ಸಮಾಜವಾದದ ಪ್ರೇರಣೆಗೊಂದು ಉದಾಹರಣೆ ಸೋವಿಯತ್‌ ರಷ್ಯಾ

ಸೋವಿಯತ್ ದೇಶಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಯುವಕರೆಲ್ಲ ಎರಡನೇ ಮಹಾಯುದ್ಧದ ನಂತರ ಜನಿಸಿದವರೇ ಆಗಿದ್ದರು. ಅವರಿಗೆ ೧೯೧೭ರ ಕ್ರಾಂತಿಯಾಗಲಿ, ೧೯೪೫ರಲ್ಲಿ ಕೊನೆಗೊಂಡ ಎರಡನೇ ಮಹಾಯುದ್ಧದ ಅನಾಹುತಗಳಾಗಲೀ ಅನುಭವಕ್ಕೆ ಬರಲು ಸಾಧ್ಯವೇ ಇಲ್ಲ. ಅವನ್ನೆಲ್ಲ ಅವರು ತಿಳಿದುಕೊಳ್ಳುವುದು ಹಿರಿಯರ ಅನುಭವದಿಂದ, ಇತಿಹಾಸದ ಪುಟಗಳಿಂದ. ಬಹುಪಾಲು ಯುವಕರು ಇದನ್ನೆಲ್ಲ ಅರಿತರೂ ಐರೋಪ್ಯ ದೇಶಗಳ ಜನರ ಮತ್ತು ಅವರು ಬಳಸುವ ವಸ್ತುಗಳ ಸಂಪರ್ಕದಿಂದ ಅವರ ಮನಸ್ಸು ಕ್ರಮೇಣ ಕೊಳ್ಳುಬಾಕ ಸಂಸ್ಕೃತಿಯ ಕಡೆಗೆ ವಾಲತೊಡಗಿತು. ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ ೫೦ನೇ ಕಂತು ಇಲ್ಲಿದೆ.

Read More