ಸಂಘರ್ಷವನ್ನು ಗುಡಿಸಿ ಹಾಕುವ ಕಾಲ: ಪ್ರೊ.ಕೀರ್ತಿನಾಥ ಕುರ್ತಕೋಟಿ ಬರಹ

ಕತೆಯ ವರ್ಣನೆಯಲ್ಲಿಯ ಎಲ್ಲ ವಿವರಗಳೂ ಸಂಜ್ಞೆಗಳಾಗುವದಿಲ್ಲ. ಸಂಜ್ಞೆಗಳು ಪ್ರತೀಕಗಳಾಗುವದಿಲ್ಲ. ವಿವರಗಳಿಗಿಂತ ಸಂಜ್ಞೆಗಳು ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಯುತ್ತವೆ. ಭಾವಸಂಜ್ಞೆಗಳಾಗಿದ್ದರೆ ಮನಸ್ಸನ್ನು ಕಲಕುತ್ತವೆ. ಆದರೆ ಪ್ರತೀಕಗಳು ಹೆಚ್ಚು ಲಕ್ಷ್ಯವನ್ನು ಅಪೇಕ್ಷಿಸುತ್ತವೆ. ಉದಾಹರಣೆಗೆ ದುರ್ಗಿ ಸಾಯುವ ರಾತ್ರಿ ಕಿಟಕಿಯಲ್ಲಿ ಕಾಣುವ ಸೇವಂತಿಗೆ ಹೂವಿನ ಟ್ರಕ್ಕು ಒಂದು ಪ್ರತೀಕವಾಗಿರುವದರಿಂದ ಅದು ತನ್ನ ಅರ್ಥವನ್ನು ಬೇಗ ಬಿಟ್ಟುಕೊಡುವದಿಲ್ಲ. ಅದು ಕೂಡ ಕತೆಯ ವಾಸ್ತವ ವಿವರಗಳಲ್ಲಿ ಒಂದಾಗಿದೆ, ಆದರೂ ವಿಸಂಗತವಾಗಿದೆ.

Read More