Advertisement

Tag: ಸಹ್ಯಾದ್ರಿ ನಾಗರಾಜ್

ಮರೆಯಲಾಗದ ಆ ನಾಲ್ಕು ರಾತ್ರಿಗಳು

ಹಗಲಿನಲ್ಲಿ ಎಲ್ಲೆಲ್ಲೋ ಹಂಚಿಹೋಗಿದ್ದ ಇವರನ್ನೆಲ್ಲ ಹೀಗೆ ಒಂದೇ ಸೂರಿನಡಿ ಸೇರಿಸಿದ್ದ ಇರುಳು ಎಷ್ಟೊಂದು ಬಲಶಾಲಿ ಅಂದುಕೊಳ್ಳುತ್ತಲೇ ಸಣ್ಣಗೆ ತೂಕಡಿಕೆ. ಅಲ್ಯಾರೋ ಕೆಮ್ಮಿದ ಸದ್ದು. ಮತ್ಯಾರೋ ಮಗುವನ್ನು ತಟ್ಟಿದ ಸಪ್ಪಳ. ಇನ್ಯಾರೋ ಯಾರಿಗೋ ಗದರಿದ ದನಿ. ಮಧ್ಯೆ-ಮಧ್ಯೆ ಹೆಗ್ಗಣಗಳ ಓಡಾಟ. ಅಪರೂಪಕ್ಕೆ ರೈಲಿನ ಕೂಗು. ಮೈಕಿನ ಅನೌನ್ಸ್‌ಮೆಂಟು… ಎಲ್ಲವೂ ಬೇರಾವುದೋ ಲೋಕದ್ದು ಎನ್ನುವಂಥ ಮಂಪರು. ಮುಂಜಾನೆ ಎಚ್ಚರಾದಾಗ ಪಕ್ಕದಲ್ಲೇ ಹಮಾಲಿ ಮಂದಿಯ ಗುಂಪೊಂದು ಸೇರಿತ್ತು.

Read More

ಕ್ಲಾಸ್‌ಮೇಟ್ಸುಗಳ ಮಕ್ಕಳು ಮತ್ತು ಫಯಾಜ್‌ನ ಪುಲಾವು

‘ಮದುವೆಯಾದ ನಂತರ ಗಂಡು ಅಡುಗೆ ಮಾಡುವುದು ಅವಮಾನ, ಅದೇನಿದ್ದರೂ ಹೆಂಡತಿಯ ಕೆಲಸ’ ಎಂಬ ಅರೆಬೆಂದ ಅಲಿಖಿತ ಕಟ್ಟುಪಾಡೊಂದು ಉಂಟಲ್ಲ, ಅದು ಮೌಢ್ಯ. ಮದುವೆಯಾದ ನಂತರವೂ ಅಡುಗೆ ಕೆಲಸಗಳನ್ನು ಮಾಡುವುದು ಖಂಡಿತ ಅವಮಾನದ ಸಂಗತಿಯಲ್ಲ. ಬದಲಿಗೆ, ಪ್ರೀತಿ ಹೆಚ್ಚಿಸುವ ಸಂಗತಿ. ಕುಟುಂಬವೊಂದು ಹೀಗಿದ್ದಾಗ, ಅದು ಮಕ್ಕಳ ಯೋಚನಾ ಲಹರಿಯ ಮೇಲೂ ಪರಿಣಾಮ ಬೀರುತ್ತದೆ.  ಅಪ್ಪನ ಈ…

Read More

ಆಕ್ಸಿಡೆಂಟಿನ ಆಲದಮರ ಮತ್ತು ತೇಜಸ್ವಿಯ ‘ಮಾಯಾಮೃಗ’

ಗೆಳೆಯರೆಲ್ಲ ಸೇರಿ ಏನೇನೋ ಸವಾಲು ಹಾಕಿಕೊಂಡು, ಅವರಲ್ಲಿ ಇಬ್ಬರು ಸ್ಮಶಾನಕ್ಕೆ ಹೋಗುವುದು, ದೆವ್ವ ಗೆಳೆಯನ ವೇಷ ಧರಿಸಿ ಬಂದರೆ ಪತ್ತೆ ಮಾಡಲೆಂದು ಕೋಡ್‌ವರ್ಡ್ ನಿಕ್ಕಿ ಮಾಡಿಕೊಳ್ಳುವುದು, ನಂತರ ಆಗುವ ಅವಾಂತರಗಳು, ಬೂದಿಯಲ್ಲಿ ಮುಳುಗೆದ್ದ ಕಜ್ಜಿ ನಾಯಿಯೊಂದು ಫಾಲೋ ಮಾಡುವುದು, ಧೈರ್ಯವಂತನೊಬ್ಬ ಸವಾಲು ಸ್ವೀಕರಿಸಿ ಮಧ್ಯರಾತ್ರಿಯಲ್ಲಿ ಸುಡುಗಾಡಿಗೆ ಹೋಗಿ, ಗುರುತಿಗೆಂದು ಗೂಟ ಬಡಿಯುವಾಗ ತನ್ನ ಬಟ್ಟೆಯನ್ನೂ ಸೇರಿಸಿ ಬಡಿದು…

Read More

ಗೋಡೆಯಿಂದ ಹಾರಿದ ಹಾವುಗಳು ಮತ್ತು ಗೋಡೆಗಂಟಿದ ಮನುಷ್ಯರು

ಊರಿನ ಪ್ರತಿ ಬೀದಿಯನ್ನೂ ಅಲಂಕರಿಸಿದ್ದ ಹೊಗೆಸೊಪ್ಪಿನ ಬ್ಯಾರಲ್‌ಗಳ ಪೈಕಿ ವರ್ಷಕ್ಕೆ ಒಂದಾದರೂ ಬೆಂಕಿಯೊಳಗೆ ಕುಣಿಯುವುದು ಕಾಯಂ ಆದಮೇಲೆ, ಅವುಗಳನ್ನು ಊರಿಂದ ಆಚೆ ಹಾಕುವ ಮಹಾ ಸಂಚಿಕೆಗಳು ಶುರುವಾದವು. ಫಯರ್ ಆಫೀಸಿನವರ ಎಚ್ಚರಿಕೆಗಳು, ಪೊಲೀಸಿನವರ ಖಾರದ ಮಾತು, ಬ್ಯಾರಲ್ ಸುತ್ತಮುತ್ತಲ ಮನೆಗಳ ಮಂದಿಯ ತಕರಾರುಗಳ ಫಲವಾಗಿ ಬಹುತೇಕ ಬ್ಯಾರಲ್‌ಗಳು ಸದ್ದಿಲ್ಲದಂತೆ ಊರಿಂದ ಆಚೆ ನಡೆದವು. ಹಾಗಂತ ಸಮಸ್ಯೆಗಳೂ ಊರಾಚೆ ನಡೆದು ಹೋದವು ಎನ್ನುವ ಹಾಗಿಲ್ಲ. ‘ಸೊಗದೆ’ ಅಂಕಣದಲ್ಲಿ ಸಹ್ಯಾದ್ರಿ ನಾಗರಾಜ್  ಹೊಗೆಸೊಪ್ಪು ಬ್ಯಾರಲ್ ಗಳ ಕುರಿತು ಬರೆದಿದ್ದಾರೆ. 

Read More

ಕಳ್ಳರ ಸಹವಾಸದಲ್ಲಿ ಕಳೆದ ಎರಡು ಸಾಹಸಿ ದಿನಗಳು

ಮೊಬೈಲ್ ಕಳ್ಳನನ್ನು ಬೆನ್ನತ್ತಿದ ತಕ್ಷಣ ಅದೆಲ್ಲ ನೆನಪಾಗಿ, ನಾನೊಬ್ಬ ಖೋ ಖೋ ಆಟದ ರೈಡರ್ ಆಗಿ ಬದಲಾಗಿಬಿಟ್ಟಿದ್ದೆ. ಆತ, ಎಡ-ಬಲ ತಡಕುತ್ತ, ಹೊಯ್ದಾಡುತ್ತ ಒಂದೇ ಸಮ ಓಡುತ್ತಿದ್ದ; ನಾನು ಅವನನ್ನಷ್ಟೇ ದಿಟ್ಟಿಸುತ್ತ ನೇರದಿಕ್ಕಿನಲ್ಲಿ ಓಡುತ್ತಿದ್ದೆ. ಇಬ್ಬರ ವೇಗವೂ ನೂರು ಮೀಟರ್ ಓಟಗಾರರ ವೇಗದಷ್ಟೇ ಇತ್ತು. ಇನ್ನೂರೈವತ್ತು ಮೀಟರ್ ಓಡಿರಬಹುದು. ಕಳ್ಳ ಓಡುತ್ತಲೇ ಹಿಂದಕ್ಕೊಮ್ಮೆ ತಿರುಗಿನೋಡಿದ. ಆತನ ಮೊಗದಲ್ಲಿ ಭಯ ಕಡಿಮೆ ಆದಂತಿತ್ತು.
-‘ಸೊಗದೆ’ ಅಂಕಣದಲ್ಲಿ ಕಳ್ಳರ ಚಮತ್ಕಾರಗಳನ್ನು ಬರೆದಿದ್ದಾರೆ ಸಹ್ಯಾದ್ರಿ ನಾಗರಾಜ್

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ