Advertisement

Tag: ಮಾರುತಿ ಗೋಪಿಕುಂಟೆ

ಬೇಸಿಗೆ ದಿನಗಳ ಆಟದ ನೆನಪುಗಳು…: ಮಾರುತಿ ಗೋಪಿಕುಂಟೆ ಸರಣಿ

ನನಗೆ ಬೇರೆ ದಾರಿ ಇರಲಿಲ್ಲ. ಓಡಿಹೋಗೋಣವೆಂದರೆ ಅಪ್ಪನ ಕೈಯಲ್ಲಿನ ಕೋಲನ್ನು ಎಸೆದರೆ ಏನಾಗುವುದೋ ಎಂದು ಯೋಚಿಸುವಾಗಲೆ, ಊರಿನಿಂದ ಬಂದ ದೊಡ್ಡಮ್ಮ ಬಿಡಪ್ಪ ಮಗೀನ್ನ ಏನು ಮಾಡ್ಬೇಡ ಏನೋ ಹುಡುಗ್ ಬುದ್ದಿ ಅಂಗ್ ಮಾಡೈತಿ. ಎಳೆಮಗು ಬಾಯಲ್ಲೇಳಿದ್ರೆ ಸಾಕು ಅಂದ್ಕಂಡು ಒಳಗಿನಿಂದ ಬರುವುದಕ್ಕೂ ಅಪ್ಪ ಕೋಲನ್ನು ಎತ್ತಿ ಬೀಸುವುದಕ್ಕೂ ಸರಿಯಾಯಿತು. ದೊಡ್ಡಮ್ಮ ಬಂದವಳೆ ನನ್ನನ್ನು ರಬಕ್ಕನೆ ಎಳೆದುಕೊಂಡಳು. ಕೋಲಿನ ತುದಿ ಬಲ ತೋಳಿಗೆ ಬಿತ್ತು. ಇಷ್ಟು ಸಾಕಾಗಿತ್ತು; ಸಹಾಯಕ್ಕೆ ದೊಡ್ಡಮ್ಮ ಇದ್ದಳು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಹಸಿರು ತೋರಣದ ನಡುವೆ ನೆನಪ ಚಿಗುರು: ಮಾರುತಿ ಗೋಪಿಕುಂಟೆ ಸರಣಿ

ಹೆಣ್ಣು ಮಕ್ಕಳ ಸಂಭ್ರಮಕ್ಕೆ ಯಾವ ಕೊರತೆಯೂ ಇರಲಿಲ್ಲ. ಊರ ಹೊರಗಿನ ಹುಣಸೆ ಮರ, ಕೆಂಕೆಸ್ರು ಮರ ‘ಆಲದ ಮರಕ್ಕೆ, ಹಗ್ಗ ಕಟ್ಟಿ ಜೋಕಾಲಿ ಆಡುವುದನ್ನು ನೋಡುತ್ತಿದ್ದೆವು. ಬಿದ್ದಾರು ಎಂಬ ಕಾರಣಕ್ಕೆ ನಮ್ಮನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಬುಗುರಿ ಚಿನ್ನಿದಾಂಡು ಇಂತಹವುಗಳಲ್ಲಿ ನಾವು ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತಿದ್ದೆವು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಮೂವತ್ತೊಂದನೆಯ ಕಂತು ನಿಮ್ಮ ಓದಿಗೆ

Read More

ಅಮ್ಮ ಮತ್ತು ಕಟ್ಟಿಗೆಯ ಒಲೆ: ಮಾರುತಿ ಗೋಪಿಕುಂಟೆ ಸರಣಿ

ಅಮ್ಮನ ಕೆಲಸಗಳಲ್ಲಿ ಜಾಸ್ತಿ ಸಹಾಯ ಮಾಡುತ್ತಿದ್ದದ್ದೆ ನಾನು. ಆ ಒಲೆಯ ಹತ್ತಿರ ಕುಳಿತು ಒಂದೊಂದೆ ಕಟ್ಟಿಗೆಯನ್ನು ಇಡುವುದರಲ್ಲಿ ಏನೊ ಒಂದು ಖುಷಿ ಇರುತ್ತಿತ್ತು. ಬೆಳಗಿನ ಚುಮು ಚುಮು ಚಳಿಗೆ ಒಲೆ ಮುಂದೆ ಕುಳಿತು ಬಿಸಿಕಾಯಿಸುತ್ತಿದ್ದಾಗ ಕಟ್ಟಿಗೆ ಉರಿಯಿಂದ ಬೆರಳು ಸುಟ್ಟುಕೊಂಡಿದ್ದು ಇದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಒಂಟಿತನ, ಖೋಖೋ, ಕಪ್ಪುಬಿಳುಪಿನ ಗಾಂಧಿ ಚಿತ್ರ: ಮಾರುತಿ ಗೋಪಿಕುಂಟೆ ಸರಣಿ

ಮೊದಮೊದಲು ಮೂವತ್ತು ನಲವತ್ತು ಸೆಕೆಂಡ್‌ಗಳಲ್ಲಿ ಔಟಾಗುತ್ತಿದ್ದ ನಾನು ಕ್ರಮೇಣ ಆಟದ ಪಟ್ಟುಗಳನ್ನು ತಿಳಿದುಕೊಂಡು ಒಂದೊಂದೆ ಕಲಿಯುತ್ತಾ ಹೋದೆ. ದಿನಕಳೆದಂತೆ ಎರಡು ನಿಮಿಷ ಓಡುವಷ್ಟರ ಮಟ್ಟಿಗೆ ತರಬೇತಾದೆ. ಹಂತ ಹಂತವಾಗಿ ಆಡುತ್ತಾ ಮೊದಲನೆ ಬ್ಯಾಚ್‌ಗೆ ಶಿಫ್ಟಾದೆ. ಕೊನೆಗೆ ಗಂಡು ಮಕ್ಕಳ ಖೊಖೋ ಪಂದ್ಯಕ್ಕೆ ಕ್ಯಾಪ್ಟನ್ ಆಗುವಷ್ಟರಮಟ್ಟಿಗೆ ಪ್ರಾವೀಣ್ಯತೆ ಪಡೆದೆ.
ಮಾರುತಿ ಗೋಪಿಕುಂಟೆ ಬರೆಯುವ ಸರಣಿ

Read More

ಬಾರೆಹಣ್ಣು ಮತ್ತು ಪಟ್ಲುಗೋವಿ ಕಿಟ್ಟಪ್ಪ: ಮಾರುತಿ ಗೋಪಿಕುಂಟೆ ಸರಣಿ

ಕಿಟ್ಟಪ್ಪ ಪಟ್ಲು ಗೋವಿಯನ್ನು ಯಾರಿಗೂ ಕಾಣದೆ ಹಿಡಿದುಕೊಂಡಿದ್ದಾನೆ. ನಾವು ಈತ ಈಗೇನು ಮಾಡಬಹುದೆಂದು ನೋಡುತ್ತಿದ್ದೆವು, ನಿಧಾನವಾಗಿ ಅವನು ಅದನ್ನು ಪ್ರಯೋಗಿಸಿದ್ದ. ಗುಂಪಿನ ಮಧ್ಯೆ ಅದು ಯಾರಿಗೋ ಬಡಿಯಿತು, ಯಾರೋ ಏನೋ ಮಾಡಿದರು ಎಂದು ಎಲ್ಲರೂ ಗಾಬರಿಯಾಗಿ ನೋಡುತ್ತಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ