ಮಳೆ ದೇವರು ಬರೆದ ಕವಿತೆ..

ಮಳೆಯು ಮಳೆಗಾಲವನು ತೊರೆದಿದೆ. ಈಗ ಎಲ್ಲಾ ತಿಂಗಳಲ್ಲಿ ಆತ ಒಮ್ಮೆಯಾದರೂ ಇಣುಕುವ ಅತಿಥಿ. ಅಲ್ಲೆಲ್ಲೊ ಸಮುದ್ರದ ಮೇಲೆ ಆಗಾಗ್ಗೆ ನೂರೆಂಟು ಭಾರಗಳು. ಮಳೆಗೆ ಅಲ್ಲಲ್ಲಿ ಎಕ್ಸ್ಟ್ರಾ ಡ್ಯೂಟಿ. ತರಗತಿಯಲ್ಲಿ ನೋಡಿ ಮಕ್ಕಳೇ ಕಾಲಗಳು ಮೂರು, ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಅಂದೆ. ಒಬ್ಬ ಪೋರ ಕಿಕೀಕ್ ಅಂತ ನಕ್ಕು ಹೇಳಿದ “ಬಿಸಿಲು ಇದ್ದಾಗ ಬರುತ್ತೆ ಚಳಿ‌ ಇದ್ದಾಗಲೂ ಬರುತ್ತಲ್ಲ” ಅಂತ. “ಹೌದು ಮಳೆಗೆ ಈಗ ವಿಶೇಷ ಸೀಸನ್ ಪಾಸ್ ಸಿಕ್ಕಿದೆ” ಎಂದೆ. ಹೇಳು ಮಳೆಯೆ ಮಕ್ಕಳ ಮುಂದೆ ಹೀಗೆ ನೀನು ಅವಮಾನಿಸುವುದು ಸರಿಯೇ..?
ಸದಾಶಿವ್ ಸೊರಟೂರು ಬರಹ

Read More