒಳಗಿನಿಂದ ಬಂದು ಮಾತನಾಡುವ ಕತೆಗಾರ್ತಿಗೆ ಆ ಕಾರಣಕ್ಕೆ ಒಂದು ರೀತಿಯ ಸಹಜ ಯಜಮಾನಿಕೆ ಪ್ರಾಪ್ತವಾಗಿದೆ. ಭಾರತದ ಮಹಾವ್ಯಾಖ್ಯಾನಗಳನ್ನು ನೀಡಿದ ವಾಲ್ಮೀಕಿ ವ್ಯಾಸರು ಕತೆಯ ಒಳಗಿನವರು. ತಾವೂ ತಮ್ಮ ಕತೆಯಲ್ಲಿ ಪಾತ್ರಧಾರಿಗಳು ಅಥವಾ ತಮ್ಮಿಂದಲೇ ಕತೆಗಳನ್ನು ಆರಂಭಿಸಿದವರು. ಕತೆಗಾರಿಕೆಗೆ ಇದೊಂದು ಅತ್ಯುತ್ತಮ ಮಾದರಿ. ತಾನೇ ಊರಾಡಿ ಎತ್ತಿಕೊಂಡು ಬಂದ ಕತೆಗಳಂತಿರುವ ಸಮೂಹ ಪ್ರಜ್ಞೆ ಈ ಕತೆಗಳ ಸತ್ವ. ಕತೆಗಳು ಸಮೂಹದ ಸ್ವತ್ತು. ಸಮೂಹ ಕೊಡುತ್ತಿರುವ ಸಮಸ್ತ ಬೈಗುಳಗಳಾದಿಯಾಗಿ ಯಾವುದನ್ನೂ ಸೋಸದೆ ಇಡಿಯಾಗಿ ನಮಗೆ ತಲುಪಿಸಲಾಗಿದೆ.
ದಯಾ ಗಂಗನಘಟ್ಟ ಕಥಾ ಸಂಕಲನ “ಉಪ್ಪುಚ್ಚಿ ಮುಳ್ಳು”ಗೆ ನಟರಾಜ್‌ ಬೂದಾಳು ಬರೆದ ಮುನ್ನುಡಿ

Read More

‘ಬೇಕಿತ್ತು ನಿಮ್ಮದೊಂದೆರೆಡು ಕವಿತೆಗಳು ಸಾಲವಾಗಿ…ʼ

ಮೂಲ ಲೇಖಕರ ಒಪ್ಪಿಗೆಯಿರಲಿ, ಅವರ ಗಮನಕ್ಕೂ ತಾರದೇ ನೇರವಾಗಿ ಕವಿತೆಯ ಸಾಲುಗಳನ್ನು ನಕಲು ಮಾಡಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ತಾವೇ ರಚಿಸಿದ್ದೆಂದು ಪ್ರಚಾರ ಪಡೆಯುವ ಕಪಟ ಸಾಹಿತಿಗಳನ್ನು ಕೆಣಕಿದ್ದಾರೆ. ‘ಇರಬೇಕು, ಇದ್ದೇ ಇರುತ್ತಾರೆ, ಒಬ್ಬಿಬ್ಬರಲ್ಲ ಒಂದಷ್ಟು ಜನ, ಇರುವಿಕೆಯ ಅರಿವನ್ನಷ್ಟೇ ಉಳಿಸಿ, ಎಲ್ಲರೊಳಗೂ ಸಾಲವಾಗಿಯೇ ಉಳಿಯುವವರು..’ ಎಂದೆನ್ನುತ್ತಾ ಪ್ರತಿಯೊಂದರಲ್ಲೂ ಮೂಗು ತೋರಿಸುವವರ ಸಂಖ್ಯೆ ಈಗ ಅಧಿಕ. ಅದರ ಬಗ್ಗೆ ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತನ್ನದೂ ಒಂದು ಅಭಿಪ್ರಾಯವಿರಲಿ ಎನ್ನುವವರೇ ಹೆಚ್ಚಾಗಿದ್ದಾರೆ.
ಸೌಜನ್ಯ ದತ್ತರಾಜ ಕವನ ಸಂಕಲನ “ಭಾವನೌಕೆಯನೇರಿ” ಕುರಿತು ಪ ನಾ ಹಳ್ಳಿ ಹರೀಶ್ ಕುಮಾರ್ ಬರಹ

Read More

ಗಡಂಗು ಹೋಗಿ ಶರಾಬು ಬಂತೂ….

ತಮ್ಮ ಹೊಸ ಗಡಂಗನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಾದವ ಶೆಟ್ಟರ ಎರಡು ಪ್ರಯತ್ನಗಳು ಇತಿಹಾಸದಲ್ಲಿ ದಾಖಲಾಗತಕ್ಕವೇ ಆಗಿವೆ. ಅವುಗಳಲ್ಲಿ ಮೊದಲನೆಯದು, ಒಂದು ನಿಗದಿತ ದಿನ ತಮ್ಮ ಗಡಂಗಿಗೆ ಯಾರೇ ಬಂದರೂ ಶರಾಬು ಕುಡಿಯುವವರಿಗೆ ಅವರು ಕುಡಿಯುವಷ್ಟು ಶರಾಬನ್ನು ಉಚಿತವಾಗಿ ಕೊಡಲಾಗುವುದೆಂದು ಯಾದವ ಶೆಟ್ಟಿಯವರು ಘೋಷಿಸಿದ್ದು. ಅದೊಂದು ಸ್ಮರಣೀಯ ಮದ್ಯಪಾನೋತ್ಸವವಾಗಿತ್ತು. ಶರಾಬು ಸಮಾರಾಧನೆಯ ದಿನ ಬೆಳಗಿನಿಂದಲೇ ಶರಾಬು ಅಂಗಡಿಗೆ ನುಗ್ಗಲಾರಂಭಿಸಿದ ಊರಿನ ಶರಾಬು ಪ್ರಿಯರು ಬಹಳ ಬೇಗನೇ ‘ಟೈಟ್’ ಆದರು (ಮತ್ತೇರಿಸಿಕೊಂಡರು). ಆಮೇಲೆ ಪರಸ್ಪರ ಬೈದಾಡುತ್ತಾ, ದೂಡಿಕೊಳ್ಳುತ್ತಾ, ಬಡಿದಾಡುತ್ತಾ ಮನಸ್ಸಿನಲ್ಲಿದ್ದ ಕಲ್ಮಶಗಳನ್ನೆಲ್ಲ ಹೊರಗೆ ಹಾಕುತ್ತಾ ಮೆರೆದಾಡಿದರು.
ಬಿ. ಜನಾರ್ದನ ಭಟ್ ಹೊಸ ಕಾದಂಬರಿ “ಗಮ್ಯ”ದಿಂದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ