Advertisement

Tag: ಮನು ಗುರುಸ್ವಾಮಿ

ಅವ್ವ ಸಾಮಾನ್ಯಳು, ಅಸಮಾನ್ಯಳು!: ಮನು ಗುರುಸ್ವಾಮಿ ಬರಹ

ಕರುಳಬಳ್ಳಿಯನ್ನು ಕಡಿಯುವ ತಾಯಿ ಜಗದಲ್ಲುಂಟೆ? ಡಿ ವಿ ಜಿ ಅವರು ಒಂದುಕಡೆ ಹೇಳುತ್ತಾರೆ “ಕೊಲೆಗಡುಕ ಹುಲಿ ಸಲುಹದೇನ್ ಮರಿಗಳನು”. ಕ್ರೂರಪ್ರಾಣಿ, ಇತರ ಪ್ರಾಣಿಗಳನ್ನು ಕೊಂದು ತಿನ್ನುವ ಹುಲಿ ತನ್ನ ಮರಿಗಳ ವಿಚಾರ ಬಂದಾಗ ಎಷ್ಟು ಮುತುವರ್ಜಿ ವಹಿಸಿ ಸಲುಹಿ ಬೆಳೆಸುತ್ತದೆಯಲ್ಲವೆ? ಪ್ರಾಣಿಗಳೇ ಹೀಗೆಂದ ಮೇಲೆ ಇನ್ನೂ ವಿವೇಚನಾ ಶಕ್ತಿಯುಳ್ಳ ಮನುಷ್ಯ ಹೇಗೆ? ಇಲ್ಲಿ ಮಗು ನೀನು ಕರುಳಬಳ್ಳಿಯನ್ನು ಕಡಿಯಲು ಇಷ್ಟಪಡುವುದಿಲ್ಲ; ಬದಲಿಗೆ ಒಲವೂಡುತ್ತಿರುವೆ ಎನ್ನುತ್ತಿದೆ.
ತಾಯಿಯ ಕುರಿತಾದ ಕವಿತೆಗಳ ಕುರಿತು ಮನು ಗುರುಸ್ವಾಮಿ ಬರಹ

Read More

‘ನಿಜಸತ್ಯ’ದ ನಿತ್ಯ ಕವಿತೆಗಳು: ಪ್ರದೀಪ್ ಕುಮಾರ್ ಹೆಬ್ರಿ ಬರೆದ ಮುನ್ನುಡಿ

ವ್ಯಭಿಚಾರಿ ಹೂವು ಕವನ ಸಂಕಲನದ ಕವನಗಳನ್ನು ಓದಿದಂತೆ, ಓದಿಯಾಯಿತು ಎಂದು ಪೂರ್ಣವಿರಾಮ ಹಾಕಲು ಆಗುವುದೇ ಇಲ್ಲ. ಇನ್ನೊಮ್ಮೆ ಓದೋಣ, ಮತ್ತೊಮ್ಮೆ ಓದೋಣ ಎಂದೆನಿಸುತ್ತಲೇ ಇರುತ್ತದೆ. ಅರ್ಜುನನಿಗೆ ಶ್ರೀಕೃಷ್ಣನಂದು ಗೀತೆ ಬೋಧಿಸಿದ. ಕವಿ ಮನು ಗುರುಸ್ವಾಮಿಯವರು ‘ಕವಿತೆ’ ಬೋಧಿಸುತ್ತಿದ್ದಾರೆ. ಹಾಗಾಗಿ ನನ್ನ ದೃಷ್ಟಿಯಲ್ಲಿ ಈ ಕವನ ಸಂಕಲನ ‘ಆತ್ಮಗೀತೆ!’ ಮಾನವ ಬದುಕಿಗೆ ಸ್ವಾರ್ಥ, ಮೋಸ, ವಂಚನೆ, ತಲ್ಲಣ, ತಳಮಳ….ಗಳೆಲ್ಲವೂ‌ ಬಿತ್ತರವಾಗಿವೆ. ಮನದ ಅಸಹನೆಯನ್ನು ‘ಸತ್ಯನುಡಿ’ಗಳ ಮೋಹಕತೆಯಲ್ಲಿ ರಂಗೇರಿಸುತ್ತದೆ.
ಮನು ಗುರುಸ್ವಾಮಿ ಕವನ ಸಂಕಲನ “ವ್ಯಭಿಚಾರಿ ಹೂವು”ಕ್ಕೆ ಪ್ರದೀಪ್ ಕುಮಾರ್ ಹೆಬ್ರಿ ಬರೆದ ಮುನ್ನುಡಿ

Read More

ಸ್ತ್ರೀ ಸ್ವಾತಂತ್ರ್ಯದ ಮಗ್ಗಲುಗಳು…

ಸ್ತ್ರೀಯರ ಸ್ವಾತಂತ್ರ್ಯದ ಕುರಿತೇ ಇಲ್ಲಿ ಮಾತನಾಡಿರುವ ಲೇಖಕ, ಯಾಕೆ ಸ್ತ್ರೀಯರಿಗಿನ್ನೂ ಸ್ವಾತಂತ್ರ್ಯ ದಕ್ಕಿಲ್ಲ ಎಂಬ ಪ್ರಶ್ನೆ ಕಾಡಿ ಅದಕ್ಕೆ ಉತ್ತರ ಹುಡುಕುವಾಗ ಕಂಡ ಸಂಗತಿಗಳನ್ನು ಇಲ್ಲಿ ಕತೆಯಾಗಿಸಿದ್ದಾರೆ. “ದೇಹಕ್ಕಾಗಿ ಮೋಹಿಸುವ ಹವ್ಯಾಸವನ್ನೇ ಯುವಜನತೆ ಪ್ರೀತಿಯೆಂದು ಭಾವಿಸಿರುವುದು ವಿಷಾದನೀಯ” ಎಂಬ ಅವರ ಮಾತು ಮನು ಮನಸ್ಸು ಎಷ್ಟು ಸೂಕ್ಷ್ಮಗ್ರಾಹಿ ಎಂಬುದನ್ನು ಸೂಚಿಸುತ್ತದೆ. ಒಬ್ಬ ಗ್ರಾಮೀಣ ಹುಡುಗಿ ತನ್ನ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ ಕತೆಯನ್ನು ಓದುಗರ ಮುಂದೆ ತೆರೆದಿಟ್ಟಿರುವುದಾಗಿ ಹೇಳುತ್ತಾರೆ ಮನು. ಇಂದಿಗೂ ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯುವಲ್ಲಿ ಇನ್ನೂ ಎಷ್ಟು ಅಡೆತಡೆಗಳನ್ನು ದಾಟಬೇಕಾಗಿದೆ.
ಮನು ಗುರುಸ್ವಾಮಿ ಬರೆದ “ಅವಳೂ ಕತೆಯಾದಳು” ಕೃತಿಗೆ ಡಾ. ವಿಜಯಕುಮಾರಿ ಎಸ್ ಕರಿಕಲ್ ಬರೆದ ಮುನ್ನುಡಿ

Read More

ಸೂಕ್ಷ್ಮ ವಿಚಾರಗಳನು ಸರಳವಾಗಿ ದಾಟಿಸುವ ಬರಹಗಾರ…

ವಿದ್ಯೆ ಕಡಿಮೆಯಾದರೂ ನಡತೆ ಶುದ್ಧವಾಗಿರಬೇಕು ಎಂಬ ಮಾತಿದೆ. ಜೀವನದಲ್ಲಿ ನಿಜವಾದ ಬಡತನ ಯಾವುದೆಂದರೆ, ಅದು ತನ್ನ ನಡತೆಯನ್ನ ಶುದ್ಧವಾಗಿಟ್ಟುಕೊಳ್ಳದೇ ಇರುವುದು. ಇಲ್ಲಿ ನಡತೆಯೆಂದರೆ ವ್ಯಕ್ತಿಯ ಚಾರಿತ್ರ್ಯ, ವ್ಯಕ್ತಿತ್ವ; ಆ ವ್ಯಕ್ತಿ ಸಮಾಜದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿರುವ ರೀತಿ. ಆ ನಡತೆಯೊಂದು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರಬಲ್ಲದೆನ್ನುವ ಕವಿ ಇರುವುದರಲ್ಲೇ ತೃಪ್ತಿಯನ್ನು ಹೊಂದಿ, ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ನಗುಮುಖದಿಂದ ಬದುಕುವ ರೀತಿಯನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ.
ಜಿ.ಪಿ. ರಾಜರತ್ನಂ ಬರಹಗಳ ಕುರಿತು ಮನು ಗುರುಸ್ವಾಮಿ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ