Advertisement

Tag: ಪ್ರವಾಸ ಅಂಕಣ

ರೂಪ್ಮತಿ ಮಹಲಿನಲಿ… ರೂಪ್ಮತಿಯ ನೆನಪಿನಲಿ…

ರಕ್ತದಲ್ಲಿ ಮಧುರ ದನಿಯನ್ನು ಹೊತ್ತು ತಂದಿದ್ದ ಮಗು ಬಾಲೆಯಾಗಿ ಬೆಳೆಯುತ್ತಾ ವಿಪರೀತ ಚಂದದ ಗಾಯಕಿ ಆದಳು. ವಯಸ್ಸಿನ ಹುಡುಗಿಯನ್ನು ಸ್ವಯಂವರದ ಮೂಲಕ ಗ್ವಾಲಿಯರಿನ ದೊರೆ ಮಾನ್ ಸಿಂಗ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಿತ್ಯವೂ ನರ್ಮದೆಯ ಪೂಜೆ ಸಲ್ಲಿಸದೆ ಗುಟುಕು ನೀರನ್ನೂ ಒಲ್ಲೆ ಎನ್ನುತ್ತಿದ್ದ ರೂಪ್ಮತಿಗೆ, ಗ್ವಾಲಿಯರಿನಲ್ಲಿ ನರ್ಮದೆ ಕಾಣದಾಗಿದ್ದಳು.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶದ ಮಾಂಡುವಿನಲ್ಲಿ ಸುತ್ತಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ

Read More

ಅರೋರಾ ಬೋರಿಯಾಲಿಸ್: ನರ್ತಿಸುವ ಬೆಳಕಿನ ನೂರೆಂಟು ಮೋಹಕ ರೂಪ

ಹಿಂದಿನ ಸಾಲಿನಲ್ಲಿ ಮಲಗಿದ್ದ ಶ್ವೇತಾ ಜೋರಾಗಿ ಭುಜ ಅಲುಗಿಸಿ ನನ್ನನೆಬ್ಬಿಸುತ್ತಿದ್ದಾಳೆ. ಅವಳಿಗೆ ಗಂಟಲುಬ್ಬಿ ಮಾತೇ ಹೊರಡುತ್ತಿಲ್ಲ. ಕೈಸನ್ನೆ ಮಾಡಿ ಕಿಟಕಿಯ ಪರದೆ ಎತ್ತು ಎನ್ನುತ್ತಿದ್ದಾಳೆ. ಪೈಲಟ್ ಕಡೆ ಬೆರಳು ತೋರಿಸುತ್ತಿದ್ದಾಳೆ. ನನಗೋ ಎದೆ ಧಸಕ್ ಎಂದಿತು. ಅವಳ ಮುಖದ ತುಂಬಾ ಇದ್ದ ನಗು ನೋಡಿ ವಿಮಾನ ಅಪಾಯದಲ್ಲಿಲ್ಲ ಎಂದು ಖಾತ್ರಿಯಾಯಿತು. ಅಂದರೆ.. ಅಂದರೆ.. ನಿಜಕ್ಕೂ ನಾರ್ಥರ್ನ್ ಲೈಟ್ಸ್ ಕಾಣಿಸುತ್ತಿದೆಯಾ? ಇವೆಲ್ಲ ನಡೆದಿದ್ದು ಕೆಲವೇ ಸೆಕೆಂಡುಗಳಲ್ಲಿ ಎನ್ನಬಹುದು.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿಹೆಗಡೆ ಬರಹ

Read More

ಮನದೊಳಗೆ ಅಚ್ಚಾಗಿದೆ ಸ್ಲೊವೇನಿಯಾ ಫೋಟೊಫ್ರೇಮ್

ಜಸ್ನಾ ಸರೋವರದ ಪ್ರವಾಸಿಗರಿಗೆ ಒಂದು ಅನಿರೀಕ್ಷಿತ ಉಡುಗೊರೆ ಕಾದಿರುತ್ತದೆ. ಅದು ಇಲ್ಲಿನ ಪ್ರಮುಖ ಆಕರ್ಷಣೆ – ಫೋಟೋ ಫ್ರೇಮ್! ಇಲ್ಲಿ ಬರುವ ಪ್ರವಾಸಿಗಳಿಗೆ ಫೋಟೊಗೋಸ್ಕರವಾಗಿ ಮರದಲ್ಲಿ ಮಾಡಿದ ಒಂದು ಸುಂದರವಾದ ಫೋಟೋ ಫ್ರೇಮ್ ಇದೆ. ಅದರ ಕೊನೆಯಲ್ಲಿ ಸ್ಲೋವೇನಿಯಾದ ಅಜ್ಜ ಪ್ರತಿಯೊಬ್ಬರ ಜೊತೆಗೂ ನೆನಪಾಗಿ ಅವರವರ ಮನೆಗಳಿಗೆ ತೆರಳುತ್ತಾನೆ. ನಾವೆಲ್ಲರೂ ಕೂತು ತೆಗೆಸಿಕೊಂಡಿರುವ ಫೋಟೋ ನೋಡಿದರೆ ನಿಮಗೊಂದು ಕ್ಷಣಕ್ಕೆ ಅಚ್ಚರಿಯಾಗುವುದು ಖಚಿತ. ಆ ಅಜ್ಜ ನಮ್ಮಲ್ಲಿಯ ಯಾರೋ ಒಬ್ಬರು ಎಂಬಂತೆ ಕಾಣುವಷ್ಟು ಚೆನ್ನಾಗಿ ಮೂಡಿ ಬಂದಿರುವ ಕೆತ್ತನೆಯ ಕಲಾವಿದನಿಗೆ ಹಾಗೂ ಈ ಕಲ್ಪನೆಯನ್ನು ಸಾಕಾರಗೊಳಿಸಿದ ಇಲ್ಲಿಯ ಪ್ರವಾಸೋದ್ಯಮ ಇಲಾಖೆಗೆ ನನ್ನ ಧನ್ಯವಾದಗಳು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ