Advertisement

Tag: ರಂಜಾನ್ ದರ್ಗಾ

ಅವರು ನನ್ನ ಕಣ್ಣಲ್ಲಿ ಹನಿಯಾದರು: ರಂಜಾನ್ ದರ್ಗಾ ಸರಣಿ

ಒಂದು ಸಲ ಒಬ್ಬ ಗಿರಾಕಿ ಬಂದ. ಆಗ ನಾವು ಬಾಗಿಲ ಬಳಿ ನಿಂತಿದ್ದೆವು. ಅವನು ಏನೋ ಮಾತನಾಡುತ್ತ ‘ನಿಮ್ಮ ಚಪ್ಪಲಿ ಚೆಂದ ಅದಾವು’ ಎಂದು ಹೇಳಿದ. ಆಗ ಅವರು ‘ನೀನೇ ಕೊಡಿಸಿದ್ದು’ ಎಂದು ಹೇಳಿದರು. ಅವನಿಗೆ ವಿಚಿತ್ರ ಎನಿಸಿತು. ಅವನಿಗೆ ಇನ್ನೂ ವಿಚಿತ್ರ ಎನಿಸಿ ಗಾಬರಿಯಾದ. ‘ನಿಮಂಥ ಗಿರಾಕಿಗಳು ನಮ್ಮ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡಿದಾಗ. ಇದೆಲ್ಲ ದಕ್ಕಿದ್ದು’ ಎಂದು ಮಾಮಾ ಹೇಳಿದಾಗ ಅವನಲ್ಲಿ ಹೆಮ್ಮೆ ಮೂಡುವ ಬದಲು ಕೃತಜ್ಞತಾ ಭಾವ ಮೂಡಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಕೇವಲ ಮನುಷ್ಯ; ಸುಬ್ಬಣ್ಣ ರಂಗನಾಥ ಎಕ್ಕುಂಡಿ: ರಂಜಾನ್ ದರ್ಗಾ ಸರಣಿ

ಮನುಷ್ಯತ್ವಕ್ಕೆ ಸಮಾನಾಗುವ ಮಾರ್ಕ್ಸ್ ಆಗಲಿ, ಮಧ್ವಾಚಾರ್ಯ ಆಗಲಿ ಅವರಿಗೆ ಬೇರೆಯಾಗಿ ಕಾಣುವುದಿಲ್ಲ. ಅದ್ವೈತವು ಅಂತಿಮ ಸತ್ಯವಾದರೆ ದ್ವೈತವು ದೈನಂದಿನ ವಾಸ್ತವವಾಗಿದೆ. ಅಂತಿಮ ಸತ್ಯಕ್ಕೆ ಶರಣಾಗುವುದು ಕಷ್ಟಕರವಾದುದಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 73ನೇ ಕಂತು ನಿಮ್ಮ ಓದಿಗೆ

Read More

ನಾಗೇಶ ಹೆಗಡೆ ಎಂಬ ವಿಸ್ಮಯ: ರಂಜಾನ್ ದರ್ಗಾ ಸರಣಿ

ವಿಜ್ಞಾನದ ಆಳವಾದ ಜ್ಞಾನದ ಜೊತೆಗೆ ಸಮಾಜವಿಜ್ಞಾನ, ಅರ್ಥವಿಜ್ಞಾನ, ಮನೋವಿಜ್ಞಾನ, ಪರಿಸರವಿಜ್ಞಾನ, ಕೃಷಿವಿಜ್ಞಾನ, ಭಾಷಾವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಕೂಡ ಅವರ ತಿಳಿವಳಿಕೆ ಮೆಚ್ಚುವಂಥದ್ದು. ಈ ಎಲ್ಲ ಕ್ಷೇತ್ರಗಳ ಜ್ಞಾನದ ಮೂಲಕ ವಿಜ್ಞಾನದ ಜೊತೆಗೆ ಮಾನವನ ಅಭ್ಯುದಯದ ಸಂಬಂಧ ಕಲ್ಪಿಸುವಿಕೆ ಅವರಿಗೆ ಪ್ರಿಯವಾದುದು. ಹೀಗೆ ಹತ್ತಾರು ಆಯಾಮಗಳ ಮೂಲಕ ಅವರು ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಾರೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಹೀಗಿದ್ದರು ನಮ್ಮ ಕೆ.ಎಚ್. ರಂಗನಾಥ: ರಂಜಾನ್ ದರ್ಗಾ ಸರಣಿ

ಅವರಿಗೆ ಸ್ವಂತ ಕಾರು ಇರಲಿಲ್ಲ. ಅವರ ಮಕ್ಕಳು ಸರ್ಕಾರಿ ಕಾರಿನಲ್ಲಿ ಎಂದೂ ಶಾಲೆಗೆ ಹೋಗಲಿಲ್ಲ. ನಾನು ಸೇರಿದ ಒಂದು ವರ್ಷದಲ್ಲಿ ಅವರು ಒಂದು ಸೆಕೆಂಡ್ ಹ್ಯಾಂಡ್ ಅಂಬಾಸಿಡರ್ ಕಾರು ಕೊಂಡರು. ಆಗ ಅವರ ಮನೆಮಂದಿಯೆಲ್ಲ ಸಂಭ್ರಮಪಟ್ಟಿದ್ದು ಇಂದಿಗೂ ನೆನಪಿದೆ. ಅನೇಕ ವರ್ಷಗಳಿಂದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದ ಅವರು ಮೊದಲ ಬಾರಿಗೆ ಕೊಂಡದ್ದು ಒಂದು ಹಳೆಯ ಕಾರನ್ನು!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ರಾಜಾ ಶೈಲೇಶಚಂದ್ರ ಗುಪ್ತ- ಕರ್ತವ್ಯನಿಷ್ಠೆಯ ಪ್ರತೀಕ: ರಂಜಾನ್ ದರ್ಗಾ ಸರಣಿ

ತಾವು ಸೇವೆ ಸಲ್ಲಿಸುವ ಪತ್ರಿಕೆ ಮತ್ತು ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪತ್ರಿಕಾ ಮಾಲೀಕರ ಬಗ್ಗೆ ಅವರಿಗೆ ಅಪಾರವಾದ ಗೌರವ. ಅವರು ಮಾಲೀಕರಿಗೆ “ಖಾವಂದರು” ಎಂದು ಕರೆದಾಗ ನಾಕು ನಕ್ಕಿದ್ದೆ. ಮಾಲೀಕರು ಕೂಡ ಅವರನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ತಮಗಾದ ಅನ್ಯಾಯದ ಬಗ್ಗೆ ಅವರು ಎಂದೂ ಮಾಲೀಕರ ಮುಂದೆ ಉಸುರಲಿಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 70ನೇ ಕಂತು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ