Advertisement

Tag: ಪ್ರವಾಸ ಕಥನ

ಹೊಸ ಸ್ವರೂಪಕ್ಕೆ ಕಾಯುತ್ತಿರುವ ಪ್ರವಾಸ ಕಥನ

ಎರಡು ಮೂರು ದಶಕಗಳ ಹಿಂದೆ ವಿದೇಶಗಳ ಬಗ್ಗೆ ಇದ್ದಷ್ಟು ಕುತೂಹಲ ಈಗ ಭಾರತದಲ್ಲಾಗಲಿ, ಮೂರನೆ ಜಗತ್ತಿನ ದೇಶಗಳಲ್ಲಾಗಲಿ ಇಲ್ಲ. ಜಾಗತೀಕರಣವೂ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ, ಉದ್ಯೋಗ, ವ್ಯಾಪಾರ, ಪ್ರವಾಸಗಳಿಗೆ ಬೇರೆ ದೇಶಗಳಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಅವಕಾಶಗಳು ಕೂಡ ತೆರೆದಿವೆ. ಉದಾಹರಣೆಗೆ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಕನಿಷ್ಠ ಹತ್ತು ಕುಟುಂಬಗಳ ಸದಸ್ಯರಾದರೂ, ಬಂಧುಗಳಾದರೂ ಈಗ ಹೊರದೇಶಗಳೊಡನೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕ, ಒಡನಾಟ ಇಟ್ಟುಕೊಂಡಿರುತ್ತಾರೆ.
ಕೆ. ಸತ್ಯನಾರಾಯಣ ಪ್ರವಾಸ ಕಥನ “ಅಮೆರಿಕದಲ್ಲಿ ಬಸವನಗುಡಿ”ಯ ಒಂದು ಬರಹ ನಿಮ್ಮ ಓದಿಗೆ

Read More

ಎಲ್ಲಾ ಊರು ಕಂಡಮೇಲೆ….

ಬರೀ ಅಲ್ಲಿನ ಆಡಂಬರ ಅಥವಾ ವೈಭವೋಪೇತ ನೋಟಗಳನ್ನಷ್ಟೇ ನಮಗೆ ಉಣಬಡಿಸಲು ಇಚ್ಚಿಸದ ಪ್ರಕಾಶ್‌ರವರು ತಮ್ಮ ಪ್ರವಾಸದುದ್ದಕ್ಕೂ ಆದ ಕೆಲವೊಂದು ಆಕಸ್ಮಿಕ ಅನುಭವಗಳನ್ನೂ ನಮಗೆ ತಿಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಅವುಗಳಲ್ಲಿ ಪ್ರವಾಸಿಗಳಿಗೆ ವಸತಿ ಮಾಡಲು ಅನುಕೂಲವಾಗಿರುವ ಸ್ಟುಡಿಯೋ ಪ್ಲಾಟ್‌ಗಳ ಕುರಿತಾದ ಪರಿಚಯ ಬರಹ, ಬೆಲ್ಜಿಯಂನ ಬಸ್ಸುಗಳಲ್ಲಿನ ಶೌಚಾಲಯ ವ್ಯವಸ್ಥೆಯ ಬಗ್ಗೆ, ಚಾಕೊಲೇಟ್ ವಿಲೇಜ್‌ನಲ್ಲಿ ಸಿದ್ಧವಾಗುವ ಹೋಮ್ ಮೇಡ್ ಚಾಕೊಲೇಟ್‌ಗಳ ಸ್ವಾದದ ಬಗ್ಗೆ, ರುಚಿಯಾದ ಸಸ್ಯಾಹಾರಿ ತಿನಿಸು ಫಲಾಫೆಲ್ ಬಗ್ಗೆಯೂ ಬರೆಯುತ್ತಾರೆ.
ಪ್ರಕಾಶ್ ಕೆ ನಾಡಿಗ್ ಬರೆದ “ನಾ ಕಂಡ ಯೂರೋಪ್ ಖಂಡ” ಪ್ರವಾಸ ಕಥನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ

Read More

ಹಾಯ್‌ ಅಂಗೋಲಾ!

ಅಂಗೋಲಾದ ಜನರ ಬಗ್ಗೆ ಹೇಳುವುದು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವುದು, ಅಲ್ಲಿನ ಊಟ ತಿಂಡಿ ಬಗ್ಗೆ ಹೇಳುವುದು ಇದೆಲ್ಲಾ ಸಹಜ. ನಿರೂಪಣೆ ಅದ್ಭುತವಾಗಿದೆ, ಹೊಸ ವಿಷಯ ತಿಳಿಯುತ್ತದೆ ಎಲ್ಲಾ ನಿಜವೇ. ಆದರೆ ಅತ್ಯಂತ ವಿಶಿಷ್ಟವಾದ ಅಧ್ಯಾಯವಿದೆ. ಮೊದಲ ಬಾರಿ ಓದಿದಾಗ ಬಹಳ ವಿಚಿತ್ರ ಅನ್ನಿಸಿತ್ತು‌. ಒಂದು ಕ್ಷೌರ ಮಾಡಿಸಿಕೊಳ್ಳಲು ಮುನ್ನೂರು ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದ ಪ್ರಸಾದರ ಅವಸ್ಥೆ ಬಗ್ಗೆ ಕೇಳಿದಾಗ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ. ಆಫ್ರಿಕನ್ನರ ಕೂದಲ ರೀತಿಗೂ ಭಾರತೀಯರ ಕೂದಲ‌ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಗೊತ್ತಿರುವ ಸಂಗತಿ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

Read More

`ಜಗದ ಜಗಲಿಯಲಿ ನಿಂತು’: ವೈಶಾಲಿ ಪ್ರವಾಸ ಲೇಖನ ಮಾಲೆ ಆರಂಭ

ಮಾಯಾ ಜನರ ಈ ಖಗೋಳಶಾಸ್ತ್ರದ ನಂಬಿಕೆ ಮತ್ತು ಅವಲಂಬನೆ ಎಷ್ಟರ ಮಟ್ಟಿಗಿತ್ತೆಂದರೆ ಅದು ಅವರ ಜೀವನದ ಪ್ರತಿ ನಡೆಯಲ್ಲೂ ಹಾಸುಹೊಕ್ಕಾಗಿತ್ತು. ಜಗತ್ಪ್ರಸಿದ್ದ ಮಾಯನ್ ಪಿರಾಮಿಡ್ “ಚಿಚೆನ್ ಇಟ್-ಸಾ” ಇದಕ್ಕೊಂದು ನಿದರ್ಶನ. ಇದು ಅವರ ಸರ್ಪದೇವತೆ ಕುಕುಲ್ಕಾನ್ ಮಂದಿರ. ಇಂದಿಗೂ ಇಕ್ವಿನಾಕ್ಸ್ ದಿನ ನಡುಮಧ್ಯಾಹ್ನ, ಸೂರ್ಯನ ನೆರಳು ಪಿರಮಿಡ್ಡಿನ ಮೇಲೆ ಹೇಗೆ ಬೀಳುತ್ತದೆಂದರೆ, ಸರ್ಪವೊಂದು ಮೇಲಿಂದ ಕೆಳಗೆ ಹರಿದಂತೆ ಕಾಣುತ್ತದೆ. ಆ ದೃಶ್ಯ ನೋಡಲು ಪ್ರತಿವರ್ಷ ಸಾವಿರಾರು ಜನ ಸೇರುತ್ತಾರೆ. ವೈಶಾಲಿ ಹೆಗಡೆ ಬರೆಯುವ ʻಜಗದ ಜಗಲಿಯಲಿ ನಿಂತುʼ ಅಂಕಣದ ಮೊದಲ ಬರಹ ಇಲ್ಲಿದೆ

Read More

ಇಲ್ಲಿಂದಲೇ ಪಾಂಡವರು ಸ್ವರ್ಗಾರೋಹಣ ಮಾಡಿದರು

ಸರಸ್ವತಿ ನದಿ ಕಣ್ಣಿಗೆ ಕಾಣಸಿಗುವುದು ಇಲ್ಲಿ ಮಾತ್ರ ಮತ್ತು ಶ್ವೇತಶುಭ್ರವಾಗಿ, ರಭಸದಲ್ಲಿ ಹರಿಯುತ್ತಿದ್ದಾಳೆ. ಜ್ಞಾನದಾಯಿನಿ ಸರಸ್ವತಿ ಮಾತೆಗಿಲ್ಲೊಂದು ಅಪರೂಪದ ಮಂದಿರವಿದೆ. ಅಲ್ಲೇ ಅದರೆದುರೇ ಕಾಣುವ ಒಂದು ಹೆಬ್ಬೆರಳು ಗಾತ್ರದ ನೀರಿನ ಝರಿಯು ಮಾನಸ ಸರೋವರದಿಂದ ಬರುತ್ತಿದೆ ಎಂದು ತೋರುತ್ತಾರೆ ಇಲ್ಲಿನ ಜನ. ಇಲ್ಲಿ ಸರಸ್ವತಿ ಹುಟ್ಟಿ, ಹೆಚ್ಚಿನ ಆರ್ಭಟದಿಂದ ಕುಣಿಕುಣಿದು ಹರಿಯುತ್ತಿದ್ದಳಂತೆ. ಮಹಾಭಾರತ ರಚನೆಯಲ್ಲಿ ಮಗ್ನರಾಗಿದ್ದ ವ್ಯಾಸರಿಗೆ ಇವಳ ಸದ್ದು ಕೋಪ ತರಿಸಿತಂತೆ. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ